Click here to Download MyLang App

ಮಹಾಬಲೇಶ್ವರ ರಾವ್,  ಮರಿ ಕುದುರೆಯ ಮೈಸೂರು ಕನಸು,    ಕ್ಲಿಂಗ್ ಜಾನ್ಸನ್,  Mari Kudureya Mysuru Kanasu,  Mahabaleshwara Rao,  King Johnson,  Dr. Mahabaleshwara Rao,

ಮರಿ ಕುದುರೆಯ ಮೈಸೂರು ಕನಸು (ಇಬುಕ್)

e-book

ಪಬ್ಲಿಶರ್
ಡಾ|| ಮಹಾಬಲೇಶ್ವರ ರಾವ್
ಮಾಮೂಲು ಬೆಲೆ
Rs. 90.00
ಸೇಲ್ ಬೆಲೆ
Rs. 90.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಲೇಖಕರು:


ಕ್ಲಿಂಗ್ ಜಾನ್ಸನ್

ಕನ್ನಡ ರೂಪಾಂತರ ಡಾ|| ಮಹಾಬಲೇಶ್ವರ ರಾವ್

 

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications 

 

ಈ ಕಾದಂಬರಿಯ ವೈಶಿಷ್ಟ್ಯವೆಂದರೆ ಕಥೆಯ ನಾಗಾಲೋಟ. ಉದಕಮಂಡಲದಿಂದ ಪ್ರಾರಂಭವಾದ ಮರಿ ಕುದುರೆ ಕ್ಲೀಯ ಕನಸಿನ ಪಯಣ ಮರಳಿ ಉದಕಮಂಡಲಕ್ಕೆ ಹೊರಡುವ ತನಕ ಶರವೇಗದಲ್ಲಿ ಸಾಗುತ್ತದೆ. ಈ ಪಯಣದಲ್ಲಿ ಅಗ್ನಿಶಾಮಕ ದಳದವರು, ಕಾಳಿಂಗ ಸರ್ಪಗಳು, ಬೀರಪ್ಪನ್ ಹಾಗೂ ಅವನ ಸಹಚರರು, ಸುಭದ್ರಾ ಎಂಬ ಆನೆ, ಕಾಡಿನ ಅಧಿಕಾರಿಗಳು, ಹೇಸರಗತ್ತೆಗಳು, ಮೈಸೂರು ಅರಮನೆ, ಅಲ್ಲಿನ ರಾಜ ಸೇವಕರು, ರಾಜ, ರಾಣಿ, ರಾಜಮಾತೆ, ನಗರದ ರಸ್ತೆಗಳು, ದಸರೆಯ ಉತ್ಸವ ಹಾಗೂ ಜನಸಾಗರ ಎಲ್ಲವೂ ಪಾತ್ರಗಳಾಗಿ ಬಂದುಹೋಗುತ್ತವೆ.

ವಿಶೇಷ ಸಂಗತಿ ಎಂದರೆ ‘ಪಂಚತಂತ್ರ’ದ ಕತೆಗಳ ಹಾಗೆ ಈ ಕಾದಂಬರಿಯಲ್ಲಿ ಬರುವ ಎಲ್ಲ ಪ್ರಾಣಿ ಪಕ್ಷಿಗಳು ತಮ್ಮ ತಮ್ಮಲ್ಲಿ ಮಾತನಾಡುವುದರ ಜೊತೆಗೆ ಮನುಷ್ಯರ ಜೊತೆಗೂ ಮಾತನಾಡುತ್ತವೆ; ಮನುಷ್ಯರೂ ಈ ಪ್ರಾಣಿಗಳ ಜೊತೆ ಪ್ರೀತಿ ಸ್ನೇಹದಿಂದ ಮಾತನಾಡುತ್ತಾರೆ. ಬಹಳ ಮುಖ್ಯವಾದ ಸಂಗತಿ ಎಂದರೆ ಇಂದು ಮನುಷ್ಯರಲ್ಲಿ ಬಹಳ ವಿರಳವಾಗಿರುವ ಪ್ರೀತಿ ಸ್ನೇಹ ಮತ್ತು ಸಹಕಾರ ಈ ಕಾದಂಬರಿಯಲ್ಲಿನ ಪ್ರಾಣಿಗಳಲ್ಲಿ ಎದ್ದುಕಾಣುತ್ತದೆ. ಆನೆಯಾಗಲಿ, ಸಿಂಹವಾಗಲಿ, ಸರ್ಪವಾಗಲಿ ಇಲ್ಲಿ ದ್ವೇಷವನ್ನು ಕಾರುವುದಿಲ್ಲ. ಬದಲಾಗಿ ಒಂದು ಇನ್ನೊಂದರ ಜೊತೆ ಪೂರ್ಣ ಮನಸ್ಸಿನಿಂದ ಸಹಕರಿಸುತ್ತದೆ. ಪ್ರಾಯಃ ಈ ಮೌಲ್ಯವನ್ನು ನಾವು ಮನುಷ್ಯರು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಕಾದಂಬರಿಕಾರರು ಸೂಚಿಸುತ್ತಿರುವಂತಿದೆ. ಸಂಕಲ್ಪ ಬಲ, ಕಠಿಣ ಪರಿಶ್ರಮ, ಎಡರುತೊಡರುಗಳನ್ನು ಎದುರಿಸುವ ಛಾತಿಯಿದ್ದರೆ ಕಂಡ ಕನಸುಗಳನ್ನು ನನಸು ಮಾಡಬಹುದು, ಇಲ್ಲಿ ಯಾವುದೂ ಅಸಾಧ್ಯವಲ್ಲವೆಂದು ಕಾದಂಬರಿಕಾರರು ಈ ಕಾದಂಬರಿಯ ಮುಖೇನ ಬೊಟ್ಟಿಟ್ಟು ತೋರುತ್ತಿದ್ದಾರೆ ಎಂದು ಭಾಸವಾಗುತ್ತದೆ.

 

- ಮಹಾಬಲೇಶ್ವರ ರಾವ್

 

ಪುಟಗಳು: 104

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

 

Customer Reviews

Based on 3 reviews
33%
(1)
67%
(2)
0%
(0)
0%
(0)
0%
(0)
ಪವಿತ್ರ ನಾಯ್ಕ
ಪ್ರಾಣಿ ಪ್ರಪಂಚದ ಮನಸ್ಸುಗಳಿಗೊಂದು ಮನುಷ್ಯ ಲೋಕದ ಧ್ವನಿ - ಮರಿ ಕುದುರೆಯ ಮೈಸೂರು ಕನಸು

ಪ್ರಾಣಿ ಪ್ರಪಂಚದ ಮನಸ್ಸುಗಳಿಗೊಂದು ಮನುಷ್ಯ ಲೋಕದ ಧ್ವನಿ - ಮರಿ ಕುದುರೆಯ ಮೈಸೂರು ಕನಸು

ಈ ಪ್ರಕೃತಿಯ ಪುಟ್ಟ ಭಾಗವಾದ ಮನುಷ್ಯ ಮಾತ್ರದ ನಾವು ಮುಖ್ಯ ಪಾತ್ರವನ್ನು ತೊಟ್ಟು ನಿಂತಿದ್ದೇವೆ. ಈ ಲೆಕ್ಕವನ್ನೆಲ್ಲಾ ಮರಿ ಕುದುರೆ ಕ್ಲೀ ಉಲ್ಟಾ ಮಾಡಿಬಿಡ್ತಾನೆ. ಪುಸ್ತಕದ ಹಾಳೆಗಳನ್ನ ತಿರುವಿದ ಹಾಗೆ ಕ್ಲೀ ನಮ್ಮ ಹೀರೋ ಆಗ್ತಾನೆ.

ಕಥೆಯಲ್ಲಿ ಬರುವ ಸುಮಾರಷ್ಟು ಪಾತ್ರಗಳ ಹೆಸರು ಪರಿಚಿತವಾದ್ದರಿಂದ ಒಂದೊಂದು ಹೆಸರನ್ನ ಓದಿದಾಗಲೂ ಮುಖದಲ್ಲೊಂದು ಮುಗುಳುನಗೆ ಮಿಂಚುತ್ತಿತ್ತು. ಪರಿಚಿತ ಜನರ ಅಪರಿಚಿತ ಕತೆಗಳನ್ನು ಕೇಳಿದಂತ ಅನುಭವದ ಜೊತೆಗೆ ದೂರದ ಊರುಗಳಾದ ಊಟಿ, ಮದುಮಲೈ, ಮೈಸೂರು ನಮ್ಮದೇ ಊರು ಅನ್ನುವಷ್ಟು ಆಪ್ತವೆನಿಸುವ ಹಾಗೆ ಪುಸ್ತಕ ಅಕ್ಷರಗಳು ಚಿತ್ರ ಕಟ್ಟಿಕೊಟ್ಟವು.

ಮುಖ್ಯವಾಗಿ ಗಮನಿಸಬೇಕಾದ್ದು ಇಲ್ಲಿ ಬರುವ ಪ್ರಾಣಿಗಳ ಸಂಭಾಷಣೆ, ಅವುಗಳ ನಡುವಿನ ಸ್ನೇಹ, ಪ್ರೀತಿ, ಸಹಬಾಳ್ವೆ, ಕ್ಲೀಯ ಕನಸು ಮತ್ತದನ್ನು ನನಸಾಗಿಸುವ ಪರಿ ಪ್ರಾಣಿ ಪ್ರಪಂಚವನ್ನು ಸೂಕ್ಷ್ಮವಾಗಿ ಅವಲೋಕಿಸುವಂತೆ ಮಾಡುತ್ತದೆ. ಸುಭದ್ರಾ ಆನೆ, ಮರಿ ಕುದುರೆ, ಹೆರಾಲ್ಡ್ ರ ಸಾಹಸಗಳು ಸ್ಪೂರ್ತಿದಾಯಕವಾಗಿವೆ.

ಇನ್ನೂ ಒಂದು ವಿಶೇಷವೆಂದರೆ ಈ ಪುಸ್ತಕದ ಓದು ಮಕ್ಕಳಿಗೆ ಮನರಂಜನೆ ಕೊಟ್ಟರೆ ಕಾಣೆಯಾದ ಮಗುವಿನ ಮನಸ್ಸನ್ನು ಹುಡುಕುತ್ತಿರುವ ನಮ್ಮೆಲ್ಲರಿಗೆ ಮನರಂಜನೆಯ ಜೊತೆಗೆ ಕಣ್ಣರಳಿಸಿ ಪ್ರಾಣಿ ಪ್ರಪಂಚದ ಸೊಬಗನ್ನು ನೋಡುವಂತಾಗಿಸುತ್ತದೆ.

ಮೈಸೂರ ಕನಸು ಕಂಡ ಊಟಿಯ ಮರಿ ಕುದುರೆ ಕ್ಲೀಯನ್ನು ಅಕ್ಷರದ ಮೂಲಕ ನಮಗೆ ಪರಿಚಯಿಸಿದ ಲೇಖಕ ಕ್ಲಿಂಗ್ ಜಾನ್ಸನ್ ಹಾಗೂ ಕನ್ನಡಕ್ಕೆ ರೂಪಾಂತರಿಸಿದ ಡಾ|| ಮಹಾಬಲೇಶ್ವರ ರಾವ್ ಇವರಿಗೆ ಧನ್ಯವಾದಗಳು ಹಾಗೂ ಅಭಿನಂದನೆಗಳು. ಓದುಗರ ಮನಸ್ಸನ್ನು ಸೂರೆಗೊಂಡಿರುವ ಮರಿ ಕುದುರೆ ಮೈಸೂರು ಕನಸಿನ ಲೇಖಕ ಕ್ಲಿಂಗ್ ರ ಲೇಖನಿಯಿಂದ ಮತ್ತಷ್ಟು, ಮಗದಷ್ಟು ಪುಸ್ತಕಗಳು ಬೆಳಕಿಗೆ ಬರಲಿ. 

R
Raghavendra
ಮರಿ ಕುದುರೆಯ ಜೊತೆ ಜೊತೆಗೆ ಒಂದು ಪಯಣ....🐎🐘🛕⛺🎪🎡🎠🚑

ಕಿಂಗ್ಸ್ ಜಾನ್ಸನ್ ಅವರ ಕಾದಂಬರಿಯನ್ನು ರೂಪಾಂತರಿಸಿದ ಲೇಖಕ ಡಾ. ಮಹಾಬಲೇಶ್ವರ ರಾವ್ ಅವರ ಮರಿ ಕುದುರೆಯ ಮೈಸೂರು ಕನಸು ‘ಪಂಚತಂತ್ರ’ದ ಕತೆಗಳ ಹಾಗೆ ಪ್ರೀತಿ ,ಸ್ನೇಹ ಮತ್ತು ಸಹಕಾರ ಈ ಕಾದಂಬರಿಯಲ್ಲಿ ಎದ್ದುಕಾಣುತ್ತದೆ. ಕಠಿಣ ಪರಿಶ್ರಮದಿಂದ ಕಂಡ ಕನಸುಗಳನ್ನು ನನಸು ಮಾಡಬಹುದು ಹಾಗು ಇಲ್ಲಿ ಯಾವುದೂ ಅಸಾಧ್ಯವಲ್ಲವೆಂದು ಭಾಸವಾಗುತ್ತದೆ. ಪುಸ್ತಕ ಕುದುರೆಯ ಪ್ರಯಾಣವನ್ನು ಬಹಳ ಚಂದವಾಗಿ ಬಣ್ಣಿಸುತ್ತದೆ.ಈ ಕಥೆ ದೊಡ್ಡವರಿಗೂ ಸೂಕ್ತ.

ಮಹಾಶ್ವೇತಾ
ಮಕ್ಕಳಿಗಷ್ಟೇ ಅಲ್ಲ ಕ್ಲೀ ಕುದುರೆ ಕಥೆ

Harry Potter, Little Prince ತರದ ಎಷ್ಟೋ ಮಕ್ಕಳಿಗಾಗಿ ಬರೆದ ಕಥೆಗಳು ದೊಡ್ಡವರಿಗೂ ಸೂಕ್ತ.
ಮರಿ ಕುದುರೆಯ ಮೈಸೂರು ಕನಸು ಅಂತ ವಿಭಾಗಕ್ಕೆ ಸೇರುತ್ತದೆ. ಅನುವಾದಿತ ಕಥೆ ಪುಸ್ತಕ ಕುದುರೆಯ ಪ್ರಯಾಣವನ್ನು ರಸವತ್ತಾಗಿ ಬಣ್ಣಿಸುತ್ತದೆ. ಪಾತ್ರಗಳ ಹೆಸರು ಬಹಳ ವಿಶೇಷವಾಗಿದೆ. ಕ್ಲೀ ಯ ಪ್ರಪಂಚದಲ್ಲಿ ಓದುಗರೆಲ್ಲಾ ಸೇರಿದಂತೆ ಕಥೆ ಪೋಣಿಸಲಾಗಿದೆ. ನನ್ನ ತಂದೆಯವರು ಅನುವಾದಿಸಿದ ಈ ಪುಸ್ತಕ ದೂರದಲ್ಲಿರುವ ನನಗೆ ಡಿಜಿಟಲ್ ಆವೃತ್ತಿ ರೂಪದಲ್ಲಿ ಸಿಗುವಂತೆ ಮಾಡಿದ mylang ಅವರಿಗೆ ನನ್ನ ಧನ್ಯವಾದಗಳು.