ಪ್ರಕಾಶಕರು: ಛಂದ ಪುಸ್ತಕ
Publisher: Chanda pusthaka
ಕರ್ಕಿ ಕೃಷ್ಣಮೂರ್ತಿಯವರ ಎರಡನೆಯ ಕಥಾಸಂಕಲನ. ಈ ಕೃತಿಗೆ ಪ್ರತಿಷ್ಠಿತ ಮಾಸ್ತಿ ಕಥಾ ಪುರಸ್ಕಾರ ದೊರಕಿದೆ.
ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕರ್ಕಿ ಊರಿನವರು. 1975ರಲ್ಲಿ ಜನನ. ಮಣಿಪಾಲದಲ್ಲಿ ಇಂಜಿನಿಯರಿಂಗ್ ಪದವಿ. ಕೆಲಸ ನಿಮಿತ್ತ ಮಸ್ಕತ್ ಹಾಗೂ ದುಬೈನಲ್ಲಿ ಕೆಲ ವರ್ಷ ನೆಲೆಸಿದ್ದ ಇವರು ಪ್ರಸ್ತುತ ಬೆಂಗಳೂರಿನ ಸಿನರ್ಜಿ ಎನ್ನುವ ಖಾಸಗಿ ಸಂಸ್ಥೆಯಲ್ಲಿ ಸೀನಿಯರ್ ಜನರಲ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
‘ಮಳೆ ಮಾರುವ ಹುಡುಗ’ ಮೊದಲ ಕಥಾ ಸಂಕಲನ. ‘ಸುಗಂಧಿ’ ಎನ್ನುವ ವಿಶೇಷಾಂಕದ ಸಂಪಾದಕರು. ಬೇಂದ್ರೆ ಗ್ರಂಥ ಬಹುಮಾನ ಮತ್ತು ಸ್ವಸ್ತಿ ಪ್ರಕಾಶನದ ಬಹುಮಾನ ಪಡೆದಿದ್ದಾರೆ. ‘ಮಳೆ ಮಾರುವ ಹುಡುಗ’ ಮತ್ತು ‘ಉತ್ಸರ್ಗ’ ಕಥೆಗಳು ಹಿಂದಿಗೆ ಅನುವಾದವಾಗಿವೆ. ‘ವದ್ಧಾ’ ಹಾಗೂ ‘ಉತ್ಸರ್ಗ’ ಕಥೆ ಅನುಕ್ರಮವಾಗಿ ಸುಚಿತ್ರಾ ಫಿಲ್ಮ್ ಸೊಸೈಟಿಯ ಕಥಾ ಬಹುಮಾನ, ಪ್ರಜಾವಾಣಿ ದೀಪಾವಳಿ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿವೆ. ಓದು, ಸಿನೆಮಾ, ನಾಟಕ, ಪರ್ಯಟನೆ ಇವರ ಆಸಕ್ತಿ.
ಪುಟಗಳು: 144
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !