ಲೇಖಕರು:
ಡಾ॥ ಎಂ. ವಸುಂಧರ
ಡಾ॥ ವಸುಂಧರಾ ಭೂಪತಿ
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ನನ್ನ ವೃತ್ತಿ ಅನುಭವದಿಂದ ಹಾಗೂ ಗ್ರಂಥಗಳ ಅಧ್ಯಯನದಿಂದ ಔಷಧಿ ಸಸ್ಯಗಳ ಉಪಯೋಗವನ್ನು ಸಾಧ್ಯವಾದಷ್ಟು ಸರಳವಾಗಿ ವಿವರಿಸಿದ್ದೇನೆ. ಸಸ್ಯಗಳನ್ನು ಔಷಧಿಯಾಗಿ ಬಳಸುವಾಗ ಯಾವ ಭಾಗ ಮತ್ತು ಎಷ್ಟು ಪ್ರಮಾಣ ಇರಬೇಕೆಂಬುದರ ಬಗ್ಗೆ ತಿಳಿಸಿದ್ದೇನೆ. ಅಲ್ಲದೆ ಸಸ್ಯಗಳನ್ನು ಔಷಧಿಯಾಗಿ, ಆಹಾರವಾಗಿ ಬಳಸುವಾಗ ಸ್ವಚ್ಛತೆ ಬಹಳ ಮುಖ್ಯ. ಅಡುಗೆಯ ಬಗ್ಗೆ ಬರೆಯುವಾಗ ಅಮ್ಮ, ಅತ್ತೆ, ತಂಗಿ, ಹಿರಿಯರು ಮತ್ತು ಗೆಳತಿಯರನ್ನು ಸಂಪರ್ಕಿಸಿ ವಿವರಗಳನ್ನು ಪಡೆದಿದ್ದೇನೆ. ಮಲೆನಾಡು, ಉತ್ತರ ಕರ್ನಾಟಕ, ದಕ್ಷಿಣ ಕನ್ನಡ, ಮೈಸೂರು ಸೀಮೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬರೆದಿದ್ದೇನೆ. ರೇಖಾಚಿತ್ರ ಗಳನ್ನು, ಔಷಧಿವನಗಳ ಛಾಯಾಚಿತ್ರಗಳನ್ನು ಒದಗಿಸಿಕೊಟ್ಟ ಡಾ॥ ಸತ್ಯನಾರಾಯಣ ಭಟ್‌ರವರಿಗೆ ಮತ್ತು ಕೆಲವು ಸಸ್ಯಗಳ ಛಾಯಾಚಿತ್ರಗಳನ್ನು ಸುಂದರವಾಗಿ ಸೆರೆಹಿಡಿದ ಶ್ರೀ ಕೆ. ಪಿ. ಸ್ವಾಮಿಯವರಿಗೆ ಧನ್ಯವಾದಗಳು. ಇಂತಹುದೊಂದು ಪುಸ್ತಕ ರಚನೆಗೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಶ್ರೀ ಆರ್. ಎಸ್. ರಾಜಾರಾಮ್ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು.
ಈ ನಿಟ್ಟಿನಲ್ಲಿ ನಮಗೆ ಎಲ್ಲ ರೀತಿಯ ಮುಕ್ತ ವಾತಾವರಣ ಕಲ್ಪಿಸಿಕೊಟ್ಟ ನವಕರ್ನಾಟಕಕ್ಕೆ ನಾವು ಚಿರಋಣಿಗಳು.
ಸಿದ್ಧಾರ್ಥ ಆಯುರ್ವೇದ ಕ್ಲಿನಿಕ್
ಡಾ॥ ವಸುಂಧರಾ ಭೂಪತಿ
ಬಸವೇಶ್ವರ ನಗರ, ಬೆಂಗಳೂರು
ಪುಟಗಳು: 200
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !