ಲೇಖಕರು:
ರವೀಂದ್ರನಾಥ ಠಾಕೂರ್ ಅವರ ಎರಡು ನಾಟಕಗಳು
ಕೆಂಪು ಕಣಗಿಲೆ ರಾಜ ಮತ್ತು ರಾಣಿ
ಕನ್ನಡ ರೂಪ: ಕೆ.ವಿ. ಸುಬ್ಬಣ್ಣ
ಪ್ರಕಾಶಕರು: ಅಕ್ಷರ ಪ್ರಕಾಶನ
Publisher: Akshara Prakashana
ರವೀಂದ್ರನಾಠ ಠಾಕೂರ್ ಅವರ ನೂರ ಐವತ್ತನೆಯ ಜನ್ಮಶತಾಬ್ದಿಯು ದೇಶಾದ್ಯಂತ ಆಚರಣೆಯಾಗುತ್ತಿರುವ ಸಂದರ್ಭದಲ್ಲಿ, ಅಕ್ಷರ ಪ್ರಕಾಶನವು ಠಾಕೂರರ ಈ ಎರಡು ನಾಟಕಗಳ ಕನ್ನಡಾನುವಾದದ ಪ್ರಕಟಣೆಯ ಮೂಲಕ ಈ ಸ್ಮ ತಿ ಸಂಭ್ರಮಕ್ಕೆ ಸೇರಿಕೊಳ್ಳುತ್ತಿದೆ. ದಿ| ಕೆ.ವಿ. ಸುಬ್ಬಣ್ಣನವರು ಹತ್ತಾರು ವರ್ಷಗಳ ಹಿಂದೆಯೇ ಸಿದ್ಧಪಡಿಸಿದ ಅನುವಾದಗಳು ಇವು. ೧೯೯೮ರಲ್ಲಿ, ನೀನಾಸಮ್ ತಂಡದ ಪ್ರಯೋಗಕ್ಕಾಗಿ ಅವರು ಠಾಕೂರರ ‘ರಕ್ತ ಕರಬೀ’ ನಾಟಕವನ್ನು ‘ಕೆಂಪು ಕಣಗಿಲೆ’ ಎಂದೂ ೨೦೦೪ರಲ್ಲಿ ನೀನಾಸಮ್ ತಿರುಗಾಟದ ಪ್ರಯೋಗಕ್ಕಾಗಿ ‘ರಾಜಾ ಓ ರಾಣಿ’ ನಾಟಕವನ್ನು ‘ರಾಜ ಮತ್ತು ರಾಣಿ’ ಎಂದೂ ಕನ್ನಡೀಕರಿಸಿದ್ದರು. ಅವೆರಡೂ ಅನುವಾದಗಳನ್ನೂ ಈಗ ಸಣ್ಣಪುಟ್ಟ ಪರಿಷ್ಕಾರಗಳೊಂದಿಗೆ ಇಲ್ಲಿ ಪ್ರಕಟಿಸಲಾಗುತ್ತಿದೆ. ಮೇಲೆ ಉಲ್ಲೇಖಿಸಿದ ಪ್ರಯೋಗಗಳ ಸಂದರ್ಭದಲ್ಲಿ ಈ ನಾಟಕಗಳನ್ನು ಕುರಿತು ಪ್ರಕಟವಾದ ಟಿಪ್ಪಣಿಗಳೂ ಅನುಬಂಧದಲ್ಲಿ ಸೇರಿವೆ. ರಂಗಭೂಮಿಯ ಮೇಲೆ ತರುವುದಕ್ಕಾಗಿಯೇ ತಯಾರಾದ ಈ ಕನ್ನಡ ರೂಪಗಳು ರಂಗಾಸಕ್ತರನ್ನೂ ಮತ್ತು ಸಾಹಿತ್ಯದ ವಿದ್ಯಾರ್ಥಿಗಳನ್ನೂ ಆಕರ್ಷಿಸಲೆಂದು ನಮ್ಮ ಹಂಬಲ.
ಪುಟಗಳು: 166
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !