Click here to Download MyLang App

ಕ್ಷಣ ಹೊತ್ತು ಅಣಿ ಮುತ್ತು,  ಎಸ್.ಷಡಕ್ಷರಿ,  Shadakshari,    Kshana Hottu Ani Muttu,

ಕ್ಷಣ ಹೊತ್ತು ಆಣಿ ಮುತ್ತು (ಇಬುಕ್)

e-book

ಪಬ್ಲಿಶರ್
ಎಸ್.ಷಡಕ್ಷರಿ
ಮಾಮೂಲು ಬೆಲೆ
Rs. 125.00
ಸೇಲ್ ಬೆಲೆ
Rs. 125.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

 

ಪ್ರಕಾಶಕರು: ರಮಣಶ್ರೀ ಪ್ರಕಾಶನ

Publisher: Ramanashree Prakashana

 

ಕನ್ನಡದಲ್ಲಿ ಮೂರುವರೆ ಲಕ್ಷಕ್ಕೂ ಹೆಚ್ಚು ಪ್ರತಿಗಳ ಮಾರಾಟದ ಸರಿಗಟ್ಟಲಾಗದ ದಾಖಲೆ ಹೊಂದಿರುವ ಕ್ಷಣ ಹೊತ್ತು ಆಣಿ ಮುತ್ತು ಸರಣಿಯ ಮೊದಲ ಪುಸ್ತಕ ಈಗ ಮೈಲ್ಯಾಂಗ್ ಮೊಬೈಲ್ ಆ್ಯಪ್ ಮೂಲಕ ಓದಿ ನಿಮ್ಮ ಮೊಬೈಲಿನಲ್ಲೇ..

 

ಪುಸ್ತಕ ಪರಿಚಯ:


ಒಬ್ಬ ಪದವೀಧರ ಇಂಜಿನಿಯರ್ ತನ್ನ ಉದ್ಯಮ ಬಿಟ್ಟು ಹೊಟೆಲ್ ವ್ಯವಸಾಯದ ಕಡೆಗೆ ಒಲಿಯುತ್ತಾನೆ. ಯಶಸ್ಸನ್ನೂ ಧನವನ್ನೂ ಸಂಪಾದಿಸುತ್ತಾನೆ. ಜೊತೆಗೆ ಓದುವ ಹುಚ್ಚು ಬೇರೆ. ಶಾಲೆಯ ಎಳೆಯ ಮಕ್ಕಳನ್ನು ಕೂಡಿಸಿ ವ್ಯಕ್ತಿ ವಿಕಸನದ ಕಮ್ಮಟಗಳನ್ನು ನಡೆಸುತ್ತಾನೆ. ದೇಶವಿದೇಶದ ಕತೆ ಉಪಕತೆಗಳನ್ನು ಹೇಳುತ್ತ ಮಕ್ಕಳನ್ನು ರಂಜಿಸುತ್ತಾನೆ. ಇಂಥದೊಂದು ವ್ಯಕ್ತಿವಿಕಸನ ಶಿಬಿರಕ್ಕೆ ಕನ್ನಡ ದಿನಪತ್ರಿಕೆಯ ಸಂಪಾದಕರೊಬ್ಬರು ಅತಿಥಿಯಾಗಿ ಬಂದಿರುತ್ತಾರೆ. ಅವರು ಈ ಇಂಜಿನಿಯರ್‌ನ ಪ್ರತಿಭೆ ಹಾಗೂ ಪ್ರತಿಬದ್ಧತೆ ಕಂಡು ಪ್ರಭಾವಿತರಾಗುತ್ತಾರೆ. ಒಂದು ದಿನ ಫೊನ್ ಮಾಡುತ್ತಾರೆ. 'ನೀವು ನಮ್ಮ ಪತ್ರಿಕೆಗೆ ಒಂದು ಅಂಕಣವನ್ನು ಏಕೆ ಪ್ರಾರಂಭಿಸಬಾರದು?' ಎನ್ನುತ್ತಾರೆ. ಆಗ ಉತ್ತರ ಬರುತ್ತದೆ, 'ಸರ್, ನೀವು ರಾಂಗ ನಂಬರ್‌ಗೆ ಫೋನ್ ಮಾಡುತ್ತಿರುವಿರಿ. ಯಾವದೋ ಲೇಖಕನಿಗೆ ಹೇಳುವ ಬದಲು ಒಬ್ಬ ಹೊಟೆಲ್ ಉದ್ಯಮಿಗೆ ಅಂಕಣ ಲೇಖನ ಬರೆಯಲು ಕೇಳುತ್ತಿದ್ದೀರಿ. ನಾನು ಒಂದೆರಡು ಲೇಖನ ಬರೆದಿರಬಹುದು, ಮಕ್ಕಳಿಗಾಗಿ ವ್ಯಕ್ತಿವಿಕಸನ ಕಮ್ಮಟ ನಡೆಸಿರಬಹುದು. ಆದರೆ ನಾನು ವೃತ್ತಿಯಿಂದ, ಪ್ರವೃತ್ತಿಯಿಂದ ಲೇಖಕನಲ್ಲ. ಪ್ರತಿದಿನ ಅಂಕಣ ಬರೆವ ಬಂಡವಾಳ, ಓದು, ಅನುಭವ ನನಗಿಲ್ಲ.' ಆಗ ಸಂಪಾದಕರು ನುಡಿಯುತ್ತಾರೆ, 'ನೀವು ವ್ಯಕ್ತಿವಿಕಸನ ಕಾರ್ಯಕ್ರಮಗಳಲ್ಲಿ ಬಳಸಿದ ಕತೆ ಉಪಕತೆಗಳು ರೋಚಕವಾಗಿವೆ. ಮುತ್ತಿನಂತಹ ಮಾತು ನುಡಿದಿದ್ದೀರಿ. ಅವನ್ನೇ ಬಳಸಿ ಅಂಕಣ ಬರೆಯಬಹುದಲ್ಲ.'ಉದ್ಯಮಿ ಅಂಕಣ ಬರೆವ ಸಾಹಸಕ್ಕಿಳಿಯುತ್ತಾರೆ. ಅವರ ಮಿತ್ರರೊಬ್ಬರು ಅಂಕಣಕ್ಕೆ ಹೆಸರೊಂದನ್ನು ಸೂಚಿಸುತ್ತಾರೆ. ಅವರು ಮಕ್ಕಳಿಗೆ ಹೇಳಿದ ನೀತಿಕತೆಗಳು, ಹಿರಿಯರ ಜೀವನದ ಘಟನೆಗಳು, ಸಣ್ಣವರ ಜೀವನದಲ್ಲಿಯ ದೊಡ್ಡ ಘಟನೆಗಳು, ದೊಡ್ಡವರ ಜೀವನದಲ್ಲಿಯ ಸಣ್ಣ ಘಟನೆಗಳು, ಮಹಾನ್ ಚೇತನಗಳು (ಭಗವಾನ್ ರಮಣ ಮಹರ್ಷಿ, ಸ್ವಾಮಿ ವಿವೇಕಾನಂದ, ಸ್ವಾಮಿ ಚಿನ್ಮಯಾನಂದ, ಸಿದ್ಧೇಶ್ವರಸ್ವಾಮಿಗಳು, ಸ್ವಾಮಿ ಬ್ರಃಮಾನಂದರು, ದಾದಾ ವಾಸ್ವನಿಯವರು, ಹೆಡ್ವಿಗ್ ಲೂಯಿ ಮುಂತಾದವರು) ನುಡಿದ ಮಾತುಗಳು ಅವರ ಅಂಕಣದಲ್ಲಿ ಮಿಂಚುತ್ತವೆ. 140 ಲೇಖನಗಳು ಆದಾಗ ಅಸಂಖ್ಯ ಫೋನ್ ಕಾಲ್‌ಗಳು ಎಸ್‌ಎಂಎಸ್‌ಗಳು ಬರುತ್ತವೆ. 75 ಲೇಖನಗಳ ಮೊದಲ ಪುಸ್ತಕ -ಕ್ಷಣ ಹೊತ್ತು ಆಣಿ ಮುತ್ತು ಪ್ರಕಟವಾಗುತ್ತದೆ. ಖ್ಯಾತ ಕಾದಂಬರಿಕಾರರಾದ ಡಾ|ಎಸ್.ಎಲ್.ಭೈರಪ್ಪ ಮುನ್ನುಡಿ ಬರೆಯುತ್ತಾರೆ. ಸುತ್ತೂರು ಶ್ರೀಕ್ಷೇತ್ರದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು, ಚಿನ್ಮಯ ಮಿಷನ್‌ನ ಸ್ವಾಮಿ ಬ್ರಹ್ಮಾನಂದರು ಆಶೀರ್ವಚನ ಬರೆಯುತ್ತಾರೆ. ಹಲವಾರು ಪ್ರತಿಷ್ಠಿತರು ಮೆಚ್ಚುಗೆಯ ಪತ್ರಗಳನ್ನು ಬರೆಯುತ್ತಾರೆ. (ನಾಡೋಜ ಕವಿ ಚೆನ್ನವೀರ ಕಣವಿ, ಟಿವಿ ಸೀರಿಯಲ್ ದೊರೆ ಟಿ.ಎನ್.ಸೀತಾರಾಮ, ಆಧುನಿಕ ಚುಟುಕುಬ್ರಹ್ಮ ಡುಂಡಿರಾಜ ಮುಂತಾದವರು). ಈ ಪುಸ್ತಕವನ್ನು ಆಶಾವಾದದ ಅಮರಕೋಶ ಎಂದೊಬ್ಬರು ಕರೆಯುತ್ತಾರೆ(ಗೋ.ರು.ಚೆನ್ನಬಸಪ್ಪ).

 

- ಡಾ.ಜಿ.ವಿ.ಕುಲಕರ್ಣಿ, ಮುಂಬೈ

 

ಪುಟಗಳು: 150

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)