Click here to Download MyLang App

ನಾ ಕಂಡ ಕೆನಡಾ

ನಾ ಕಂಡ ಕೆನಡಾ

e-book

ಪಬ್ಲಿಶರ್
ರಾಮಚಂದ್ರ ಕೆಳದಿ
ಮಾಮೂಲು ಬೆಲೆ
Rs. 70.00
ಸೇಲ್ ಬೆಲೆ
Rs. 70.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

ನಾವು ಯಾವುದಾದರೂ ಸ್ಥಳಕ್ಕೆ ಪ್ರವಾಸ ಮಾಡುವ ಮುನ್ನ ಅಲ್ಲಿನ ವಾತಾವರಣ, ವಸತಿ, ಪ್ರೇಕ್ಷಣೀಯ ಸ್ಥಳಗಳು, ಊಟೋಪಚಾರ ಸ್ಥಳಗಳು, ವಾಹನ ಸೌಕರ್ಯ ಹೀಗೆ ಹಲವು ವಿಷಯಗಳನ್ನು ಸಂಗ್ರಹಿಸುತ್ತೇವೆ. ಇನ್ನೂ, ಹೋಗಬೇಕಾದ ಸ್ಥಳ ವಿದೇಶವಾದರಂತೂ ಪ್ರವಾಸ ವ್ಯವಸ್ಥೆ ಜೊತೆಗೆ ಅಲ್ಲಿನ ಸುರಕ್ಷತೆ, ರೀತಿ ರಿವಾಜು, ಆಹಾರ ವಿಹಾರ, ಅಲ್ಲಿನ ಜೀವನ ಶೈಲಿ, ವಸತಿ ಮತ್ತು ಸಾರಿಗೆ ವ್ಯವಸ್ಥೆ, ಸಂವಹನದ ಭಾಷೆ, ಅಲ್ಲಿಗೆ ಹತ್ತಿರದ ಪ್ರವಾಸಿ ತಾಣಗಳು ಹಾಗೂ ಅಲ್ಲಿನ ಹವಾಮಾನ ಇವುಗಳು ಗೊತ್ತಿರಲೇ ಬೇಕು. ಇಂದಿನ ದಿನಗಳಲ್ಲಿ ನಾವು ಎಲ್ಲವಕ್ಕೂ ಮಾಧ್ಯಮಗಳನ್ನು ಅವಲಂಬಿಸುತ್ತೇವೆ. ಆದಾಗ್ಯೂ ನಮ್ಮ ಪ್ರವಾಸವನ್ನು ಹೆಚ್ಚು ಅಚ್ಚುಕಟ್ಟಾಗಿ ಮಾಡಿಕೊಳ್ಳಲು, ಹೋಗುವ ಮುನ್ನ ಮನೆಯವರಿಗೂ ನಮ್ಮ ಸುರಕ್ಷಿತ ಪ್ರವಾಸವನ್ನು ಮನವರಿಕೆ ಮಾಡಿ ನೆಮ್ಮದಿ ಕೊಡಲು ಮಾಹಿತಿ ಪುಸ್ತಕಗಳು ತುಂಬಾ ಸಹಕಾರಿಯಾಗುತ್ತವೆ. ಈ ನಿಟ್ಟಿನಲ್ಲಿ ಕೆನಡಾ ದೇಶದ ಪ್ರವಾಸವನ್ನು ಕುರಿತು ನನ್ನ ಅನುಭವವನ್ನು ಈ ಮೂಲಕ ಹಂಚಿಕೊಂಡಿದ್ದೇನೆ. ಇಲ್ಲಿ ಹೇಳಿರುವುದೇ ಸಮಗ್ರ ಎನ್ನಲಾಗದು. ಸಂಗ್ರಹಿಸಿದ ಮಾಹಿತಿಗಳನ್ನು ವಿಷಯಾಧಾರಿತವಾಗಿ ಪ್ರತ್ಯೇಕ ಭಾಗಗಳನ್ನಾಗಿ ಮಾಡಿ ಕೊಡಲಾಗಿದೆ. ಓದುಗರು ತಮಗೆ ಬೇಕಾದ ಭಾಗವನ್ನು ಆಯ್ಕೆ ಮಾಡಿ ಓದಬಹುದು. ತಮಗೆ ಈ ಪುಸ್ತಕ ಉಪಯೋಗವಾಗಲಿ ಎಂದು ಹಾರೈಸುತ್ತೇನೆ.

Customer Reviews

Based on 8 reviews
100%
(8)
0%
(0)
0%
(0)
0%
(0)
0%
(0)
P
Pushpa Sharma
ನಾ ಕಂಡ ಕೆನಡ ಪ್ರವಾಸಿಗರಿಗೆ ಒಂದು guide ಆಗ ಬಲ್ಲದು

ನಾ ಕಂಡ ಕೆನಡ

ತಾವು ಕಂಡದ್ದನ್ನು, ವಿವಿಧ ಕೋನಗಳಲ್ಲಿ ವೀಕ್ಷಿಸಿ, ಅದರಲ್ಲಿ ಇರುವ ಹಾಸ್ಯ, ಜೀವನದ ಅನುಭವ, ನಾವು ಅದರಿಂದ ಕಲಿಯ ಬಹುದಾದ ಪಾಠ ಇವೆಲ್ಲವನ್ನು ಪರಾಮರ್ಶಿಸಿ, ಅದನ್ನು
ತನ್ನ ಸ್ನೇಹಿತರಿಗೆ, ಹಿತೈಷಿಗಳಿಗೆ ಮನಮುಟ್ಟುವ ಹಾಗೆ, ಹೇಳಬಲ್ಲ
ಮತ್ತು ಪುಸ್ತಕ ರೂಪದಲ್ಲಿ ಬರೆಯಬಲ್ಲ, ಗೆಳೆಯ ಶ್ರೀ
ಕೆಳದಿ ರಾಮಚಂದ್ರ ಅವರ ಮತ್ತೊಂದು ಬರಹ ನಾ ಕಂಡ
ಕೆನಡ ಓದಿದೆ. ಎಂದಿನ ಅನುಭವದ ಶೈಲಿಯಲ್ಲಿ ಪುಸ್ತಕದಲ್ಲಿ
ಲೇಖನ ಮೂಡಿಬಂದಿದೆ.

ಒಂದು ಪುಸ್ತಕವನ್ನು ಬರೆಯಬೇಕಾದರೆ ಏನೆಲ್ಲಾ ವಿಷಯ
ಸಂಗ್ರಹ ಮಾಡಬೇಕು , ಹಾಗೂ ಅದನ್ನು ವ್ಯವಸ್ಥಿತವಾಗಿ ಬರಹದಲ್ಲಿ ಓದಿಸಿಕೊಂಡು ಹೋಗುವಂತೆ ಬರೆಯಬೇಕು ಎನ್ನುವುದಕ್ಕೆ ಈ ಪುಸ್ತಕ ಒಂದು ಉದಾಹರಣೆ ಕೂಡ.

ಬೆಂಗಳೂರಿನಿಂದ ಹೊರಡಬೇಕಾದರೆ ಮಾಡಿಕೊಳ್ಳುವ
ಸಿದ್ಧತೆಯಿಂದ ಹಿಡಿದು, ವಿದೇಶಕ್ಕೆ ಹೊರಡಲು ಪಾಲಿಸಬೇಕಾದ ಎಲ್ಲಾ ನಿಯಮಗಳನ್ನೂ ತಿಳಿಸಲಾಗಿದೆ, ಪ್ರವಾಸಿಯಾಗಿ, ವಿದ್ಯಾಭ್ಯಾಸಿಯಾಗಿ ಅಥವಾ ನೌಕರಿಗಾಗಿ ಹೋಗುವವರಿಗೆ
ಬೇಕಾದ ಮಾಹಿತಿ ಇಲ್ಲಿದೆ

ಇನ್ನೂ ಕೆನಡ ದೇಶದ ಭೌಗೋಳಿಕ, ಸಾಂಸ್ಕೃತಿಕ, ಕೃಷಿಕ, ಶೈಕ್ಷಣಿಕ
ಹಾಗೂ ಪ್ರವಾಸದ ವಿಷಯಗಳನ್ನು ವಿಸ್ತಾರವಾಗಿ ತಿಳಿಸಿದ್ದೀರಿ.
ಸೇತುವೆ ನಿರ್ಮಿಸಲು ದಶಮಾನದ ಹಿಂದೆಯೇ, ಮರವನ್ನು
ಉಪಯೋಗಿಸಿರುವುದು ಮತ್ತು ಅದು ನೀರಿನಲ್ಲಿ ಇದ್ದರೂ ಇನ್ನೂ ಏನೂ ಅಗದಿರುವುದನ್ನು ಓದಿ ಆಶ್ಚರ್ಯವಾಯಿತು,
ಒಂದು ದೇಶದ ಎಲ್ಲಾ ವಿಷಯವನ್ನು ಪುಸ್ತಕದಲ್ಲಿ ಅಳವಡಿಸಿದ್ದೀರಿ
ಬಹುಶಃ ರಾಜಕೀಯ ಇತಿಹಾಸವನ್ನು ಬಿಟ್ಟರೆ ಮಿಕ್ಕೆಲ್ಲ ವಿಷಯ
ಪುಸ್ತಕದಲ್ಲಿ ಇದೆ.

ನಿಮ್ಮ ಅನುಭವವನ್ನು ಪುಸ್ತಕ ರೂಪದಲ್ಲಿ ಕನ್ನಡಿಗರಿಗೆ
ಅರ್ಪಿಸಿದ್ದಕ್ಕೆ ಅಭಿನಂದನೆಗಳು.

Pushpa Sharma
ಶಾಸ್ತ್ರಿ ನಗರ ಬೆಂಗಳೂರು
20/11/2024

ಉಷಾರಾಮಚಂದ್ರ
ಮೊದಲ ಬಾರಿಗೆ ವಿದ್ಯಾಭ್ಯಾಕ್ಕಾಗಲೀ, ಪ್ರವಾಸಕ್ಕಾಗಲೀ ಹೋಗುವವರಿಗೆ ಉಪಯುಕ್ತವಾದ ಲೇಖನ.

ಈ ಪುಸ್ತಕವನ್ನುಓದಿದ ನಂತರ " ಕುಳಿತಲ್ಲೇ ಕೆನಡಾ" ಎನ್ನಬಹುದೇನೋ! ಆ ದೇಶದ ಇತಿಹಾಸ, ಮಹತ್ವ ವಿಶೇಷಗಳನ್ನು ಅಧ್ಯಾಯಗಳ ತಲೆಬರಹದೊಂದಿಗೆ ಸರಳವಾಗಿ ನೀಡಿದ್ದಾರೆ. ಆದೇಶದ ಮುಂದಾಲೋಚನೆ, ಜನತೆಯ ಬಗೆಗಿನ ಕಾಳಜಿ, ಇತರ ದೇಶಗಳ ಯುವಜನತೆಗೆ ಅಲ್ಲಿ ಉತ್ತಮ ಆಶಾದಾಯಕವಾದ ಭವಿಷ್ಯದೊಂದಿಗೆ ನೆಲೆಯೂರಲು ಇರುವ ಅವಕಾಶಗಳ ಸ್ಪಷ್ಟತೆ ಇದೆ. ಅಲ್ಲಿಯ ಅಂಚೆ ಮತ್ತು ತ್ಯಾಜ್ಯವಿಲೇವಾರಿಯ ಅಂಶಗಳು ಹೊಸ ಸೇವೆಗಳನ್ನು ಆಚರಣೆಗೆ ತರಲು ಸ್ಫೂರ್ತಿ ನೀಡುತ್ತವೆ. ಇನ್ನು ಅಲ್ಲಿಯ ವಸತಿ, ಕಟ್ಟಡಗಳ ಸುರಕ್ಷತೆ, ಅಗತ್ಯ, ವೆಚ್ಚ, ಆಹಾರದ ವೈವಿಧ್ಯತೆ, ಹಣಕಾಸಿನ ವಿಷಯಗಳಂತೂ ಉಪಯುಕ್ತವೇ ಸರಿ. ಅಲ್ಲಿಯ ಶೌಚಶುದ್ಧಿಯಂತೂ ಆಚರಣೆಯ ಅನುಮಾನಗಳಿಗೆ ಉತ್ತರದಂತಿದೆ. ಕಡೆಯಲ್ಲಿ ತಮ್ಮ ಸ್ವಂತ ಅನುಭವದೊಂದಿಗೆ ಜೀವನದ, ಜೀವಿಸುವ ರೀತಿಯನ್ನೂ ಮುಕ್ತವಾಗಿ, ಹಾಸ್ಯ ಬೆರೆತ ಅಧ್ಯಾತ್ಮದೊಂದಿಗೆ ಬೆರೆಸಿ, ಹಿರಿಯರಿಗೂ ಸಂದೇಶ ನೀಡಿ, "ಸರ್ವೇಜನಾಃ ಸುಖಿನೋ ಭವಂತು" ಎಂಬ ನುಡಿಯನ್ನು ಕಾರ್ಯರೂಪಕ್ಕೆ ಇಳಿಸಿರುವ ಶ್ರೀ ರಾಮಚಂದ್ರರವರಿಗೆ ನನ್ನ ಹೃತಪೂರ್ವಕ ಧನ್ಯವಾದಗಳು.

S
Swaroop
Very Insightful and helpful tips for Canada visitors

ಈ ಪುಸ್ತಕದ ವೈಶಿಷ್ಟ್ಯವೇನೆಂದರೆ, ಅದರಲ್ಲಿನ ಮಾಹಿತಿ ಸಂಗ್ರಹವನ್ನು ವಿಚಾರಾಧಾರಿತವಾಗಿ ಪ್ರತ್ಯೇಕ ಭಾಗಗಳಾಗಿ ಹಂಚಿದಂತೆ, ಓದುಗರಿಗೆ ಬೇಕಾದ ವಿಚಾರಗಳನ್ನು ಸರಳವಾಗಿ ಹಾಗೂ ಸೂಕ್ತವಾಗಿ ಪಡೆಯಲು ಸಾಧ್ಯವಾಗುತ್ತದೆ. ಇದು ಪ್ರವಾಸಿಗರಿಗೆ ನೆಮ್ಮದಿ ಮತ್ತು ಸುರಕ್ಷತೆ ಭಾವನೆಯನ್ನು ಉಂಟುಮಾಡುತ್ತದೆ. ಮೊತ್ತಮೊದಲು, ನೀವು ಅನ್ವೇಷಿಸಬೇಕಾದ ಸ್ಥಳಗಳ ಬಗ್ಗೆ ಪೂರ್ಣ ಮಾಹಿತಿಯೊಂದಿಗೆ ಹತ್ತಿರವಾದ ಪ್ರವಾಸಿ ತಾಣಗಳನ್ನು ತಿಳಿಯಲು ಇದು ಅತ್ಯಂತ ಉಪಯುಕ್ತವಾಗಿದೆ.

ತಮ್ಮ ಪ್ರವಾಸವನ್ನು ಸುಗಮವಾಗಿ ಮತ್ತು ಆಸಕ್ತಿಯಿಂದ ಅನುಭವಿಸಲು ಇದು ಅತ್ಯುತ್ತಮ ಸಹಾಯಕ ಪುಸ್ತಕವಾಗಿದೆ. ನಾನು ಓದುಗರಿಗೆ ಈ ಪುಸ್ತಕವನ್ನು ನಿಜಕ್ಕೂ ಶಿಫಾರಸು ಮಾಡುತ್ತೇನೆ.

G
Gururaj Karkala
ಕನ್ನಡದಲ್ಲಿ ಕೆನಡಾ ಒಂದು ಉತ್ತಮ ಮಾಹಿತಿ ಸಂಗ್ರಹ.

ನಾ ಕಂಡ ಕೆನಡಾ ಎಂಬ ಈ ಪುಸ್ತಕವು ಮಾಸ್ಟರ್ ಪದವಿ ಕಲಿಯಲು ಹೋಗುವ ವಿದ್ಯಾರ್ಥಿಗಳು, ಪಿಆರ್ ವೀಸಾ ಮೇಲೆ ಕೆಲಸಕ್ಕೆ ಹೋಗುವವರು ಆ ದೇಶಕ್ಕೆ ಶೀಘ್ರವಾಗಿ ಹೊಂದಿಕೊಳ್ಳಲು, ಈ ಪುಸ್ತಕವನ್ನು ಓದಿದರೆ ಅವರಿಗೆ ಸಹಾಯಕವಾಗುತ್ತದೆ ಎಂದು ನನ್ನ ಅನಿಸಿಕೆ.

R
RAMESH M S
Very Good information about Canada

“ನಾ ಕಂಡ ಕೆನಡಾ” ಪುಸ್ತಕ ಓದಿದಾಗ, ನಾನೇ ಕೆನಡಾಗೆ ಹೋಗಿ ನೋಡಿದ ಸುಂದರ ಅನುಭವವಾಯ್ತು ಎಂದು ಅಭಿಪ್ರಾಯಿಸಿದರೆ ಅತಿಶಯೋಕ್ತಿಯಾಗದು. ಬರವಣಿಗೆ ಓದಿಸಿಕೊಂಡು ಹೋಗುವುದರ ಜೊತೆಗೆ ಅವಶ್ಯಕವಾಗಿ ಬೇಕಾದ ಎಲ್ಲಾ ಅಂಶಗಳನ್ನು ಹೊಂದಿದೆ, ಅಷ್ಟೇ ಅಲ್ಲದೇ ಕೆನಡಾ ಬಗ್ಗೆ ಸಂಪೂರ್ಣ ಚಿತ್ರಣ ನೀಡುತ್ತದೆ.

ಈವರೆವಿಗೂ ನಮ್ಮ ದೇಶದ ಪ್ರಮುಖ ನಗರಗಳನ್ನೇ ನೋಡದ ನನಗೆ, ವಿದೇಶಕ್ಕೆ ಹೋಗಿ ಬಂದವರು ಅವರ ಆಸಕ್ತಿಗನುಗುಣವಾಗಿ ತಿಳಿಸಿದ ಹಲವು ಮಾಹಿತಿಗಳು ಬಹಳ ವಿಶೇಷವೆನಿಸಿರಲಿಲ್ಲ.

ಆದರೆ, ಶ್ರೀ.ಕೆ.ಬಿ. ರಾಮಚಂದ್ರರವರು ಬರೆದ “ನಾ ಕಂಡ ಕೆನಡಾ” ಪುಸ್ತಕದಲ್ಲಿ ವಿವರಿಸಿದಂತೆ, ಎಲ್ಲಾ ಅಧ್ಯಾಯಗಳಲ್ಲಿ ಪ್ರಸ್ತಾಪಿಸಿದ ಅಂಶಗಳು ಅತ್ಯಾವಶ್ಯಕ ಮಾಹಿತಿಗಳನ್ನು ನೀಡುವುದಲ್ಲದೇ, ಇನ್ಯಾರು ಈ ರೀತಿಯ ಸಮಗ್ರ ಮಾಹಿತಿಯನ್ನು ನೀಡಲಾರರು ಎಂದೆನಿಸಿತು. ನಾವು ಮನೆಯೆಲ್ಲೇ ಕುಳಿತು ಕೆನಡಾದ ಭೂಗೋಳದ ಪರಿಚಯದ ಜೊತೆ ಜೊತೆಗೆ ಮುಖ್ಯವಾಗಿ ಅಲ್ಲಿನ ಸಂಸ್ಕೃತಿ, ಹಣಕಾಸಿನ ವ್ಯವಹಾರ, ಹಬ್ಭಗಳು, ಜನಜೀವನ, ಊರು ಕೇರಿಯ ವಿವರಗಳು, ಪ್ರವಾಸ ಸ್ಥಳಗಳು, ವಿದ್ಯಾಭ್ಯಾಸದ ಬಗ್ಗೆ ಹಾಗೂ ಇತರೆ ಅಂಕಿಅಂಶಗಳು ಜನಸಾಮಾನ್ಯರಿಗೆ ಅರ್ಥವಾಗುವಂತೆ ಇದ್ದು, ನೀಡಿರುವ ಮಾಹಿತಿಗಳು ಸ್ವಯಂ ವಿವರಣಾತ್ಮಕ ನಿಘಂಟಾಗಿದೆ. ಈ ರೀತಿಯ ಮಾಹಿತಿಗಳನ್ನು ಬಹಳ ಶ್ರಮವಹಿಸಿ ಒದಗಿಸಿದ ಶ್ರೀ.ಕೆ.ಬಿ. ರಾಮಚಂದ್ರರವರಿಗೆ ನಮ್ಮ ಹೃತ್ಪೂರ್ವಕ ವಂದನೆಗಳು.