Click here to Download MyLang App

ಲಾಕ್‌ ಡೌನ್‌ ಡೈರಿ (ಇಬುಕ್)

ಲಾಕ್‌ ಡೌನ್‌ ಡೈರಿ (ಇಬುಕ್)

e-book

ಪಬ್ಲಿಶರ್
ಡಾ ಪಿ ವಿ ಭಂಡಾರಿ
ಮಾಮೂಲು ಬೆಲೆ
Rs. 99.00
ಸೇಲ್ ಬೆಲೆ
Rs. 99.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ. ಬದಲಾವಣೆಯೊಂದೇ ಶಾಶ್ವತ. ‘ಪರಿವರ್ತನೆ ಜಗದ ನಿಯಮ’ ಎನ್ನುವ ಮಾತು ಕೊರೊನಾ ಬಂದಮೇಲೆ ಮತ್ತೊಮ್ಮೆ ಋಜುವಾತಾಗಿದೆ. ಮೂರು ತಿಂಗಳಲ್ಲಿ ಬದುಕು, ಭವಿಷ್ಯಗಳ ಪರಿಕಲ್ಪನೆ ಬದಲಾಗಿದೆ. ದಿನಚರಿಗಳು ಬದಲಾಗಿವೆ. ಮೇಲ್ನೋಟಕ್ಕೆ ಅನಿಶ್ಚಿತತೆ ತಾಂಡವವಾಡುತ್ತಿದ್ದರೂ ನಿಶ್ಚಿತ ಸತ್ಯಗಳು ಅರಿವಿಗೆ ಬಂದಿವೆ. ಬದುಕಲು ಅತ್ಯವಶ್ಯ ವಸ್ತುಗಳು, ಬಾಳಲು ಅತ್ಯವಶ್ಯ ಸಂಬಂಧಗಳು ಯಾವುವೆಂದು ಕೊರೊನಾ ಪರಿಚಯಿಸಿದೆ. ವೈದ್ಯರ, ದಾದಿಯರ, ಆರೋಗ್ಯ ಹಾಗೂ ಸ್ವಚ್ಚತಾ ಕಾರ್ಯಕರ್ತರ, ಆರಕ್ಷಕರ ಸೇವೆಗೆ ಜಗತ್ತೇ ಎದ್ದು ನಿಂತು ಚಪ್ಪಾಳೆ ತಟ್ಟಿದೆ.

‘ಲಾಕ್‍ಡೌನ್ ಡೈರಿ’ ಮನೋವೈದ್ಯನೊಬ್ಬನ ಆತ್ಮ ನಿವೇದನೆ ಕೊರೊನಾ ಕುರಿತಾಗಿ ಉಪಯುಕ್ತ ಮಾಹಿತಿ ಹೊಂದಿರುವ ಕೊರೊನಾ ಸಂದರ್ಭದ ಸಂಪೂರ್ಣ ಚಿತ್ರಣ ಇದಾಗಿದೆ. ಮುಂದಿನ ದಿನಗಳಲ್ಲಿ ಸಾಂಕ್ರಾಮಿಕ ರೋಗಗಳ ಅಧ್ಯಯನ ಮಾಡುವವರಿಗೆ ಕೊರೊನಾ ಕುರಿತಾಗಿ ಖಂಡಿತಾ ಅತ್ಯುತ್ತಮ ಪುಸ್ತಿಕೆಯಾಗಿದೆ. ಈ ಕೈಪಿಡಿಯಲ್ಲಿ ಕಾಯಿಲೆಯಿಂದಾಗಿ ಪರಿಚಯವಾದ ಹೊಸ ಶಬ್ದಗಳಾದ ಕ್ವಾರೆಂಟೈನ್, ಐಸೋಲೇಶನ್, ಸ್ಯಾನಿಟೈಜಿಂಗ್, ಸೋಷಿಯಲ್ ಡಿಸ್ಟೆಂನ್ಸಿಂಗ್, ಲಾಕ್‍ಡೌನ್, ಸೀಲ್ ಡೌನ್‍ಗಳ ಸ್ಥೂಲ ಪರಿಚಯವಿದೆ. ಕೊರೊನಾ ಹರಡದಂತೆ ಮಾಡಬೇಕಾದ ಮುಂಜಾಗ್ರತೆಕ್ರಮಗಳು, ಪಾಲಿಸಬೇಕಾದ ಆರೋಗ್ಯಕರ ದಿನಚರಿ, ಬದಲಾಗಬೇಕಾದ ಆಲೋಚನಾ ಶೈಲಿಗಳ ಸರಳ ವಿವರಣೆಯಿದೆ. ಸಾಂಕ್ರಾಮಿಕ ರೋಗ ಹರಡುವಿಕೆಯನ್ನು ತಡೆಯುವಲ್ಲಿ, ಚಿಕಿತ್ಸೆ ನೀಡುವಲ್ಲಿ ತೊಡಗಿಸಿಕೊಂಡಿರುವ ಪ್ರತೀ ಸದಸ್ಯರ ಪರಿಶ್ರಮ ಹಾಗೂ ತ್ಯಾಗಗಳ ಚಿತ್ರಣವಿದೆ. ಅನಿವಾರ್ಯದ ಲಾಕ್‍ಡೌನ್‍ಗಳಿಂದ ಸಮಸ್ಯೆಗೀಡಾದ ವಲಸೆಕಾರ್ಮಿಕರ ದಯನೀಯ ಸ್ಥಿತಿಯ ಚಿತ್ರಣ ಮುಂಬರುವ ದಿನಗಳಲ್ಲಿ ಆಡಳಿತಾತ್ಮಕ ನಿರ್ಧಾರಗಳಿಗೆ ಪಾಠಗಳಾಗಿ ಉಳಿಯುತ್ತವೆ. ಭವಿಷ್ಯದಲ್ಲಿ ಅಗತ್ಯವೆನಿಸುವ ಟೆಲಿಮೆಡಿಸಿನ್ ಸೇವೆಗಳ ಅನುಭವ ಕಥನಗಳಿವೆ. ಅತ್ಯಗತ್ಯವೆನಿಸುವ ವೃದ್ಧರ ಆರೈಕೆಯ ಸೂತ್ರಗಳಿವೆ. ವೈದ್ಯಲೋಕದ ತಲ್ಲಣಗಳಿವೆ. ಲಾಕ್‍ಡೌನ್- ಡೈರಿ ಮನೋವೈದ್ಯನ ಆತ್ಮನಿವೇದನೆಯಾದರೂ ಕೊರೊನಾ ಸಂಧಿಗ್ಧತೆಯಲ್ಲಿದ್ದ ಪ್ರತೀ ವೈದ್ಯನ ಮನಸ್ಸಿನ ಮಾತಾಗಿದೆ.

ಕೊರೊನಾ ಜೊತೆ ಸೆಣೆಸಾಟದಲ್ಲಿ ವಿಶ್ವದ ದಿಗ್ಗಜರೇ ಕೈ ಚೆಲ್ಲಿ ಕುಳಿತಿದ್ದರೂ ಮಾನವತೆ ಗೆಲ್ಲಲಿ ಎನ್ನುವ ಆಶಯವಿದೆ. ಬೇಕು ಬೇಕೆಂಬ ಬಕಾಸುರ ಪ್ರವೃತ್ತಿಗೊಂದು ಮಾಸ್ಕು, ಭ್ರಷ್ಟತೆಯಿಂದ ದೂರವಿರಲು ಗವಸುಗಳನ್ನು ಹಾಕಿ, ಅಹಂಭಾವ, ಅಜ್ಞಾನದಿಂದಾದ ತಪ್ಪುಗಳನ್ನು ಆಗಾಗ ತೊಳೆಯುತ್ತಾ ಅನಗತ್ಯ ಸಂಬಂಧಗಳಿಂದ ಅಂತರ ಕಾಯ್ದುಕೊಂಡು, ವೃತ್ತಿ ಹಾಗೂ ಮನೆಗೆ ಪ್ರಾಶಸ್ತ್ಯ ನೀಡುವ ಜೀವನ ಶೈಲಿ ಆರಂಭವಾದರೆ ಪ್ರತಿಯೊಬ್ಬರ ಬದುಕಿನ ಲಾಕ್‍ಡೌನ್ ಡೈರಿಗಳಲ್ಲಿ ಸಾರ್ಥಕತೆಯ ಪುಟಗಳು ತುಂಬುತ್ತವೆ.

 

ಪುಟಗಳು: 140

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !