ಲೇಖಕರು:
ಸಂಪಾದಕ: ಡಾ।। ನಾ. ಸೋಮೇಶ್ವರ
ಲೇಖಕಿ: ಜ. ನಾ. ತೇಜಶ್ರೀ
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಶಾಲೆಯಲ್ಲಿ ಟಾಲ್ಸ್ಟಾಯ್ ತೀರ ದಡ್ಡನಾಗಿದ್ದ. ಶಾಲೆಯಲ್ಲಿ ಕಲಿಕೆಯ ಬಗ್ಗೆ ಆತನಿಗೆ ಆಸಕ್ತಿಯೇ ಇರಲಿಲ್ಲ. ಓದಿಗಿಂತ ಸುತ್ತಣ ಬದುಕಿನ ಬಗ್ಗೆ ಆತನಿಗೆ ಕಳಕಳಿ. ಕೇವಲ ಐದು ವರ್ಷದ ಬಾಲಕನಾಗಿದ್ದಾಗಲೇ ಆತನಿಗೆ ಈ ಜೀವನ ಎಂಬುದು ಕೇವಲ ವಿನೋದವಲ್ಲ, ಅದೊಂದು ಗಂಭೀರವಾದ ಸಮಸ್ಯೆ ಎಂದು ಅನ್ನಿಸಿತ್ತು. ಹದಿನಾರನೆಯ ವಯಸ್ಸಿನ ವೇಳೆಗೆ, ಸಾಂಪ್ರದಾಯಿಕವಾದ ಧಾರ್ಮಿಕ ಸಂಸ್ಥೆ-ಚರ್ಚಿನ ಬಗ್ಗೆ ನಂಬಿಕೆ ಹೊರಟು ಹೋಗಿತ್ತು. ಆಗಿನ್ನೂ ಟಾಲ್ಸ್ಟಾಯ್ಗೆ ಹತ್ತೊಂಬತ್ತು ವರ್ಷ. ಹುಡುಗ ಟಾಲ್ಸ್ಟಾಯ್ ನೋಡಲು ಚೆಲುವನಲ್ಲ. ಎಲ್ಲರೂ ತನ್ನನ್ನು ಮೆಚ್ಚಬೇಕು ಎಂದು ಬಯಸಿದ ಹುಡುಗ! ಆದರೆ ತನ್ನ ಕುರೂಪದ ಕಾರಣ ಯಾರೂ ತನ್ನನ್ನು ಪ್ರೀತಿಸುವುದಿಲ್ಲ ಎಂದೆನಿಸಿತು. ತನ್ನ ಈ ರೂಪದ ಬಗ್ಗೆ ಜಿಗುಪ್ಸೆಗೊಂಡು ಒಮ್ಮೆ ಆತ್ಮಹತ್ಯೆ ಮಾಡಿಕೊಳ್ಳಲು ಮನಸ್ಸು ಮಾಡಿದ. ಆದರೆ ಸುಪ್ರಸಿದ್ಧ ತತ್ವಜ್ಞಾನಿ ರೂಸೋವಿನ ಬರಹಗಳು ಕಣ್ಣಿಗೆ ಬಿದ್ದುವು. ಚರ್ಚನ್ನು, ಧರ್ಮವನ್ನು ನಿರಾಕರಿಸಿದ್ದ ಟಾಲ್ಸ್ಟಾಯ್ಗೆ ರೂಸೋವಿನ ತಾತ್ವಿಕ ಚಿಂತನೆಗಳು ಆಕರ್ಷಕವಾಗಿ ಕಂಡವು. ಅವನೊಳಗಿನ ಸಾಹಿತಿಯನ್ನು ಜಾಗೃತಗೊಳಿಸಿದವು. ಅದರ ಫಲವಾಗಿ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಕಾದಂಬರಿಕಾರ ಹುಟ್ಟಿದನು!
ಪುಟಗಳು: 48
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !