ಪ್ರಕಾಶಕರು: ಅಕ್ಷರ ಪ್ರಕಾಶನ
Publisher: Akshara Prakashana
ಬದುಕಿಗೆ ಹತ್ತಿರವಾದ ಪಾತ್ರಗಳನ್ನು ನಾವು ಸ್ವಾಭಾವಿಕವಾಗಿಯೇ ಪ್ರೀತಿಸುವಂತೆ ಕತೆಗಳು ನಿರೂಪವಾಗಿವೆ. ರಮ್ಯ ಸಂಪ್ರದಾಯದ ಕತೆಗಾರರ ಹಾಗೆ ದೂರ ನಿಲ್ಲದೇ, ದೂರ ನಿಂತು ವ್ಯಾಖ್ಯಾನ ಮಾಡದೇ, ವಿವೇಕ ಕತೆಗಳ ಒಳಗೆ ಪ್ರವೇಶಿಸಿಬಿಡುತ್ತಾರೆ. ನಮ್ಮನ್ನು ಒಳಗೆ ಕರೆದು, ಅವುಗಳೊಳಗೆ, ಅವರ ಪಾತ್ರಗಳ ಸಂಗಡ ನಾವೂ ಬದುಕುವಂತೆ ಮಾಡಿಬಿಡುತ್ತಾರೆ. ಇದು ಅವರ ಹೆಚ್ಚುಗಾರಿಕೆಯಲ್ಲದೇ ಇನ್ನೇನು?
- ದೇಶ ಕುಲಕರ್ಣಿ
ತಾನು ಕಂಡ, ಗ್ರಹಿಸಿದ ಸಂಗತಿಗಳಿಗೆಲ್ಲ ತನ್ನ ಮಾರ್ದವತೆಯ ಸ್ಪರ್ಶ ಕೊಡುವ, ಯಾರನ್ನೂ ಯಾವುದನ್ನೂ ಬಿಡಿಯಾಗಿ ಎಳೆದು ಹರಿದು ನೋಯಿಸದೆ, ಬದುಕಿನ ನೇಯ್ಗೆಯನ್ನೆ ಇಡಿಯಾಗಿ ಅಕ್ಕರೆ ಆದರದಿಂದ ನೋಡುವ, ಭಾಷೆಯೆಂಬ ಇಂದ್ರಿಯಕ್ಕೂ ನಿಲುಕದ ನಾದಗಳಿಗೆ ತನ್ನ ಚೇತನವನ್ನು ಸದಾ ಹುರಿಗೋಳಿಸಿಕೋಂಡಿರುವ ಹುರುಪಿನ ಜೀವಿ ವಿವೇಕ ಶಾನಭಾಗ ಬರೆದ ವಿಶಿಷ್ಟ ಕತೆಗಳು ಇಲ್ಲಿವೆ. ತೀವ್ರ ಸಂಯಮ ಮತ್ತು ಅಷ್ಟೇ ಸಂಭ್ರಮಗಳಿಂದ ವಿವೇಕ್ ಬರೆದಿರುವ ಈ ವೈವಿಧ್ಯಪೂರ್ಣ ಕತೆಗಳು ಸಹಜೀವಿಯ ಅಂತರಂಗವನ್ನು ಬೆಚ್ಚಗಾಗಿಸುತ್ತಲೇ ಸಂವೇದನೆಯನ್ನು ಹಿಗ್ಗಿಸುವ ಶಕ್ತಿ, ನಮ್ರತೆ ಮತ್ತು ತನ್ಮಯತೆಯನ್ನು ಪಡೆದಿವೆ.
- ಜಯಂತ ಕಾಯ್ಕಿಣಿ
ಪುಟಗಳು: 125
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !