Click here to Download MyLang App

ಮಹಾಭಾರತ ಹೇಳಿಯೂ ಹೇಳದ್ದು(ಆಡಿಯೋ ಬುಕ್)

ಮಹಾಭಾರತ ಹೇಳಿಯೂ ಹೇಳದ್ದು(ಆಡಿಯೋ ಬುಕ್)

audio book

ಪಬ್ಲಿಶರ್
ಜಗದೀಶಶರ್ಮಾ ಸಂಪ
ಮಾಮೂಲು ಬೆಲೆ
Rs. 135.00
ಸೇಲ್ ಬೆಲೆ
Rs. 135.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಆಡಿಯೊಬುಕ್ (ಕೇಳುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಕೇಳಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital audiobook — not a printed book, so no courier will be sent. Once purchased, it is instantly available to listen to on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

ಪ್ರಕಾಶಕರು: ಸಾವಣ್ಣ

Publisher: Sawanna

 

ಓದಿದವರು: ಪ್ರತಿಬಿಂಬ ತಂಡ

ಆಡಿಯೋ ಪುಸ್ತಕದ ಅವಧಿ : 3 ಗಂಟೆ 39 ನಿಮಿಷ

 

ಮಹಾಭಾರತ ಒಂದು ಮಹಾಸಾಗರ. ಇಂಡಿಯಾದ ಬಹುತೇಕ ಕತೆ, ಕಾವ್ಯ, ನಾಟಕಗಳು ಹುಟ್ಟಿದ್ದೇ ಮಹಾಭಾರತದ ಸ್ಫೂರ್ತಿಯಿಂದ. ಕಾಲಕಾಲಕ್ಕೆ ಹೊಸದಾಗುವ, ಪ್ರಸ್ತುತವಾಗುವ, ಸಮಕಾಲೀನವಾಗುವ ಗುಣ ಹೊಂದಿರುವ ಮಹಾಭಾರತ ಮತ್ತು ರಾಮಾಯಣಗಳ ಒಳಹೊಕ್ಕು ಅಲ್ಲಿಂದ ಎಲ್ಲರಿಗೂ ಗೊತ್ತಿರುವ ಆದರೆ ಯಾರಿಗೂ ಗೊತ್ತಿರದ ಕತೆಯೊಂದನ್ನು ಹೆಕ್ಕಿ ತರುವುದು ಸಾಹಸದ ಕೆಲಸ. ಅದಕ್ಕೆ ಅಪೂರ್ವ ಪ್ರತಿಭೆಯೂ ಅಸಾಧ್ಯ ತಾಳ್ಮೆಯೂ ಬೇಕು. ಹೊಸ ದೃಷ್ಟಿಕೋನ ಬೇಕು. ಮಹಾಭಾರತವನ್ನು ಎಲ್ಲ ದಿಕ್ಕುದೆಸೆಗಳಿಂದ ನೋಡಿ, ಅದರಿಂದ ಏನೇನನ್ನು ಸ್ವೀಕರಿಸಲು ಸಾಧ್ಯವೋ ಅದನ್ನೆಲ್ಲ ಮಥಿಸಿ ಪಡೆದುಕೊಂಡ ನಂತರವೂ ಎಲ್ಲವನ್ನೂ ತನ್ನಲ್ಲೇ ಉಳಿಸಿಕೊಂಡಿರುವ ಮಹಾಕೃತಿಯನ್ನು ಜಗದೀಶ ಶರ್ಮರು ತಮ್ಮದೇ ಆದ ಹಾದಿಯಿಂದ ಪ್ರವೇಶಿಸುವ ಕೃತಿ ಇದು.

ಈ ಕಾಲದ ಭಾಷೆಯಲ್ಲಿ ಹೇಳುವುದಾದರೆ ಜಗದೀಶ ಶರ್ಮರು ಮಹಾಭಾರತದ ಮೇಲೊಂದು ಸರ್ಜಿಕಲ್‌ ಸ್ಟ್ರೈಕ್‌ ಮಾಡಿದ್ದಾರೆ. ತಮಗೆ ಬೇಕುಬೇಕಾದ್ದನ್ನು ಹೆಕ್ಕಿಕೊಂಡು ಅದನ್ನು ತಮ್ಮ ಪ್ರತಿಭೆಯ ದಾರದಲ್ಲಿ ಪೋಣಿಸಿ ಸುಂದರವಾದ ಕಥಾಹಾರವನ್ನಾಗಿಸಿದ್ದಾರೆ. ಇದರ ಓದು ನಮಗೆ ಅನೇಕ ನೆನಪುಗಳನ್ನು ಮರುಕಳಿಸುತ್ತದೆ. ಅನೇಕ ಹೊಸ ಸಂಗತಿಗಳನ್ನು ತಿಳಿಸಿಕೊಡುತ್ತದೆ. ಮಹಾಭಾರತದ ಒಳಗೆ ಪ್ರವೇಶಿಸಲು ಇರುವ ಅಸಂಖ್ಯ ಹಾದಿಗಳಲ್ಲಿ ಮತ್ತೊಂದು ದಾರಿ ಗೊತ್ತಾಗುತ್ತದೆ.

 

ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್  ಅಲ್ಲಿ.

 

Customer Reviews

Based on 4 reviews
100%
(4)
0%
(0)
0%
(0)
0%
(0)
0%
(0)
R
RANGANATHA M
Good

Good

C
Customer
ಹೇಳಿಯೂ ಹೆಳ್ಳದ್ದು, ಗೊತ್ತಾಗದೆ ಗೆದ್ದಿದೆ..!

ಹೆಸರಿಗೆ ತಕ್ಕಂತೆ, ಹೇಳಿಯೂ ಹೇಳದ್ದು ಇದೆ...
ಆಲಿಸಿಕೊಳ್ಳುತ್ತಾ ಹೋದಾಗ ನಮಗೆ ಗೊತ್ತೇ ಆಗದಂತೆ ಈ ಪುಸ್ತಕ ನಮ್ಮನ್ನು ಗೆದ್ದುಬಿಡುತ್ತದೆ..

ಇಡೀ ತಂಡಕ್ಕೆ ಶುಭಾಶಯಗಳು...

S
Sudhindra KN
Good experience

Different way of telling mahabharata story!!!

ರ
ರಮೇಶ್
ಮಹಾಭಾರತದ ಪಾತ್ರಗಳ ವೈಶಿಷ್ಟ್ಯಗಳ ಅನಾವರಣ

ನಾನು ಈ ಅಡಿಯೋ ಪುಸ್ತಕವನ್ನು ಮಂಗಳುರಿನಿಂದ ಬೆಂಗಳುರಿಗೆ ಬಸ್ಸಲ್ಲಿ ಬರುವಾಗ ಕೊಂಡು ಸತತವಾಗಿ ೫+ ಗಂಟೆಗಳ ಕಾಲ ಆಲಿಸಿದೆ. ಆಪ್ತವಾಯಿತು. ಇಲ್ಲಿ ಬರುವ ಸನ್ನಿವೇಶಗಳ ಹಾಗೂ ಪಾತ್ರಗಳ ಮೊದಲೇ ಪರಿಚಯವಿರುವ ಕಾರಣ ಕಥೆಗೆ ಕನೆಕ್ಟ್ ಆಗುವುದು ಸುಲಭವಾಯಿತು.... ಮಹಾಭಾರತದ ಪಾತ್ರಗಳನ್ನು ಮಹಾಭಾರತದ ಕಥೆಗೆ ಪೂರಕವಾಗಿ ರೂಪುಗೊಂಡಿದ್ದನ್ನು ವರ್ಣಿಸುತ್ತಾ ಹಲವು ಟ್ರಾಕುಗಳಲ್ಲಿ ಕಥೆ ಹೇಳಿದ್ದು ಆಸಕ್ತಿಕರವಾಗಿ ಆಲಿಸಲು ಸಂತೋಷವಾಯ್ತು.