Click here to Download MyLang App

ಕಡುಗಲಿಯ ನಿಡುಗಾಥೆ,  ಅಕ್ಷರ ಕೆ.ವಿ.,  Kadugaliya Nidugaathe,  Akshara K.V.,

ಕಡುಗಲಿಯ ನಿಡುಗಾಥೆ (ಇಬುಕ್)

e-book

ಪಬ್ಲಿಶರ್
ಅಕ್ಷರ ಕೆ.ವಿ.
ಮಾಮೂಲು ಬೆಲೆ
Rs. 80.00
ಸೇಲ್ ಬೆಲೆ
Rs. 80.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಪ್ರಕಾಶಕರು: ಅಕ್ಷರ ಪ್ರಕಾಶನ

Publisher: Akshara Prakashana
 

 

ಭವಭೂತಿಯ 'ಮಹಾವೀರ ಚರಿತ' ನಾಟಕದ ಕನ್ನಡ ಅನುವಾದ.

ರಾಮನು ಯಜ್ಞಪರಿಪಾಲನೆಗಾಗಿ ವಿಶ್ವಾಮಿತ್ರನೊಂದಿಗೆ ಹೊರಟಲ್ಲಿಂದ ಮೊದಲುಗೊಂಡು ವನವಾಸವನ್ನು ಮುಗಿಸಿ ಹಿಂದಿರುಗಿ ಪಟ್ಟವನ್ನೇರುವವರೆಗಿನ ಶೌರ್ಯದ ಕಥೆಯನ್ನು ಈ ನಾಟಕವು ಹೇಳುವುದರಿಂದ ಇದು - ಮಹಾ-ವೀರ-ಚರಿತ, ಕಡುಗಲಿಯ ನಿಡುಗಾಥೆ. ಆದರೆ ಈ ನಿಡುಗಾಥೆಯನ್ನು ಭವಭೂತಿಯು ನಿರ್ವಹಿಸಿರುವ ವಿಧಾನ ತುಂಬ ವಿಶೇಷವಾದದ್ದು; ಕಿರಿದರಲ್ಲಿ ಹಿರಿದನ್ನು ಹಿಡಿಯುವ ಮಹತ್ವಾಕಾಂಕ್ಷೆಯದು. ವಿಶ್ವಾಮಿತ್ರನ ಆಶ್ರಮ, ಪಂಚವಟಿ, ಲಂಕೆ ಮತ್ತು ಮರುಪ್ರಯಾಣದ ಆಕಾಶಮಾರ್ಗ - ಈ ನಾಲ್ಕೇ ಸ್ಥಳಗಳಲ್ಲಿ ನಡೆಯುವಂತೆ ಇಡಿಯ ರಾಮಾಯಣದ ಕಥೆಯನ್ನು ಈ ನಾಟಕವು ಏಳು ಅಂಕಗಳಲ್ಲಿ ಪ್ರಸ್ತುತಪಡಿಸುತ್ತದೆ. ಜತೆಗೆ, ಶೂರ್ಪಣಖಿಯೇ ಮಂಥರೆಯ ರೂಪದಲ್ಲಿ ಕಾಣಿಸಿಕೊಳ್ಳುವುದೇ ಮೊದಲಾಗಿ ರಾಮಾಯಣದ ಹಲವು ಹೊಸ ಬಗೆಯ ವ್ಯಾಖ್ಯಾನಗಳೂ ಈ ನಾಟಕದಲ್ಲಿವೆ. ಮುಂದೆ ಸಂಸ್ಕೃತದಲ್ಲಿ ಕಾಣಿಸಿಕೊಂಡ ರಾಮಾಯಣದ ಹೊಸ ಬಗೆಯ ವ್ಯಾಖ್ಯಾನಗಳಿಗೆಲ್ಲ ಅಡಿಪಾಯ ಹಾಕಿಕೊಟ್ಟ ಕೃತಿ ಇದೆಂದೂ ಹೇಳಲಾಗುತ್ತದೆ. ಹಾಗಿದ್ದರೂ, ಇದರ ಮುಕ್ಕಾಲು ಭಾಗ ಮಾತ್ರ ಭವಭೂತಿ ಬರೆದದ್ದು, ಉಳಿದದ್ದು ಇನ್ನಿಬ್ಬರು ಪ್ರತ್ಯೇಕವಾಗಿ ಬರೆದು ಪೂರ್ಣಗೊಳಿಸಿದ್ದು. ಅಂಥ ನಾಟಕ-ಸ್ವಾರಸ್ಯಗಳನ್ನು ಇವತ್ತಿನ ರಂಗಭೂಮಿಗೆ ಉಪಯುಕ್ತವಾಗುವಂತೆ ಕನ್ನಡೀಕರಿಸುವ ಪ್ರಯತ್ನ ಇಲ್ಲಿದೆ.

 

ಪುಟಗಳು: 146

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)