Click here to Download MyLang App

ಕನ್ನಡದಲ್ಲಿ ಕಾನೂನು ಭಾಗ-2 (ಇಬುಕ್)

ಕನ್ನಡದಲ್ಲಿ ಕಾನೂನು ಭಾಗ-2 (ಇಬುಕ್)

e-book

ಪಬ್ಲಿಶರ್
ಎಚ್‌. ಎಸ್‌. ಮೋಹನ್
ಮಾಮೂಲು ಬೆಲೆ
Rs. 50.00
ಸೇಲ್ ಬೆಲೆ
Rs. 50.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

ಬರಹಗಾರ: ಎಚ್‌. ಎಸ್‌. ಮೋಹನ್

 

"ಕಾನೂನು ಹೀಗಿದೆ ಅಂತ ಗೊತ್ತಿರಲಿಲ್ಲ", "ತಮ್ಮ ಹಕ್ಕುಗಳ ಮೇಲೆ ಮಲಗಿ ನಿದ್ರಿಸುವವನಿಗೆ ಕಾನೂನು ನೆರವಾಗುವುದಿಲ್ಲ." ಎಂಬ ಮಾತುಗಳನ್ನು ನಾವು ಕೇಳಿ ಬಲ್ಲೆವು. ಕಾನೂನಿನ ಬಗ್ಗೆ ಅಜ್ಞಾನದಿಂದಲೇ ಬಹಳಷ್ಟು ಜನರಿಗೆ ಕೋರ್ಟು, ಕಚೇರಿ, ಪೋಲಿಸು ಅಂದ್ರೆ ಹೆದರಿಕೆ. ಈ ಅಜ್ಞಾನಕ್ಕೆ ಒಂದು ಕಾರಣ ನಮ್ಮ ಬಹುತೇಕ ಕಾನೂನುಗಳು ಇಂಗ್ಲಿಷಿನಲ್ಲಿ ಇರುವುದು ಹಾಗೂ ಬಹಳ ಕಷ್ಟಕರವಾದ ಭಾಷೆಯಲ್ಲಿರುವುದು. ಇಂತಹ ಕಾನೂನಿನ ಅಂಶಗಳನ್ನು ಸರಳವಾದ ಕನ್ನಡದಲ್ಲಿ, ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ತಿಳಿಸುವುದೇ "ಕನ್ನಡದಲ್ಲಿ ಕಾನೂನು" ಸರಣಿಯ ಗುರಿ ಮತ್ತು ಉದ್ದೇಶ.


ಗಡಿಬಿಡಿಯ ಈ ದಿನಗಳಲ್ಲಿ ಯಾವುದೇ ವಿಷಯವನ್ನು ಆಳವಾಗಿ ಓದಿ, ತಿಳಿದುಕೊಳ್ಳುವ ಪುರುಸೊತ್ತು ಮತ್ತು ತಾಳ್ಮೆ ಇಲ್ಲದಿರುವಾಗ ದಿನ ನಿತ್ಯದ ಜೀವನದ ಉದ್ದಕ್ಕೂ ತಿಳಿದುಕೊಳ್ಳಬೇಕಿರುವ ಹಲವಾರು ಕಾನೂನುಗಳನ್ನು ಪ್ರಶ್ನೆ ಮತ್ತು ಉತ್ತರದ ರೂಪದಲ್ಲಿ ನಮ್ಮ ಮುಂದೆ ತಂದಿದೆ "ಕನ್ನಡದಲ್ಲಿ ಕಾನೂನು" ಅನ್ನುವ ಈ ಸರಣಿ ಇಬುಕ್ಸ್.

ವೃತ್ತಿಯಿಂದ ವಕೀಲರು ಹಾಗೂ ಪ್ರತಿವಾರ ಬೆಂಗಳೂರು ದೂರದರ್ಶನದಲ್ಲಿ ಪ್ರಸಾರವಾಗುವ 'ಕಾನೂನುವಾರ್ತೆ'ಗೆ ಕಳೆದ ಹದಿನಾಲ್ಕು ವರ್ಷಗಳಿಂದ ಹಸ್ತಪ್ರತಿ ರಚಿಸಿರುವ ಅನುಭವದಿಂದ ಕಾನೂನನ್ನು ಹೇಗೆ ವ್ಯಾಖ್ಯಾನಿಸಲಾಗುತ್ತದೆ ಎಂಬ ಅಂಶವನ್ನು ಚೆನ್ನಾಗಿ ತಿಳಿದಿರುವ ಹಿರಿಯರಾದ ಎಚ್.ಎಸ್.ಮೋಹನ್ ಅವರು ಈ ಸರಣಿಯನ್ನು ಮೈಲ್ಯಾಂಗ್ ಬುಕ್ಸ್ ಅಲ್ಲಿ ತಂದಿದ್ದಾರೆ.

ಆಸ್ತಿ ಹಕ್ಕು, ಕಂಪನಿ ನೊಂದಾವಣೆ, ಪೋಲಿಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಿಸುವುದು, ಚಾರ್ಜ್ ಶೀಟ್, ಜಾಮೀನು ಪಡೆಯುವುದು, ವೈದ್ಯಕೀಯ ನಿರ್ಲಕ್ಶ್ಯ, ಭ್ರಷ್ಟಾಚಾರ ವಿರೋಧಿ ಕಾನೂನು, ಮಕ್ಕಳ ಶಿಕ್ಷಣದ ಹಕ್ಕು, ಜನತಾ ನ್ಯಾಯಲಯ, ಲೋಕಾಯುಕ್ತ, ಅಪಘಾತ ಕಾಯ್ದೆ, ಮದುವೆ, ಡೈವೋರ್ಸ್, ಪವರ್ ಆಫ್ ಅಟಾರ್ನಿ, ಹೀಗೆ ನಿಮ್ಮ ದಿನ ನಿತ್ಯದ ಬದುಕಿನಲ್ಲಿ ಬೇಕಾಗುವ ಎಲ್ಲ ಕಾನೂನುಗಳ ಬಗ್ಗೆ "ಎಷ್ಟು ಬೇಕೋ ಅಷ್ಟು" ತಿಳುವಳಿಕೆ ನೀಡುವ ಈ ಸರಣಿ ಪ್ರತಿಯೊಬ್ಬ ಕನ್ನಡಿಗನ ಬಳಿಯೂ ಇರಬೇಕಾದದ್ದು. ಸರಣಿಯ ಎರಡನೆಯ ಭಾಗ ಇಲ್ಲಿದೆ.

 

ವಿಶೇಷ ಸೂಚನೆ: 

ಈ ಪುಸ್ತಕವು ಜನಸಾಮಾನ್ಯರಲ್ಲಿ ಕಾನೂನಿನ ಬಗ್ಗೆ ಹೆಚ್ಚಿನ  ತಿಳುವಳಿಕೆಯನ್ನು ನೀಡುವ ಉದ್ದೇಶ ಹೊಂದಿದ್ದು, ಓದುಗರು ತಮ್ಮ ಪ್ರಕರವವನ್ನು ನ್ಯಾಯಾಲಯದಲ್ಲಿ ದಾಖಲಿಸುವ ಮುನ್ನ ಕಾನೂನು ತಜ್ಞರ ಜೊತೆ ಸಮಾಲೋಚಿಸುವುದು ಒಳ್ಳೆಯದು. ಈ ನಿಟ್ಟಿನಲ್ಲಿ ಈ ಪುಸ್ತಕದಲ್ಲಿನ ಮಾಹಿತಿಯ ಮೇಲೆ ಮಾತ್ರ ಅವಲಂಬಿತರಾಗಬಾರದೆಂದು ವಿನಂತಿ.

 

ಪುಟಗಳು: 80

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

Based on 1 review
0%
(0)
100%
(1)
0%
(0)
0%
(0)
0%
(0)
k
karthik

ಕನ್ನಡದಲ್ಲಿ ಕಾನೂನು ಭಾಗ-2 (ಇಬುಕ್)