Click here to Download MyLang App

ಬೆಳ್ಳಕ್ಕಿ ಸಿ ಯು,    ಕೇಳುವ ಕೌತುಕ - ಮಾಧ್ಯಮಲೋಕದ ರಸನಿಮಿಷಗಳು,    Keluva Koutuka,  Bellakki C U ,

ಕೇಳುವ ಕೌತುಕ - ಮಾಧ್ಯಮಲೋಕದ ರಸನಿಮಿಷಗಳು (ಇಬುಕ್)

e-book

ಪಬ್ಲಿಶರ್
ಬೆಳ್ಳಕ್ಕಿ ಸಿ ಯು
ಮಾಮೂಲು ಬೆಲೆ
Rs. 135.00
ಸೇಲ್ ಬೆಲೆ
Rs. 135.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

 

 ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ಮಾಧ್ಯಮವೆಂಬುದೊಂದು ಮಾಯಾಲೋಕ. ಅಲ್ಲಿ ಪ್ರತಿದಿನ ಪ್ರತಿಕ್ಷಣ ಸಾವಿರಾರು ಸ್ವಾರಸ್ಯಕರ ಘಟನೆ, ಬೆಳವಣಿಗೆಗಳು ಸಂಭವಿಸುತ್ತವೆ. ಮುದ್ರಣ, ರೇಡಿಯೊ, ಟಿ ವಿ, ಹೊಸ ಮಾಧ್ಯಮಗಳಲ್ಲಿ ನೂರಾರು ಮರೆಯಲಾಗದ ಲೇಖನ, ಕಾರ್ಯಕ್ರಮಗಳು ಮೂಡಿಬರುತ್ತವೆ. ಅವು ಗಾಳಿಯಲ್ಲಿ ತೇಲಿಹೋಗುವಂತೆ ನಮ್ಮ ನೆನಪಿನಿಂದ ಹಾರಿಹೋಗುತ್ತವೆ. ಜನ ಅವುಗಳನ್ನು ಮೆಲುಕು ಹಾಕಿ ಅವುಗಳಿಂದ ಪ್ರೇರಣೆ ಪಡೆಯುವಂತಾಗಲು, ಅವುಗಳ ಬಗ್ಗೆ ಚರ್ಚೆ ಹಾಗೂ ದಾಖಲೀಕರಣ ನಡೆಯುತ್ತಿರುವುದು ತೀರ ವಿರಳ. ವಿಶೇಷವಾಗಿ ರೇಡಿಯೊ, ಟಿವಿ ಹಾಗೆಯೇ ಅವುಗಳ ಮೂಲ ದ್ರವ್ಯವಾದ ಸಂಗೀತ ಲೋಕದ ಅವಿಸ್ಮರಣೀಯ ಕಾರ್ಯಕ್ರಮಗಳು, ಘಟನೆಗಳು, ಯಶೋಗಾಥೆಗಳು, ಸಾಧಕರು, ಅಲ್ಲದೆ ಅವುಗಳ ಬೆಳವಣಿಗೆ, ಹೀಗೆ ಈ ಎಲ್ಲ ವಿಷಯಗಳ ಬಗ್ಗೆ ಬರೆಯಬೇಕು ಎಂಬ ಹಂಬಲ ನನಗೆ ಸದಾ ಕಾಡುತ್ತಿತ್ತು. ಆ ಸದವಕಾಶ ಕಲ್ಪಿಸಿದ್ದು ಪ್ರಜಾವಾಣಿ ಮೆಟ್ರೊ. ಪ್ರಜಾವಾಣಿ ಹುಬ್ಬಳ್ಳಿಯ ಆವೃತ್ತಿಯ ಮೆಟ್ರೊದಲ್ಲಿ ೨೦೧೫ - ೨೦೧೬ ಒಂದು ವರ್ಷ, ಪ್ರತಿವಾರ ನನ್ನ ಅಂಕಣ ಬರಹ ‘ಕೇಳುವ ಕೌತುಕ’ ಪ್ರಕಟವಾಯಿತು. ಇಂತಹ ವೈವಿಧ್ಯಮಯ ವಿಷಯಗಳನ್ನು ಕೇಳುವ, ವಿವಿಧ ಕ್ಷೇತ್ರಗಳ ವಿಷಯತಜ್ಞರು, ಸಾಧಕರು, ಸಾಹಿತಿ, ಕಲಾವಿದರು, ಜನಸಾಮಾನ್ಯರೊಂದಿಗೆ ಚರ್ಚಿಸುವ, ತಿಳಿಯುವ ಕುತೂಹಲ ನನ್ನಲ್ಲಿ ಮೊದಲಿನಿಂದಲೇ ಇತ್ತು. ಆಕಾಶವಾಣಿಯ ಕೆಲಸ ಇದಕ್ಕೆ ಪೂರಕವಾಯಿತು. ಇದರಿಂದ ಇವೆಲ್ಲ ವಿಷಯಗಳನ್ನು, ಪರಿಕಲ್ಪನೆಗಳನ್ನು ಕಾರ್ಯಕ್ರಮಗಳನ್ನಾಗಿಸಲು, ಮಹತ್ವದ ಸಾಧನೆ, ಘಟನೆಗಳನ್ನು ದಾಖಲಿಸಲು ಸಾಧ್ಯವಾಯಿತು. ಅಂಕಣದಲ್ಲಿ ಬಂದ ಲೇಖನಗಳನ್ನು ಸ್ಥೂಲವಾಗಿ ೫ ವಿಭಾಗಗಳಲ್ಲಿ ವಿಂಗಡಿಸಬಹುದು.

೧. ರೇಡಿಯೊ ಪ್ರಪಂಚ
೨. ನೆನಪಾಗಿ ಕಾಡುವ ಕಾರ್ಯಕ್ರಮಗಳು
೩. ಮಾಧ್ಯಮ ಮಾಂತ್ರಿಕರು
೪. ಸಂಗೀತ ಸಂಪದ
೫. ಮಾಧ್ಯಮ ಸಂಕೀರ್ಣ

ಅಂಕಣ ಬರೆಯಲು ಪ್ರಾರಂಭಿಸಿದಾಗ ಏನೋ, ಹೇಗೋ ಎಂಬ ಅಳುಕು, ಒತ್ತಡ ಇತ್ತು. ಆದರೆ ಹೊಸ ಹೊಸ ವಿಷಯಗಳನ್ನು ಆಯ್ದು ವಾರದಿಂದ ವಾರ ಬರೆಯುತ್ತ ಹೋದಾಗ ಹೊಸ ಆಸಕ್ತಿ, ಉತ್ಸಾಹ ಮೂಡತೊಡಗಿದವು. ಬರವಣಿಗೆಯ ಕೌತುಕ ತಂದ ‘ಕೇಳುಗರ ಕೌತುಕ’ಕ್ಕೆ ಪಟ್ಟ ಶ್ರಮ ಸಾರ್ಥಕವೆನಿಸಿತು.

 

-ಸಿ. ಯು. ಬೆಳ್ಳಕ್ಕಿ

 

ಪುಟಗಳು: 200

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !