ಪ್ರಕಾಶಕರು: ಗಿರಿಮನೆ ಪ್ರಕಾಶನ
Publisher: Girimane Prakashana
ಬರಹಗಾರರು: ಗಿರಿಮನೆ ಶ್ಯಾಮರಾವ್
ಮಕ್ಕಳನ್ನು ಬೆಳೆಸಿ ಅನುಭವವಾಗುವಾಗ ಮಕ್ಕಳು ದೊಡ್ಡವರಾಗಿರುತ್ತಾರೆ. ಆಗ `ನನಗೆ ನಿಜವಾಗಿ ಮಕ್ಕಳನ್ನು ಬೆಳೆಸುವ ಕ್ರಮ ಗೊತ್ತಿದ್ದರೆ, ಹೀಗೆಲ್ಲಾ ಇದೆ ಎಂದು ಮೊದಲೇ ತಿಳಿದಿದ್ದರೆ ನಾನು ಮಕ್ಕಳನ್ನು ಇನ್ನಷ್ಟು ಚೆನ್ನಾಗಿ ಬೆಳೆಸುತ್ತಿದ್ದೆ' ಎಂದುಕೊಂಡರೆ ಆಗುವ ಪ್ರಯೋಜನವಾದರೂ ಏನು? ಬೆಳೆಸುವ ಸಮಯದಲ್ಲೇ ಅದು ಹೆತ್ತವರಿಗೆ ತಿಳಿದಿರಬೇಕು. ಮಕ್ಕಳ ಮನಸ್ಸು ಹೇಗಿರುತ್ತದೆ? ಮಕ್ಕಳು ಸುಳ್ಳು, ಕಳ್ಳತನ ಮಾಡಿದಾಗ ಅವರೊಂದಿಗೆ ಹೇಗೆ ನಡೆದುಕೊಳ್ಳಬೇಕು? ಅವರಿಗೆ ಕಲಿಸುವುದು, ತಿಳಿಸಿಕೊಡುವುದು ಹೇಗೆ? ಮನಸ್ಸಿಗೆ ಒತ್ತಡ ಮಾಡಿಕೊಳ್ಳದೆ ಅವರೊಂದಿಗೆ ಬೆರೆತೇ ಖುಷಿಯಿಂದ ಅವರನ್ನು ಬೆಳೆಸುವುದು ಹೇಗೆ? ಒತ್ತಡ ಹಾಕದೆ ಓದಿಸುವುದು ಹೇಗೆ? ಯಾವುದೆಲ್ಲಾ ಒತ್ತಡವಾಗುತ್ತದೆ? ಅನುಭವ ಗಳಿಸಲು ನೆರವಾಗುವುದು ಹೇಗೆ? ಹದಿ ಹರೆಯದಲ್ಲಿ ಅವರೊಂದಿಗೆ ವ್ಯವಹರಿಸುವುದು ಹೇಗೆ? ಅಪಕ್ವ ವಯಸ್ಸಿನಲ್ಲಿ ಪ್ರೀತಿ ಪ್ರೇಮದ ಸುಳಿಗೆ ಸಿಕ್ಕದಂತೆ, ಅಪಾಯಗಳನ್ನು ಮೈಮೇಲೆ ಎಳೆದುಕೊಳ್ಳದಂತೆ ಅವರಿಗೆ ಎಲ್ಲವನ್ನೂ ಮನದಟ್ಟು ಮಾಡುವುದು ಹೇಗೆ? ಆಧುನಿಕ ವಸ್ತುಗಳ ಬಗ್ಗೆ ಎಚ್ಚರ ಮೂಡಿಸುವುದು ಹೇಗೆ? ಇತ್ಯಾದಿ ವಿಷಯಗಳನ್ನು ಈ ಕೃತಿ ಒಳಗೊಂಡಿದೆ. ಮಕ್ಕಳಿಗೆ ತಿಳಿಸುವುದರ ಜೊತೆಗೆ ಹೆತ್ತವರಿಗೂ ಹಲವಾರು ವಿಷಯಗಳನ್ನು ತಿಳಿದುಕೊಳ್ಳಲು ನೆರವಾಗಬಹುದು. ಮಾನಸಿಕ ವೈದ್ಯರ, ತಜ್ಞರ ಮುನ್ನುಡಿ ಇದೆ. `ಮಕ್ಕಳನ್ನು ಬೆಳೆಸುವುದು ಹೇಗೆ?' ಈಗಾಗಲೇ ಇಪ್ಪತ್ತೈದು ಸಾವಿರ ಮಾರಾಟವಾದ ಜನಪ್ರಿಯ ಕೃತಿ.