Click here to Download MyLang App

ಡಾ. ನರೇಂದ್ರ ರೈ ದೇರ್ಲ,  Narendra Rai Derla,  Koronanantharada Gramabharatha,  Kannada,  Dr. Narendra Rai Derla,

ಕೊರೋನಾ ನಂತರದ ಗ್ರಾಮಭಾರತ (ಇಬುಕ್)

e-book

ಪಬ್ಲಿಶರ್
ಡಾ. ನರೇಂದ್ರ ರೈ ದೇರ್ಲ
ಮಾಮೂಲು ಬೆಲೆ
Rs. 130.00
ಸೇಲ್ ಬೆಲೆ
Rs. 130.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಈ ಕೃತಿಯು ಹಲವು ಮಗ್ಗುಲುಗಳಿಂದ ಗ್ರಾಮ ಭಾರತವನ್ನು ತೆರೆದಿಡಲು ಹೊರಡುತ್ತದೆ. ಅದರ ಒಂದು ಆಯಾಮ ಕೊರೋನಾ ಹುಟ್ಟಿಸಿದ ಹತಾಶೆಯ ಆಯಾಮವಾಗಿದೆ.

ಕೊರೋನಾವು ಹಲವು ‘ವಾಲ್ಮೀಕಿ’ಗಳನ್ನು ಹುಟ್ಟಿಸಿದೆ. ಅಂತಹ ಒಬ್ಬ ವಾಲ್ಮೀಕಿಯ ಬಗ್ಗೆ ವಗ್ಗ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ನನ್ನ ಮಿತ್ರ ಸಂತೋಷ್ ಸಾಲಿಯಾನ್ ಅವರು ಇತ್ತೀಚೆಗೆ ಹೇಳಿದರು. ಶಾಲೆ ಕ್ವಾರಂಟೈನ್ ಕೇಂದ್ರವಾಗಿದೆ. ಮುಂಬೈಯಿಂದ ಬಂದವರೊಬ್ಬರು ಕ್ವಾರಂಟೈನ್ ಮುಗಿಸಿ ಮರುದಿನ ಮನೆಗೆ ಹೋಗಬೇಕಾಗಿದ್ದವರು ಅಳುತ್ತಿದ್ದಾರೆ. ಏಕೆ ಎಂದು ವಿಚಾರಿಸಿದಾಗ ಮುಂಬೈಗೆ ಹೊಟೇಲ್‌ನಲ್ಲಿ ಕ್ಲೀನ್ ಮಾಡುವವನಾಗಿ ಹೋದ ನಾನು ಚರಂಡಿಯ ನೀರನ್ನು ಸೋಸಿ ಕುದಿಸಿ ಕುಡಿದು ಬದುಕಿದ್ದೇನೆ. ಸಂಪಾದನೆ ಯನ್ನೆಲ್ಲ ಮನೆಗೆ ಕೊಟ್ಟೆ. ಇವತ್ತು ಫೋನ್ ಮಾಡಿ ನಾಳೆ ಬರುತ್ತೇನೆ ಎಂದರೆ ಹೆಂಡತಿ ‘ಬರಬೇಡಿ’ ಎನ್ನುತ್ತಿದ್ದಾಳೆ ಎಂದು ಜೋರಾಗಿ ಅತ್ತರು ಎಂದು ಸಂತೋಷ್ ಅವರ ಅನುಭವವನ್ನು ಹೇಳಿ ಇದನ್ನೆಲ್ಲ ನೋಡಿ ನನಗೆ ಬದುಕಿನ ದೃಷ್ಟಿಕೋನವೇ ಬದಲಾಗಿದೆ ಎಂದಿದ್ದರು. ನೀನು ತಲೆ ಒಡೆದು ತಂದ ಸಂಪಾದನೆಯ ಪಾಪದ ಫಲದಲ್ಲಿ ನಾವು ಪಾಲುದಾರರಲ್ಲ ಎಂದು ಹೆಂಡತಿ-ಮಕ್ಕಳು ಹೇಳಿದಾಗ ಅಲ್ಲವೆ ರತ್ನಾಕರನೆಂಬ ಬೇಡನೊಳಗೆ ವಾಲ್ಮೀಕಿ ಹುಟ್ಟಿದ್ದು; ಅದೇ ಇದು.

ದೇರ್ಲರ ಕೃತಿಯಲ್ಲಿ ಈ ರೀತಿಯ ಹಲವು ವಾಲ್ಮೀಕಿಗಳು ಬರುತ್ತಾರೆ. ಅವರಲ್ಲೊಬ್ಬ ವಾಲ್ಮೀಕಿ ಹೀಗೆ: ಕತಾರ್‌ನಲ್ಲಿ ಉದ್ಯೋಗದಲ್ಲಿದ್ದ ವ್ಯಕ್ತಿ ಊರಿಗೆ ಬಂದಾಗೆಲ್ಲ ತನ್ನ ಸಂಪಾದನೆಯನ್ನು ಸಹೋದರ ಸಹೋದರಿಯರಿಗೆ ಹಂಚಿ ಹೋಗುತ್ತಿದ್ದರು. ಕೋರೋನಾದಿಂದ ಶಾಶ್ವತವಾಗಿ ಉಳಿಯಲು ಬಂದ ವ್ಯಕ್ತಿಯನ್ನು ತಾಯಿಯ ಹೊರತಾಗಿ ಯಾರೂ ಪ್ರೀತಿಯಿಂದ ಮಾತನಾಡಿಸುವುದೇ ಇಲ್ಲ. ‘‘ಐದು ಲಕ್ಷವಿದೆ. ಎಲ್ಲಾದರೂ ಒಂದು ಎಕರೆ ಜಾಗ ಕೊಡಿಸಿ’’ ಎಂದು ಆ ವ್ಯಕ್ತಿ ಕೇಳುತ್ತಾರೆ. ತನ್ನ ಶ್ರಮದ ಫಲವನ್ನು ಅನುಭವಿಸುವವರೆಲ್ಲರೂ ತನ್ನೊಂದಿರುತ್ತಾರೆ ಎನ್ನುವ ನಂಬಿಕೆಯು ಹಾರಿ ಹೋಗಿ ‘‘ನಿನಗೆ ನೀನೇ ಗೆಳೆಯ ನಿನಗೆ ನೀನೆ’’ ಎಂದು ಹುಟ್ಟುವ ಅರಿವೇ ವಾಲ್ಮೀಕಿ.

 

ಕೃತಿಯು ಕಾಣಿಸುವ ಇನ್ನೊಂದು ಮಗ್ಗುಲು ಗ್ರಾಮ ಭಾರತದ ಸಮಸ್ಯೆಗಳದ್ದು. ಇದು ಕೊರೋನಾದಿಂದಾಗಿ ಆದದ್ದಲ್ಲ. ಇದ್ದದ್ದೆ. ೮೦ ಖಂಡಿ ಅಡಿಕೆ ಬೆಳೆಯುವ ಕುಟುಂಬದ ಏಕೈಕ ಯುವಕನಿಗೆ ಮದುವೆಯಾಗಲು ಯುವತಿಯರು ಒಪ್ಪದಿರುವುದು ಯಂತ್ರ ನಾಗರಿಕತೆ (ಯಂತ್ರ ಅಲ್ಲ; ಯಂತ್ರ ನಾಗರಿಕತೆ) ಹುಟ್ಟುಹಾಕಿದ ದೃಷ್ಟಿಕೋನವು ಗ್ರಾಮ ಭಾರತವನ್ನು ಕಾಡುವ ರೀತಿಯಾಗಿದೆ. ಗ್ರಾಮಾಡಳಿತವು ಜಾತಿ ರಾಜಕೀಯವನ್ನು ಹುಟ್ಟು ಹಾಕಿ ಗ್ರಾಮವನ್ನು ವಿಭಜಿಸುತ್ತಾ ಹೋಗಿರುವುದು ರಾಜಕೀಯಾತ್ಮಕ ಸಮಸ್ಯೆ. ಗ್ರಾಮಗಳಿಂದ ಕೆಂಪು ಬಸ್ಸಿನಲ್ಲಿ ಹೋಗುವ ಕೆಲಸಗಾರರು, ಹಳದಿ ಬಸ್ಸಿನಲ್ಲಿ ಹೋಗುವ ಮಕ್ಕಳು ಆರ್ಥಿಕ ಸಮಸ್ಯೆಗಳ ಎರಡು ಮುಖಗಳಾಗಿ ತೋರಿ ಬರುವ ರೂಪಕಗಳಾಗಿವೆ. ಭಾರತದಿಂದ ಮಾರಲ್ಪಟ್ಟ ಕಬ್ಬಿಣದಿಂದಲೇ ತಯಾರಿಸಿದ ಚೀನಾದ ಬ್ಲೇಡ್ ಇರುವ ಯಂತ್ರವೇ ನಮ್ಮ ರೈತರಿಗೆ ಬೇಕಾಗುವುದು ವರ್ತಮಾನದ ಆರ್ಭಟ ರೂಪಿ ಸ್ವದೇಶೀಯತೆಯನ್ನು ಅಣಕಿಸುತ್ತದೆ.

ಈ ಎಲ್ಲದರ ಆಚೆಗೆ ಕೋರೋನಾದ ನಂತರದ ಗ್ರಾಮ ಭಾರತವನ್ನು ದೇರ್ಲ ಕಾಣಿಸಲು ಹೊರಟಿದ್ದಾರೆ. ಇದು ಗಾಂಧಿಯ ಗ್ರಾಮ ಭಾರತ. ಗಾಂಧಿಯ ಸ್ವದೇಶಿ. ಇಲ್ಲಿ ಆರ್ಭಟವಿಲ್ಲ. ಆದ್ದರಿಂದ ಡೋಂಗಿಯ ಅಗತ್ಯವೂ ಇಲ್ಲ.

 

- ಅರವಿಂದ ಚೊಕ್ಕಾಡಿ

 

 

ಪುಟಗಳು: 128

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
U
Umesh Chandra N K

Best book.