ಮನೆಗೆಲಸವನ್ನು ಜಾಣ್ಮೆಯಿಂದ, ಹಣ ಪೋಲಾಗದಂತೆ, ಮತ್ತು ಮನೆಯಲ್ಲಿರುವವರ ನೆಮ್ಮದಿ ಕೆಡದಂತೆ ನಡೆಸಿಕೊಂಡು ಹೋಗುವುದು ಹೇಗೆ ಎಂಬುದನ್ನು ಈ ಪುಸ್ತಕದಲ್ಲಿ ತಿಳಿಸಿಹೇಳಲಾಗಿದೆ. ಇದೇ ರೀತಿಯಲ್ಲಿ ಮನೆಯಲ್ಲಿರುವ ಉಪಕರಣಗಳಿಂದ ಹೆಚ್ಚಿನ ನೆರವನ್ನು ಪಡೆಯುವುದು ಹೇಗೆ, ಉಪಕರಣಗಳು ಕೆಟ್ಟುಹೋಗದಂತೆ ನೋಡಿಕೊಳ್ಳುವುದು ಹೇಗೆ, ಅವುಗಳಿಂದ ಕೆಲಸಗಳನ್ನು ಮಾಡಿಸಿಕೊಳ್ಳುವಾಗ ಯಾವ ರೀತಿಯ ಹಣದ ಮತ್ತು ಸಮಯದ ಉಳಿತಾಯವನ್ನು ಮಾಡಿಕೊಳ್ಳಬಹುದು ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ಊಟ-ತಿಂಡಿಗಳನ್ನು ಮಾಡುವಲ್ಲೂ ತಮ್ಮ ಜಾಣ್ಮೆಯನ್ನು ಬಳಸಲು ಸಾಕಷ್ಟು ಎಡೆಗಳಿವೆ. ಮಾಡಿದ ತಿನಿಸುಗಳು ರುಚಿಯಾಗಿರಬೇಕು, ನೋಡಲು ಕಣ್ಸೆಳೆಯುವಂತಿರಬೇಕು, ಹಣದ ಸರಿಬಳಕೆಯಾಗಬೇಕು, ಮತ್ತು ತಿಂದವರ ಆರೋಗ್ಯ ಮತ್ತು ನೆಮ್ಮದಿಗಳೂ ಕೆಡದಂತಿರಬೇಕು. ಇವೆಲ್ಲವನ್ನೂ ಗುರಿಯಾಗಿಟ್ಟುಕೊಂಡವರಿಗೆ ಅಡಿಗೆಯೆಂಬುದು ಯಾವತ್ತಿಗೂ ಒಂದು ಹೊರೆಯೆಂದು ಅನಿಸಲಾರದು ಎಂಬುದನ್ನೂ ಈ ಪುಸ್ತಕ ತೋರಿಸಿಕೊಡುತ್ತದೆ.
ಮನೆಗೆಲಸದ ಕಯ್ಪಿಡಿ, ಬಾರತಿ ಬಟ್,Bharati Bhat,Manegelasada Kaipidi