Click here to Download MyLang App

ನವ ಜೀವಗಳು (ಇಬುಕ್)

ನವ ಜೀವಗಳು (ಇಬುಕ್)

e-book

ಪಬ್ಲಿಶರ್
ನವೀನ ಗಂಗೋತ್ರಿ
ಮಾಮೂಲು ಬೆಲೆ
Rs. 149.00
ಸೇಲ್ ಬೆಲೆ
Rs. 149.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಪ್ರಕಾಶಕರು: ಛಂದ ಪುಸ್ತಕ

Publisher: Chanda pusthaka

 

ಖ್ಯಾತ ಇತಿಹಾಸ ತಜ್ಞ ವಿಲಿಯಂ ಡಾಲ್ರಿಂಪಲ್ ಕೃತಿಯನ್ನು ನವೀನ್ ಗಂಗೋತ್ರಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಯ ಕುರಿ ನ್ಯೂಜೆರ್ಸಿಯ ಕನ್ನಡತಿ ಮೀರಾ ಪಿ ಆರ್ ಹೀಗೆ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ:

ಶ್ರದ್ಧೆಯ ಆಳವನ್ನು, ಅದಕ್ಕೂ ಮಿಗಿಲಾದ ಮನುಷ್ಯ ಜೀವನದ ವೈಪರೀತ್ಯ, ವೈಚಿತ್ರ್ಯಗಳನ್ನು ಅರ್ಥ ಮಾಡಿಕೊಳ್ಳುವುದಾದರೂ ಹೇಗೆ? ಹಲವು ವಿಭಿನ್ನ ಧರ್ಮ-ಮತ-ಜಾತಿ-ಪಂಗಡಗಳಲ್ಲಿ ಬದುಕುತ್ತಿರುವ ಇಂದಿನ ಆಧುನಿಕ ಭಾರತದ ಜನಜೀವನದಲ್ಲಿ ನೂರಾರು, ಸಾವಿರಾರು ವರ್ಷಗಳ ಪರಂಪರೆಯಿರುವ ಶ್ರದ್ಧೆ, ದರ್ಶನ, ನಂಬಿಕೆಗಳ ಹಾದಿಗಳಿವೆ. ಬಹುರೂಪಿ ದೇವತೆಗಳ ಆರಾಧನೆಯಲ್ಲೇ ಏಕದೈವೋಪಾಸನೆಯನ್ನು ಒಪ್ಪಿಕೊಂಡ ಹಾಗೆಯೇ ದೈವದ ಕಲ್ಪನೆಯನ್ನೇ ಧಿಕ್ಕರಿಸಿ, ಬದುಕು ಎಲ್ಲಕ್ಕಿಂತ ದೊಡ್ಡದೆನಿಸಿಕೊಳ್ಳುವ ದರ್ಶನಕ್ಕೂ ಇಲ್ಲಿ ಜಾಗವಿದೆ. ಹಾಗೆಂದು ಹೆಮ್ಮೆಪಡುವ ಕ್ಷಣಗಳಲ್ಲೇ ಶ್ರದ್ಧೆಯ ಹೆಸರಿನಲ್ಲೆ ನಡೆವ ಮೌಢ್ಯದ, ಹಿಂಸೆಯ ಭಯಂಕರ ವಾಸ್ತವ ಚಿತ್ರಣಗಳು ಇಲ್ಲಿವೆ. ಈ ಹಿಂಸೆಯಲ್ಲಿ ಸಿಕ್ಕಿ ನರಳುವ ಅಮಾಯಕ ಜೀವಗಳಿಗೆ ಮತ್ತೆ ಆಸರೆಯಾಗುವ ಅಲ್ಲಲ್ಲಿನ ಪ್ರತಿಸಂಸ್ಕೃತಿಗಳೂ, ದರ್ಶನಗಳೂ ಕಾಲಾಂತರದಲ್ಲಿ ನಂಬಿಕೆಯ ಇನ್ನೊಂದು ಹಾದಿಯಾಗಿ ಅರಳುವ ಅಥವಾ ರೂಪಾಂತರವಾಗುವ ಚೋದ್ಯವಿದೆ. ಇಲ್ಲಿ ಯಾವುದೂ ಮೇಲ್ನೋಟಕ್ಕೆ ಕಾಣುವಷ್ಟು ಸರಳವೂ ಅಲ್ಲ, ಅಮಾಯಕವೂ ಅಲ್ಲ. ಈ ಎಲ್ಲ ಹಾದಿಗಳೂ ಆಯಾಯ ಬದುಕಿನ ಆ ಹೊತ್ತಿನ ಅನುಕೂಲಕ್ಕೆ ತೆರೆದುಕೊಂಡ ದಾರಿಗಳಷ್ಟೇ ಅಂದುಕೊಳ್ಳುವುದೂ ಸುಳ್ಳಾಗುತ್ತದೆ.

ಇಂದಿನ `ಸ್ಪಿರಿಚ್ಯುಯಲ್ ಇಂಡಿಯಾದ ಅಪರೂಪದ ಚಿತ್ರಣ’ ಎಂದೇ ಬಹು ಜನಗಳಿಂದ ಹೊಗಳಿಸಿಕೊಂಡಿರುವ ಈ ಪುಸ್ತಕವನ್ನು ಹಾಗೆಲ್ಲ ಅಂದುಕೊಳ್ಳದೆ ಓದಿದಾಗ ಮಾತ್ರ ಇನ್ನೂ ಹೆಚ್ಚು ಆಪ್ತವಾಗಬಲ್ಲದು. ಯಾಕೆಂದರೆ ಭಾರತೀಯ ಸಂಸ್ಕೃತಿಯ ಅರಿವು ಅಷ್ಟಾಗಿ ಇಲ್ಲದ ಓದುಗರಿಗಾಗಿಯೇ ಎಂಬ ಹಾಗೆ ಲೇಖಕ ಅಲ್ಲಲ್ಲಿ ಅತಿ ವಿಷದವಾಗಿಯೇ ಒದಗಿಸಿರುವ ಆಯಾಯ ಧರ್ಮಶ್ರದ್ಧೆಯ ಕುರಿತ ಪರಿಚಯಾತ್ಮಕ ವಿವರಣೆಗಳಿಗಿಂತ ಆ ಶ್ರದ್ಧೆಯ ಹಾದಿಯಲ್ಲಿ ಸಾಗುತ್ತಿರುವ ಜೀವಗಳ ಜೊತೆಗಿನ ಮಾತುಕತೆಯೇ ಆಧ್ಯಾತ್ಮಿಕ ಅನುಭೂತಿಗೂ ಮೀರಿದ ಜೀವನಪ್ರೀತಿಯ ಅಥವಾ ಈ ನಶ್ವರ ಬದುಕಿನ ಕ್ಷಣಭಂಗುರತೆಯ ಒಂದು ಸಣ್ಣ ಮಿಂಚನ್ನು ಅಲ್ಲಲ್ಲಿ ಆಯಾಚಿತವಾಗಿ ಕಟ್ಟಿಕೊಟ್ಟುಬಿಡುತ್ತದೆ. ಹೀಗಾಗಿಯೆ ಈ ಒಂಭತ್ತು ಜೀವಗಳ ಕಥೆಗಳನ್ನು ಹೇಳುವಾಗ ಲೇಖಕ ಕಥೆಗಾರ, ಕವಿ, ಇತಿಹಾಸಕಾರ, ರಾಜಕೀಯ ವಿಶ್ಲೇಷಣಾಕಾರ.... ಹೀಗೆಲ್ಲ ಬಹುರೂಪಗಳನ್ನು ಅಲ್ಲಲ್ಲಿ ಧರಿಸುತ್ತಲೇ ಉಳಿಯುತ್ತಾನೆ.

ನಮಗೆ ಪರಿಚಯವಿದ್ದೂ ಅಪರಿಚಿತವಾಗೇ ಉಳಿದಿರುವ ನಮ್ಮದೇ ಸಂಸ್ಕೃತಿಯ, ನಮ್ಮದೇ ಪರಂಪರೆಯ, ನಮ್ಮದೇ ಜನರ ಈ ಕಥೆಗಳನ್ನು ಈಗ ಕನ್ನಡದಲ್ಲೇ ಓದುವಂತೆ ಸೊಗಸಾಗಿ ಅನುವಾದಿಸಿ ಕೊಟ್ಟಿದ್ದಾರೆ, ಕನ್ನಡದ ಯುವ ಬರಹಗಾರ ನವೀನ ಗಂಗೋತ್ರಿ. 

 

ಮೀರಾ ಪಿ ಆರ್, ನ್ಯೂಜೆರ್ಸಿ

 

ಪುಟಗಳು: 350

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
ರಾಘವೇಂದ್ರ ರಾಯಲಪಾಡು

ಪುರಾತನ ಸಂಸ್ಕೃತಿ ಭಾರತೀಯ ಎಂದು ನಂಬಿದ್ದೆ. ಮೀರಾ ಅವರ ಅನಿಸಿಕೆ ಓದಿದ ಮೇಲೆ ನಂಬಿಕೆಯೂ ನಂಬದಿರುವುದೂ ಎರಡೂ ಒಂದೇ. ಅಲ್ಪ ತೃಪ್ತಿ ಅಥವಾ ಅಜ್ಞಾನ ಆನಂದ ಎಂದು ಅನಿಸುತ್ತಿದೆ. ವಿಶ್ವದಲ್ಲಿ ಇನ್ನೂ ಏನೇನಿದೆಯೋ! ಹೊಸ ಸಾಂಸ್ಕೃತಿಕ ಲೋಕವೊಂದನ್ನು ಕನ್ನಡದ ಜನರಿಗೆ ತಂದಿತ್ತ ನವೀನ್ ರು ಅಭಿನಂದನಾರ್ಹರು. ಅಭಿನಂದನೆಗಳು🎉🎊. ಪುಸ್ತಕ ಓದಿಲ್ಲ...