Click here to Download MyLang App

ಮಹಾಭಾರತ ಹೇಳಿಯೂ ಹೇಳದ್ದು (ಇಬುಕ್) - MyLang

ಮಹಾಭಾರತ ಹೇಳಿಯೂ ಹೇಳದ್ದು (ಇಬುಕ್)

e-book

ಪಬ್ಲಿಶರ್
ಜಗದೀಶಶರ್ಮಾ ಸಂಪ
ಮಾಮೂಲು ಬೆಲೆ
Rs. 99.00
ಸೇಲ್ ಬೆಲೆ
Rs. 99.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಪ್ರಕಾಶಕರು: ಸಾವಣ್ಣ

Publisher: Sawanna

 

ಮಹಾಭಾರತ ಒಂದು ಮಹಾಸಾಗರ. ಇಂಡಿಯಾದ ಬಹುತೇಕ ಕತೆ, ಕಾವ್ಯ, ನಾಟಕಗಳು ಹುಟ್ಟಿದ್ದೇ ಮಹಾಭಾರತದ ಸ್ಫೂರ್ತಿಯಿಂದ. ಕಾಲಕಾಲಕ್ಕೆ ಹೊಸದಾಗುವ, ಪ್ರಸ್ತುತವಾಗುವ, ಸಮಕಾಲೀನವಾಗುವ ಗುಣ ಹೊಂದಿರುವ ಮಹಾಭಾರತ ಮತ್ತು ರಾಮಾಯಣಗಳ ಒಳಹೊಕ್ಕು ಅಲ್ಲಿಂದ ಎಲ್ಲರಿಗೂ ಗೊತ್ತಿರುವ ಆದರೆ ಯಾರಿಗೂ ಗೊತ್ತಿರದ ಕತೆಯೊಂದನ್ನು ಹೆಕ್ಕಿ ತರುವುದು ಸಾಹಸದ ಕೆಲಸ. ಅದಕ್ಕೆ ಅಪೂರ್ವ ಪ್ರತಿಭೆಯೂ ಅಸಾಧ್ಯ ತಾಳ್ಮೆಯೂ ಬೇಕು. ಹೊಸ ದೃಷ್ಟಿಕೋನ ಬೇಕು. ಮಹಾಭಾರತವನ್ನು ಎಲ್ಲ ದಿಕ್ಕುದೆಸೆಗಳಿಂದ ನೋಡಿ, ಅದರಿಂದ ಏನೇನನ್ನು ಸ್ವೀಕರಿಸಲು ಸಾಧ್ಯವೋ ಅದನ್ನೆಲ್ಲ ಮಥಿಸಿ ಪಡೆದುಕೊಂಡ ನಂತರವೂ ಎಲ್ಲವನ್ನೂ ತನ್ನಲ್ಲೇ ಉಳಿಸಿಕೊಂಡಿರುವ ಮಹಾಕೃತಿಯನ್ನು ಜಗದೀಶ ಶರ್ಮರು ತಮ್ಮದೇ ಆದ ಹಾದಿಯಿಂದ ಪ್ರವೇಶಿಸುವ ಕೃತಿ ಇದು.

ಈ ಕಾಲದ ಭಾಷೆಯಲ್ಲಿ ಹೇಳುವುದಾದರೆ ಜಗದೀಶ ಶರ್ಮರು ಮಹಾಭಾರತದ ಮೇಲೊಂದು ಸರ್ಜಿಕಲ್‌ ಸ್ಟ್ರೈಕ್‌ ಮಾಡಿದ್ದಾರೆ. ತಮಗೆ ಬೇಕುಬೇಕಾದ್ದನ್ನು ಹೆಕ್ಕಿಕೊಂಡು ಅದನ್ನು ತಮ್ಮ ಪ್ರತಿಭೆಯ ದಾರದಲ್ಲಿ ಪೋಣಿಸಿ ಸುಂದರವಾದ ಕಥಾಹಾರವನ್ನಾಗಿಸಿದ್ದಾರೆ. ಇದರ ಓದು ನಮಗೆ ಅನೇಕ ನೆನಪುಗಳನ್ನು ಮರುಕಳಿಸುತ್ತದೆ. ಅನೇಕ ಹೊಸ ಸಂಗತಿಗಳನ್ನು ತಿಳಿಸಿಕೊಡುತ್ತದೆ. ಮಹಾಭಾರತದ ಒಳಗೆ ಪ್ರವೇಶಿಸಲು ಇರುವ ಅಸಂಖ್ಯ ಹಾದಿಗಳಲ್ಲಿ ಮತ್ತೊಂದು ದಾರಿ ಗೊತ್ತಾಗುತ್ತದೆ.



ಪುಟಗಳು : 128

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !