ಪ್ರಕಾಶಕರು: ಬಹುರೂಪಿ ಪ್ರಕಾಶನ
Publisher: Bahuroopi Prakashana
‘ಅವಧಿ’ಗೆ ಬರಹಗಳನ್ನು ಬರೆಯುವಾಗ ಸಂಯುಕ್ತೆ ಯಾವುದೇ ಚೌಕಟ್ಟನ್ನು ಹಾಕಿಕೊಂಡಿರಲಿಲ್ಲ. ನದಿ ಹರಿಯುವಷ್ಟೇ ಸಹಜವಾಗಿ ಅವಳು ಬೇರೆಬೇರೆ ಊರಿನ, ಬೇರೆಬೇರೆ ನೆಲದ ಕಥೆಗಳನ್ನು ಹೇಳುತ್ತಾ ಹೋಗಿದ್ದಳು. ಅವುಗಳಲ್ಲಿ ಕೆಲವು ಬರಹಗಳನ್ನು ಆರಿಸಿಕೊಂಡು ಈ ಪುಸ್ತಕವನ್ನು ರೂಪಿಸಲಾಗಿದೆ. ಪುಸ್ತಕದ ವಿವಿಧ ವಿಷಯಗಳ ಕ್ಯಾನ್ವಾಸೇ ಹೇಳುವ ಹಾಗೆ ಇಲ್ಲಿ ಮಕ್ಕಳ ಪದ್ಯಗಳಿಂದ ಹಿಡಿದು, ಮದೀಬಾವರೆಗೂ ಕೌದಿಯ ಚಿತ್ತಾರಗಳ ಹಾಗೆ ಹಲವು ಬಣ್ಣಗಳ ನೂಲುಗಳು ಸೇರಿವೆ.
- ಸಂಧ್ಯಾರಾಣಿ
‘ಬೈನರಿ ಜಗತ್ತಿನ ಮಧ್ಯೆ ಇದ್ದೂ ಜಗತ್ತು ಅದಕ್ಕಿಂತ ಭಿನ್ನವಾಗಿ ಕಟ್ಟಲ್ಪಟ್ಟಿದ್ದು ಎನ್ನುವುದನ್ನು ಸಮರ್ಥವಾಗಿ ಈ ಕೃತಿಯಲ್ಲಿ ಮನವರಿಕೆ ಮಾಡಿಸುತ್ತಿದ್ದಾರೆ' ಎನ್ನುವ ಮಾತು ಸಂಯುಕ್ತಾ ಪುಲಿಗಲ್ ಅವರ 'ಲ್ಯಾಪ್‌ಟಾಪ್ ಪರದೆಯಾಚೆಗೆ' ಪುಸ್ತಕದ ಬೆನ್ನುಡಿಯಲ್ಲಿ ಇದೆ. ಈ ಪುಸ್ತಕದಲ್ಲಿ ಇರುವ ಬಿಡಿ ಬರಹಗಳನ್ನು ಓದುತ್ತಿದ್ದರೆ ಈ ಮಾತು, ಪುಸ್ತಕಕ್ಕೆ ಬಹಳ ಸೂಕ್ತ ಎಂಬ ಅನಿಸಿಕೆ ಮೂಡುತ್ತದೆ. 'ಡಾರ್ಕ್ ಅಂಡ್ ಲವೀ ಟೂ...' ಬರಹದಲ್ಲಿ ಮನುಷ್ಯನ ಕಪ್ಪು ಮತ್ತು ಬಿಳಿ ತೊಗಲಿನ ಕುರಿತು ಸಂಯುಕ್ತಾ ಅವರು ದಾಖಲಿಸಿರುವ ಅನುಭವ-ಅನಿಸಿಕೆಗಳು ನೆನಪಿನಲ್ಲಿ ಉಳಿಯುವಂಥವು. ಇಲ್ಲಿನ ಒಂದೆರಡು ಬರಹಗಳು ಚರ್ಚಾರ್ಹ ವಸ್ತುಗಳನ್ನು ಅಯ್ಕೆ ಮಾಡಿಕೊಂಡಿವೆ. ಅವುಗಳಲ್ಲಿ ಲೇಖಕಿ ತಮ್ಮ ಅಭಿಪ್ರಾಯವನ್ನು ಸ್ಪುಟವಾಗಿ ದಾಖಲಿಸಿದ್ದಾರೆ. ಅಲ್ಲಿ ಪಾರಿಭಾಷಿಕದ ರೂಪದಲ್ಲಿ ಬಳಸಿರುವ ಪದಗುಚ್ಛಗಳ ಬಗ್ಗೆ ಪ್ರಶ್ನೆಗಳು ಮೂಡಬಹುದು - ಆದರೆ, ಅಲ್ಲಿ ಲೇಖಕಿ ಹೊಂದಿರುವ ಸದಾಶಯವು ಪ್ರತಿಫಲಿತವಾಗಿದೆ ಎಂಬುದನ್ನೂ ಗುರುತಿಸಬೇಕು. ಅಂದಹಾಗೆ, ಇಲ್ಲಿರುವವು ಸಂಯುಕ್ತಾ ಅವರು ಬ್ಲಾಗಿನಲ್ಲಿ ಬಿಡಿಬಿಡಿಯಾಗಿ ಬರೆದ ಬರಹಗಳು.
- ಪ್ರಜಾವಾಣಿ ಪುಸ್ತಕ ವಿಮರ್ಶೆ
ಪುಟಗಳು: 63
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !