Click here to Download MyLang App

ಗುರುಪ್ರಸಾದ ಕುರ್ತಕೋಟಿ,  ಕೇಶಕ್ಷಾಮ ಮತ್ತು ಇತರ ಹಾಸ್ಯ ಲೇಖನಗಳು,  KeeshaKshaama,  Keesha Kshaama,  Guruprasad Kurtkoti,  Guruprasad Kurt koti,

ಕೇಶಕ್ಷಾಮ ಮತ್ತು ಇತರ ಹಾಸ್ಯ ಲೇಖನಗಳು (ಇಬುಕ್)

e-book

ಪಬ್ಲಿಶರ್
ಗುರುಪ್ರಸಾದ ಕುರ್ತಕೋಟಿ
ಮಾಮೂಲು ಬೆಲೆ
Rs. 69.00
ಸೇಲ್ ಬೆಲೆ
Rs. 69.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

 

ಪ್ರಕಾಶಕರು: ಪರಿಶ ಪ್ರಕಾಶನ

Publisher: Parisha Prakashana

 

ಇದು ಗುರುಪ್ರಸಾದ ಕುರ್ತಕೋಟಿ ಅವರು ಬರೆದಿರುವ ಹಾಸ್ಯ ಬರಹಗಳ / ಕತೆಗಳ ಸಂಗ್ರಹ. ಇದರಲ್ಲಿನ ಬಹುತೇಕ ಲೇಖನಗಳು ನಾಡಿನ ಪತ್ರಿಕೆಗಳಲ್ಲಿ ಪ್ರಕಟ ಆಗಿವೆ. ಅವರು ಐಟಿ ಉದ್ಯಮದಲ್ಲಿ ಕೆಲಸ ಮಾಡುವಾಗ ನಡೆದ ಕೆಲವು ಘಟನೆಗಳನ್ನು ಆಧರಿಸಿ, ವಿವಿಧ ಕಾಲಘಟ್ಟದಲ್ಲಿ ತಮ್ಮ ಜೀವನಾನುಭವಗಳನ್ನು ಸೇರಿಸಿ, ಹಾಸ್ಯವನ್ನು ಬೆರೆಸಿ ಹಾಗೂ ಕೆಲವು ಕಡೆ ವ್ಯಂಗ್ಯವನ್ನು ಲೇಪಿಸಿ ಸೃಷ್ಟಿಸಿರುವ ಲೇಖನಗಳು ಇಲ್ಲಿವೆ. ಇವುಗಳು ತಮಗೆ ಇಷ್ಟವಾಗಿ ಮುಖದಲ್ಲಿ ನಗು ತರಿಸಿದರೆ ಲೇಖಕರ ಶ್ರಮ ಸಾರ್ಥಕವಾದಂತೆ. ಅವರ ಬರಹಗಳ ಕುರಿತು ಕೆಲವು ಸಹೃದಯರ ಅಭಿಪ್ರಾಯಗಳು ಕೆಳಗಿನಂತಿವೆ. 

 

ಬೇರೊಬ್ಬ ರೋಗಿಯನ್ನು ಗಮನಿಸುತ್ತಿದ್ದ ನನ್ನ ಬಳಿ ವ್ಯಕ್ತಿಯೊಬ್ಬರು ಬಂದು “ಬಹಳ ಟೆನ್ಶನ್ ಆಗಿಬಿಟ್ಟಿದೆ, ನೋಡಿ ಸರ್” ಎಂದು ಹೇಳಿದರು. ಅವರನ್ನು ಕುಳ್ಳಿರಿಸಿ, ಆಗ ತಾನೇ ಕೈಗೆ ಸಿಕ್ಕ ‘ಸುಧಾ’ ಓದುವುದಕ್ಕೆ ಕೊಟ್ಟೆ. ಕೆಲವು ಸಮಯದ ಬಳಿಕ ಹೊರಟು ನಿಂತ ಆ ವ್ಯಕ್ತಿ “ಟೆನ್ಶನ್ ಎಲ್ಲಾ ಹೋಯ್ತು, ಬರ್ತೀನಿ ಸರ್” ಎಂದು ಹೊರಟೇ ಹೋದರು. ಗಮನಿಸಿದಾಗ ಅವರು ಗುರುಪ್ರಸಾದ ಕುರ್ತಕೋಟಿಯವರ “ಭಾರ್ಯಾಭಿಮಾನಿ” ಹಾಸ್ಯ ಲೇಖನ ಓದುತ್ತಿದ್ದುದು ತಿಳಿಯಿತು. ನನ್ನ ಫಿ ನೂರು ರುಪಾಯಿ ನಷ್ಟ! 

 - ಡಾ. ಕೆ. ಕೆ. ಜಯಚಂದ್ರ ಗುಪ್ತಾ, ಹಾಸನ

 

 

ಕನ್ನಡದಲ್ಲಿ ಹಾಸ್ಯ ಲೇಖನಗಳ ಸರಣಿ ಇನ್ನೂ ನಿಂತುಹೋಗಿಲ್ಲ ಎಂದು ನಿರೂಪಿಸಿದ್ದೀರಿ. ಎಂ.ಎಸ್. ನರಸಿಂಹಮೂರ್ತಿ, ಎಂ.ಪಿ. ಮನೋಹರಚಂದ್ರನ್, ಅನಂತ ಕಲ್ಲೋಳರು ನೆನಪಿಗೆ ಬರುವಂತೆ ಮಾಡಿದಿರಿ. ನಿಜವಾದ ಪಂಚ್ ನ್ನು ಕೊನೆಗಿಟ್ಟು ಲೇಖನದ ಸ್ವಾರಸ್ಯವನ್ನು ಕಾಪಿಟ್ಟುಕೊಂಡಿದ್ದೀರಿ. ತುಂಬ ಸಂತೋಷವೆನಿಸಿತು. ಶುಭವಾಗಲಿ.

- ಶಂಕರ ಅಜ್ಜಂಪುರ, ಶಿವಮೊಗ್ಗೆ

 

 

ಕನ್ನಡ ಭಾಷಿಕರಿಗೆ ಒಂದು ಚಾಟಿ ಏಟು ಈ ಲೇಖನ. ಹಾಸ್ಯ ಮಿಶ್ರಿತವಾಗಿ ನಮ್ಮಲ್ಲಿನ ಒಂದು ದುರಭ್ಯಾಸವನ್ನು ಅಣಕ ಮಾಡಿ ತೋರಿಸಿದ್ದೀರಿ. ಹೌದು ನಮಗೆ ನಮ್ಮ  ಭಾಷೆ ನೆಟ್ಟಗೆ ಮಾತಾಡೋಕೆ ಬರದಿದ್ರೂ ಬೇರೆ ಭಾಷಿಕರೊಂದಿಗೆ  ಅವರ ಭಾಷೆಯಲ್ಲೇ ಮಾತಾಡಿ ಅವರ ಎದುರು ಹೀರೋ ಎನ್ನಿಸಿಕೊಳ್ಳುವ ಖಯಾಲಿ. ಒಳ್ಳೆಯ ಲೇಖನಕ್ಕೆ ವಂದನೆಗಳು ಗುರುಪ್ರಸಾದ

- ಬಾಲಸುಬ್ರಮಣ್ಯಂ ಕೆ. ಎಸ್., ಬೆಂಗಳೂರು 

Customer Reviews

Based on 1 review
0%
(0)
100%
(1)
0%
(0)
0%
(0)
0%
(0)
G
Guruprasad Kurhkoti
ಸಿಂಪಲ್ and ಸಕತ್ !!!

ಈ ದಿನಗಳಲ್ಲಿ ಕನ್ನಡಿಗರು ಹಾಸ್ಯಕ್ಕಾಗಿ ಇಲ್ಲಾ ಅದೇ ಹಳೆ ಯೌಟ್ಯೂಬ್ ವಿಡಿಯೋಗಳನ್ನ ತಿರುವಿ ತಿರುವಿ ನೋಡಬೇಕು, ಇಲ್ಲ ಚುಟುಕುಗಳ ಥರ ಇರೋ standup ಕಾಮಿಡಿ ತುಣುಕುಗಳಿಗೆ ತೃಪ್ತಿ ಪಟ್ಟುಕೊಳ್ಳಬೇಕಾಗಿದ್ದ ಸಮಯದಲ್ಲಿ ಗುರುಪ್ರಸಾದ್ ಅವರ ಸಂಕಲನ ಹೊಸ ಹಾಗು ನೈಜ ಅನಿಸುತ್ತೆ. ಅವರ ಸಂಕಲನಗಳಲ್ಲಿ ನನಗೆ ಮೆಚ್ಚುಗೆಯಾಗಿದ್ದು ಜೀವನ ಮುಖ ಪ್ರದರ್ಶನ, ಸಮಾಜದ ಏರು ಪೇರುಗಳು ಮತ್ತು ತೊಳಲಾಟಗಳು. ಸುಮಾರು ಲೇಖನಗಳು ನನ್ನ ಪ್ರಕಾರ ಸರಿಯಾದ ಚಿತ್ರಕಥೆ ಇದ್ದರೆ ಸಿನಿಮಾ ವಸ್ತು. ಸಿಂಪಲ್ಲಾಗಿ ಸ್ವಲ್ಪ ಸಮಯ ಕೊಡುವುದಾದರೆ ಕಚಗುಳಿಯ ಹಾಸ್ಯ ಖಂಡಿತ... ಗುರುಪ್ರಸಾದ್ ಅವರ ಈ ಪ್ರಯತ್ನ ಹೆಚ್ಚು ಹೆಚ್ಚು ಬರಲಿ ಎಂದು ಆಶಿಸುತ್ತೇನೆ