ದಾಂಡೇಲಿ, ಕೊಲ್ಲೂರು,ಕೊಡಚಾದ್ರಿ,ಆಗುಂಬೆ, ಕೆಮ್ಮಣ್ಣುಗುಂಡಿ,ಮುಳ್ಳಯ್ಯನಗಿರಿ,ಬಾಬಾಬುಡನ್ ಗಿರಿ.... ಹೀಗೆ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಬರುವ ಅನೇಕ ನಯನಮನೋಹರ ಪ್ರಾಕೃತಿಕ ತಾಣಗಳಿಗೆ ಭೇಟಿ ನೀಡಿದ ರೋಚಕ ಅನುಭವಗಳನ್ನ ಹಿಡಿದಿಡುವ ಪ್ರಯತ್ನವಿದಾಗಿದೆ. ಪ್ರಕೃತಿಯ ರುದ್ರರಮಣೀಯತೆಯ ಸೋಜಿಗಗಳಿಗೆ ಸಾಕ್ಷಿಯಾಗಿ, ಪ್ರಕೃತಿಯ ಮಡಿಲ ಮಕ್ಕಳಾಗಿ, ಮಾಡಿದ ದೋಣಿಯಾನಗಳು, ಚಾರಣ, ಖಗ-ಮೃಗಗಳ ಸನಿಹದ ಒಡನಾಟ, ಕಾನನದ ಹಸಿರು,
ಸೂರ್ಯ ನೊಡನೆ ಮೋಡಗಳ ಚಲ್ಲಾಟ...ಪ್ರಕೃತಿಯ ಐಸಿರಿಯೊಂದಿಗೆ ಶೃಂಗೇರಿ,ಗೋಕರ್ಣ, ಸಿಗಂಧೂರು, ಕೊಲ್ಲೂರುಗಳಂತಹ ಧಾರ್ಮಿಕ ಕ್ಷೇತ್ರಗಳ ಇತಿಹಾಸದ ಕಿರುಪರಿಚಯದ ಜ್ಞಾನ ಹೂಂದಿ, ಮಲೆನಾಡಿನ ಪ್ರಕೃತಿಯೊಡನೆ ಕಳೆದ ಚಂದದ ಕ್ಷಣಗಳನ್ನ ಅಕ್ಷರಗಳಲ್ಲಿ ಹೆಣೆದು, ದನಿ ನೀಡಿ , ಪ್ರಕೃತಿಮಾತೆಯ ಚರಣಕಮಲಗಳಿಗೆ ಅರ್ಪಿಸಿದ್ದೇನೆ.