Click here to Download MyLang App

ಮುಖತಃ,  ಡಾ|| ಎನ್. ಗಾಯತ್ರಿ,  mukataha,  Mukhatah,  Dr. N. Gayathri,

ಮುಖತಃ (ಇಬುಕ್)

e-book

ಪಬ್ಲಿಶರ್
ಡಾ|| ಎನ್. ಗಾಯತ್ರಿ
ಮಾಮೂಲು ಬೆಲೆ
Rs. 150.00
ಸೇಲ್ ಬೆಲೆ
Rs. 150.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

 ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ಸಂದರ್ಶನಗಳು ಪತ್ರಿಕೆಯಲ್ಲೇ ಇರಲಿ, ಪುಸ್ತಕ ರೂಪದಲ್ಲೇ ಇರಲಿ, ಸಾಧಕರು ತೆರೆದ ಮನಸ್ಸಿನಿಂದ ತಮ್ಮ ಭಾವನೆ ಚಿಂತನೆ ಹಂಚಿಕೊಳ್ಳುವ, ನಾಟಕೀಯ ವಿನ್ಯಾಸದಲ್ಲಿರುವ ಕಾರಣದಿಂದ ಓದುಗರಿಗೆ ಇಷ್ಟವಾಗುತ್ತವೆ.

ಪ್ರಸ್ತುತ ಸಂದರ್ಶನ ಲೇಖನಗಳ ಸಂಕಲನವು ನಾಲ್ಕು ಕಾರಣಗಳಿಂದ ವಿಶಿಷ್ಟವಾಗಿದೆ.

ಮೊದಲನೆಯದಾಗಿ, ಇಲ್ಲಿನ ಸಂದರ್ಶನಗಳಿಗಿರುವ ಸೈದ್ಧಾಂತಿಕ ಚೌಕಟ್ಟಿನ ಕಾರಣದಿಂದ. ಇದೊಂದು ಸ್ತ್ರೀವಾದಿ ಮಾರ್ಕ್ಸಿಸ್ಟ್ ಚೌಕಟ್ಟು. ಹೆಚ್ಚಿನ ಸಂದರ್ಶನ ನೀಡುಗರು ಎಡಪಂಥೀಯರೂ ಮಹಿಳೆಯರೂ ಆಗಿರುವುದರಿಂದ ಇದು ಸಾಧ್ಯವಾಗಿದೆ. ಬಹುತೇಕ ಪ್ರಶ್ನೆ ಮತ್ತು ಉತ್ತರಗಳು ಈ ಚೌಕಟ್ಟಿನೊಳಗಿಂದಲೇ ಹೊಮ್ಮಿಬಂದಿವೆ. ಹೀಗಾಗಿ ಸಂಕಲನವು ತಾತ್ವಿಕ ಜಿಜ್ಞಾಸೆಯ ಸಂಪುಟವಾಗಿದೆ. ಈ ಜಿಜ್ಞಾಸೆಗೆ ಸಾಧಕರ ವೈಯಕ್ತಿಕ ಅನುಭವದ ಆಪ್ತತೆಯ ಅಂಚಿದೆ.

ಎರಡನೆಯದಾಗಿ, ಇಲ್ಲಿನ ಸಂದರ್ಶನಗಳು ಕಟ್ಟಿಕೊಡುತ್ತಿರುವ ಚರಿತ್ರೆಯ ಕಾರಣದಿಂದ. ಭಾರತದ ಅರ್ಧಶತಮಾನದ ಚಳುವಳಿಗಳ ಚರಿತ್ರೆಯೇ ಇಲ್ಲಿ ಮೈದೆರೆಯುತ್ತದೆ. ಕಳೆದೆರಡು ದಶಕಗಳಲ್ಲಿ ನಡೆದಿರುವ ವಿದ್ಯಮಾನಗಳ ಕನ್ನಡಿನೋಟವೂ ಸಿಗುತ್ತದೆ. ಹೀಗಾಗಿ ಇದೊಂದು ವಿಭಿನ್ನ ಪ್ರದೇಶ ಮತ್ತು ಕಾಲಘಟ್ಟಗಳಲ್ಲಿ ನಡೆದ ಜನಪರ ಚಳುವಳಿಗಳ ಸೋಲು-ಗೆಲುವಿನ ಚರಿತ್ರೆ. ಸಂದರ್ಶನ ಮತ್ತು ವ್ಯಕ್ತಿಚಿತ್ರಗಳ ಮೂಲಕ ಕಟ್ಟಿಕೊಳ್ಳುವ ಇಲ್ಲಿನ ಚರಿತ್ರೆ ಮಾನವೀಯ ಘಟನೆಗಳಿಂದ ಕೂಡಿದೆ.

ಮೂರನೆಯದಾಗಿ, ಚರಿತ್ರೆಯಲ್ಲಿ ನಡೆದುಹೋದ ವಿದ್ಯಮಾನಗಳನ್ನು ವರ್ತಮಾನದ ಕಠೋರ ವಾಸ್ತವದಲ್ಲಿ ಮತ್ತು ನಿಕಷದಲ್ಲಿ ಇಟ್ಟು ಮಾಡಲಾಗಿರುವ ವಿಮರ್ಶೆಯಿಂದ. ಇದೊಂದು ಬಗೆಯಲ್ಲಿ ಸಾಧಕರ ಹಾಗೂ ಅವರು ನಂಬಿದ ಸಿದ್ಧಾಂತ ಮತ್ತು ಮಾರ್ಗಗಳ ಸ್ವವಿಮರ್ಶೆಯೂ ಆಗಿದೆ.

ನಾಲ್ಕನೆಯದಾಗಿ, ಇಲ್ಲಿರುವ ಮುಂಗಾಣ್ಕೆಯ ಆಯಾಮದಿಂದ. ಸಂದರ್ಶನ ನೀಡಿರುವ ಬಹುತೇಕರು ಆಕ್ಟಿವಿಸ್ಟರು. ಸಮಾಜಕ್ಕಾಗಿ ಬಾಳನ್ನೇ ತೇದವರು. ಹೀಗಾಗಿ ಇಲ್ಲಿನ ಸೈದ್ಧಾಂತಿಕ ಚರ್ಚೆ ಕೇವಲ ಶೈಕ್ಷಣಿಕ ನೆಲೆಯಲ್ಲಿಲ್ಲ. ಕ್ರಿಯಾಚರಣೆಯ ನೆಲೆಯಲ್ಲೂ ಇದೆ. ಸಿದ್ಧಾಂತ, ವಾಸ್ತವ ಹಾಗೂ ಕ್ರಿಯೆಯ ನಡುವಣ ಬೆಸುಗೆ ಮತ್ತು ಬಿರುಕುಗಳನ್ನು ಸಾಧಕರು ತಮ್ಮ ಅನುಭವ ಮತ್ತು ಚಿಂತನೆಯ ಮೂಲಕ ಕಾಣಿಸಿರುವರು.

ಇಲ್ಲಿನ ಸಂದರ್ಶನಗಳು ಸಾಧಕರ ವ್ಯಕ್ತಿಚಿತ್ರಗಳೂ ಆಗಿವೆ. ಗೋವಿಂದ ಪಾನ್ಸರೆ, ಅನಸೂಯಮ್ಮ, ರಂಗನಾಯಕಮ್ಮ, ಪ್ರತಿಭಾ ರೇ, ಕೋಟೇಶ್ವರಮ್ಮ, ವಿಜಯಮ್ಮ ಅವರ ಅನುಭವ ಮತ್ತು ವ್ಯಕ್ತಿಚಿತ್ರಗಳು ವಿಶಿಷ್ಟವಾಗಿವೆ.

 

-ರಹಮತ್ ತರೀಕೆರೆ

 

ಪುಟಗಳು: 224

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)