ಲೇಖಕರು:
ಸಂಪಾದಕ: ಡಾ।। ನಾ. ಸೋಮೇಶ್ವರ
ಲೇಖಕ: ಎಂ. ಅಬ್ದುಲ್ ರೆಹಮಾನ್ ಪಾಷ
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಮೋಹನದಾಸ ಕರಮಚಂದ್ ಗಾಂಧಿ (ಅಕ್ಟೋಬರ್ 2, 1869 - ಜನವರಿ 30, 1948) ಸಹಸ್ರಮಾನದ ಮಾನವ. ಬಿಬಿಸಿ ನಡೆಸಿದ ಸಮೀಕ್ಷೆಯ ಅನ್ವಯ ಏಸು, ಐನ್ಸ್ಟೈನ್, ಕಾರ್ಲ್ ಮಾರ್ಕ್ಸ್ ಮುಂತಾದವರನ್ನು ಹಿಂದಕ್ಕಿಟ್ಟು ಪ್ರಥಮ ಸ್ಥಾನ ಪಡೆದ ಮಹಾತ್ಮ. ಸತ್ಯ, ಅಹಿಂಸೆ ಮತ್ತು ಸತ್ಯಾಗ್ರಹಗಳೆಂಬ ಮಹಾನ್ ಆಯುಧಗಳನ್ನು ಪರಿಣಾಮಕಾರಿಯಾಗಿ ಬಳಸಿ ಭಾರತಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟರು. ಆಸ್ಪೃಶ್ಯತೆಯನ್ನು ಹೋಗಲಾಡಿಸಲು ಭಾರತದ ಕೆಳವರ್ಗದವರನ್ನು ‘ಹರಿಜನ’ ಎಂದು ಕರೆದು ಉನ್ನತ ಸ್ಥಾನವನ್ನು ನೀಡಿದರು. ಅಪ್ಪಟ ಸಸ್ಯಾಹಾರವನ್ನು ಪ್ರಚಾರ ಮಾಡಿದ ಗಾಂಧೀಜಿ ಉಪವಾಸ ಹಾಗೂ ಮೌನದ ಮಹತ್ವವನ್ನು ಸಾರಿದರು. ಭಾರತೀಯರು ಗಾಂಧಿಯನ್ನು ‘ಬಾಪು’ ಎಂದು, ‘ರಾಷ್ಟ್ರಪಿತ’ ಎಂದು ಕರೆದರು. ಈ ಪುಸ್ತಕದಲ್ಲಿ ಮಹಾತ್ಮ ಗಾಂಧಿಯನ್ನು ಲೇಖಕರು ಸೊಗಸಾಗಿ ಪರಿಚಯ ಮಾಡಿಕೊಟ್ಟಿದ್ದಾರೆ.
ಪುಟಗಳು: 48
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !