
ಮೈನಾಕ : ಕಲ್ಲಾದೆ ಏಕೆಂದು ಬಲ್ಲೆ!
ರಾಮಾಯಣ - ಮೈನಾಕ. ಇದು, ಆಯಿಲ್ ರಿಗ್ಗಿಂಗ್ ಹಡಗಿನ ಸಿಬ್ಬಂದಿಯ ಸೋಗಿನಲ್ಲಿದ್ದ ಕಡಲುಗಳ್ಳರ ಕೋಡ್ ಪದಗಳು. ಹಾಗೇ, ಮೈನಾಕ - ಶಿವನರಸಿ ಪಾರ್ವತಿಯ ಹಿರಿಯಣ್ಣ - ಹನುಮನನ್ನು ಲಂಕೆಯ ಮಾರ್ಗ ಮಧ್ಯೆ ತಡೆದ ದೈತ್ಯ ಪರ್ವತನಾಥ. ಇದು, ಸಾಗರ ತಜ್ಞೆ ವೀಣಾ ಹೇಳಿದ ಪುರಾಣದ ಲಿಂಕು. ಮಾಲ್ಡೀವ್ ದ್ವೀಪಸಮೂಹದ ನಡುವೆ, ಸಮುದ್ರದಾಳದಲ್ಲಿ ಕಲ್ಲಿನ ವೈಬ್ರೇಷನ್ ಬದಲು ಲೋಹದ ಕುರುಹು ಸಿಕ್ಕ ಖುಷಿಯಲ್ಲಿ ಕಡಲುಗಳ್ಳರು. ಅವರ ಹೆಡೆಮುರಿ ಕಟ್ಟಿ, ಮೈನಾಕ ರಕ್ಷಿಸುವ ಪಣ ತೊಟ್ಟ ಭಾರತೀಯ ಗುಪ್ತಚರ ಇಲಾಖೆ. ಗೆಲುವು ಯಾರಿಗೆ? ನಿಜಕ್ಕೂ ಮೈನಾಕದ ಮೇಲೆ ಕಡಲುಗಳ್ಳರ ಕಣ್ಣು ಬಿದ್ದಿದ್ದು ಯಾಕೆ? ಒಂದು ಕಾಲದಲ್ಲಿ ರೆಕ್ಕೆ ಕಟ್ಟಿ ಹಾರುತ್ತಿದ್ದ ಮೈನಾಕ, ಇಂದೇಕೆ ಸಾಗರದಾಳದಲ್ಲಿ ಅಡಗಿ ಕುಳಿತಿದೆ?