Click here to Download MyLang App

ಕಾಡು ತಿಳಿಸಿದ ಸತ್ಯಗಳು (ಇಬುಕ್)

ಕಾಡು ತಿಳಿಸಿದ ಸತ್ಯಗಳು (ಇಬುಕ್)

e-book

ಪಬ್ಲಿಶರ್
ಗಿರಿಮನೆ ಶ್ಯಾಮರಾವ್
ಮಾಮೂಲು ಬೆಲೆ
Rs. 149.00
ಸೇಲ್ ಬೆಲೆ
Rs. 149.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

 

ಪ್ರಕಾಶಕರು: ಗಿರಿಮನೆ ಪ್ರಕಾಶನ

Publisher: Girimane Prakashana

 

ಮುನ್ನೂರ ಎಪ್ಪತ್ತು ಕೋಟಿ ವರ್ಷಗಳ ಹಿಂದೆ ಈ ಭೂಮಿಯಲ್ಲಿ ಜೀವೋತ್ಪತ್ತಿಯಾಯಿತು ಎಂಬ ಮಾಹಿತಿ ವಿಜ್ಞಾನಿಗಳದ್ದು. ಅದಕ್ಕಿಂತಲೂ ಹಿಂದೆ ಏನಾಗಿತ್ತೋ ಯಾರಿಗೆ ಗೊತ್ತು? ಕಣ್ಣು ಬಿಟ್ಟು ನೋಡಿದರೆ ನಾವು ಸುತ್ತಾಡುವ ಈ ಭೂಮಂಡಲದ ಒಂದೊಂದು ಭಾಗದಲ್ಲೇ ಒಂದೊಂದು ಅದ್ಭುತಗಳಿವೆ. ಸಣ್ಣದೆಂದು ನಾವು ತಿಳಿದಿದ್ದರಲ್ಲಿ ದೊಡ್ಡ ಸಂಗತಿಗಳಿವೆ. ಕೆಲವು ಸತ್ಯಸಂಗತಿಗಳು ನಮ್ಮ ನಂಬಿಕೆಗೆ ವಿರುದ್ಧವಾಗಿವೆ. ಒಂದೆಡೆ ಹಿಮರಾಶಿಯಾದರೆ ಮತ್ತೊಂದು ಕಡೆ ಜಲರಾಶಿ. ಮಗದೊಂದು ಕಡೆ ಸಮೃದ್ಧಿಯಾದ ಸಸ್ಯ ಮತ್ತು ಜೀವಿಗಳು. ಇನ್ನೊಂದು ಕಡೆ ಸುಡುಬಿಸಿಲಿನ ಮರುಭೂಮಿ. ಒಂದೊಂದು ನದಿ, ಗುಡ್ಡ, ಬೆಟ್ಟ, ಪರ್ವತ, ಬಯಲುಗಳ ಹಿಂದೆಯೂ ಒಂದೊಂದು ವಿಸ್ಮಯಗಳಿವೆ. ಕಣ್ಣಿಗೆ ಗೋಚರವಾಗುವ ಆಕಾಶ, ಗ್ರಹ, ನಕ್ಷತ್ರಗಳ ಸೌಂದರ್ಯದೊಳಗೂ ಅಗೋಚರವಾದ, ಊಹಿಸಲೂ ಅಸಾಧ್ಯವಾದ ಅದ್ಭುತವಾದ ಸಂಗತಿಗಳಿವೆ.

ಈ ಕೃತಿಯಲ್ಲಿ ನಮ್ಮ ಅನೇಕ ಮೂಢನಂಬಿಕೆ ಮತ್ತು ಜಗತ್ತಿನ ನಿಯಮಗಳ ಅನಾವರಣ ಮಾಡುವ ಪ್ರಯತ್ನ ಇದೆ. ಏಕೆಂದರೆ ಅವೆರಡೂ ಒಂದಕ್ಕೊಂದು ವಿರುದ್ಧವಾಗಿಯೇ ಇರುತ್ತದೆ. ಒಂದು ದು:ಖಕ್ಕೆ ದಾರಿಯಾದರೆ ಮತ್ತೊಂದು ಸುಖಕ್ಕೆ ದಾರಿ. ಒಂದನ್ನು ಅರಿಯದಿದ್ದರೆ ಮತ್ತೊಂದನ್ನು ಪೂರ್ತಿಯಾಗಿ ತಿಳಿಯಲಾಗುವುದಿಲ್ಲ. ಬದುಕಲ್ಲಿ ಬಹಳಷ್ಟು ಜನ ಸ್ವಂತಿಕೆ ಮರೆತು ಅವರಿವರು ಎತ್ತಲೋ ಓಡುವುದನ್ನು ನೋಡಿ ತಾವೂ ಹಾಗೇ ಓಡಲು ಯತ್ನಿಸುತ್ತಾರೆಯೇ ಹೊರತು ಸತ್ಯ ಮತ್ತು ವಾಸ್ತವವನ್ನು ಬೇಗ ಒಪ್ಪಿಕೊಳ್ಳುವುದಿಲ್ಲ. ಕೆಲವು ಅಪರೂಪದ ಜನ ಹಾಗೆ ಓಡುವವರನ್ನು ನೋಡುತ್ತಾ ಅದಕ್ಕೆ ಕಾರಣ ಹುಡುಕುತ್ತಾರೆ. ಹಾಗೆ ಕಾರಣ ಹುಡುಕುವ ಶ್ರೀವತ್ಸ ಮತ್ತು ವಸುಧ ಎಂಬ ಕಾಲ್ಪನಿಕ ಚಿಂತನಶೀಲ ಪಾತ್ರಗಳ ಮೂಲಕ ಓದುಗರನ್ನು ಪ್ರಶಾಂತವಾದ ವಾತಾವರಣಕ್ಕೆ ಕರೆದೊಯ್ದು ಪ್ರಕೃತಿ ಹಾಗೂ ಜೀವ-ಜಗತ್ತು ಮತ್ತು ಮೌಢ್ಯಗಳ ವಾಸ್ತವ ಚಿತ್ರಣ ಕೊಡುವ ಪ್ರಯತ್ನವೇ ಈ ಕಾದಂಬರಿ. ವಿದ್ಯೆ, ವಿಚಾರವಂತಿಕೆಯ ಉತ್ತುಂಗಕ್ಕೇರಿದ ದಂಪತಿ ತಮ್ಮ ಪ್ರಶ್ನೆಗಳಿಗೆ ಯಾವ ರೀತಿ ಸರಿ ಉತ್ತರ ಕಂಡುಕೊಳ್ಳುತ್ತಾರೆ ಎಂಬ ಸೂಕ್ಷ್ಮವೇ ಇದರ ಕಥಾವಸ್ತು. ಹಾಗಾಗಿ ಇದು ಬರೀ ಕಾದಂಬರಿ ಅಲ್ಲ. ಕಲ್ಪನೆಯ ಪಾತ್ರಗಳ ಜೊತೆಗೆ ವಿಚಾರಗಳೇ ಇದರಲ್ಲಿ ಜಾಸ್ತಿ. ಕೋಟಿ ಕೋಟಿ ವರ್ಷಗಳಲ್ಲಿ ಆಯಾ ಕಾಲಘಟ್ಟ, ಅವರವರ ಮಟ್ಟಕ್ಕೆ ತಕ್ಕಂತೆ ಅದೆಷ್ಟೋ ಜನ ಸತ್ಯಾನ್ವೇಷಣೆಯ ಹಾದಿ ತುಳಿದು ಮರೆಯಾಗಿ ಹೋಗಿದ್ದಾರೆ. ನಮಗೆ ಸಿಕ್ಕಿದ ಜ್ಞಾನದ ಹಿಂದೆ ಅವರ ಪರಿಶ್ರಮ ಇದೆ. ಮುಂದಿನವರಿಗೆ ನಮ್ಮಿಂದಲೂ ಒಂದಿಷ್ಟು ಸಿಗಬಹುದು.

 

ಗಿರಿಮನೆ ಶ್ಯಾಮರಾವ್

 

ಪುಟಗಳು: 240

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
ಶ್ರೀಲಕ್ಷ್ಮಿ
ಅದ್ಭುತವಾದ ಓದು

ಈ ಕೃತಿಯಲ್ಲಿ ನಮ್ಮ ಅನೇಕ ಮೂಢನಂಬಿಕೆ ಮತ್ತು ಜಗತ್ತಿನ ನಿಯಮಗಳ ಅನಾವರಣ ಮಾಡುವ ಪ್ರಯತ್ನ ಇದೆ. ಏಕೆಂದರೆ ಅವೆರಡೂ ಒಂದಕ್ಕೊಂದು ವಿರುದ್ಧವಾಗಿಯೇ ಇರುತ್ತದೆ. ಒಂದು ದು:ಖಕ್ಕೆ ದಾರಿಯಾದರೆ ಮತ್ತೊಂದು ಸುಖಕ್ಕೆ ದಾರಿ. ಒಂದನ್ನು ಅರಿಯದಿದ್ದರೆ ಮತ್ತೊಂದನ್ನು ಪೂರ್ತಿಯಾಗಿ ತಿಳಿಯಲಾಗುವುದಿಲ್ಲ. ಬದುಕಲ್ಲಿ ಬಹಳಷ್ಟು ಜನ ಸ್ವಂತಿಕೆ ಮರೆತು ಅವರಿವರು ಹೇಳಿದ್ದನ್ನು ನಂಬಿ ಎತ್ತೆತ್ತಲೋ ಓಡುತ್ತಿದ್ದಾನೆ.. ಯಾರು ಯಾರೋ ಓಡುವುದನ್ನು ನೋಡಿ ತಾವೂ ಹಾಗೇ ಓಡಲು ಯತ್ನಿಸುತ್ತಾರೆಯೇ ಹೊರತು ಸತ್ಯ ಮತ್ತು ವಾಸ್ತವವನ್ನು ಬೇಗ ಒಪ್ಪಿಕೊಳ್ಳುವುದಿಲ್ಲ. ಕೆಲವರಷ್ಟೇ ಹಾಗೆ ಓಡುವವರನ್ನು ನೋಡುತ್ತಾ ಅದಕ್ಕೆ ಕಾರಣ ಹುಡುಕುತ್ತಾರೆ. ಹಾಗೆ ಕಾರಣ ಹುಡುಕುವ ಶ್ರೀವತ್ಸ ಮತ್ತು ವಸುಧ ಎಂಬ ಕಾಲ್ಪನಿಕ ಚಿಂತನಶೀಲ ಪಾತ್ರಗಳ ಮೂಲಕ ಓದುಗರನ್ನು ಪ್ರಶಾಂತವಾದ ವಾತಾವರಣಕ್ಕೆ ಕರೆದೊಯ್ದು ಪ್ರಕೃತಿ ಹಾಗೂ ಜೀವ-ಜಗತ್ತು ಮತ್ತು ಮೌಢ್ಯಗಳ ವಾಸ್ತವ ಚಿತ್ರಣ ಕೊಡುವ ಪ್ರಯತ್ನವೇ ಈ ಕಾದಂಬರಿ. ವಿದ್ಯೆ, ವಿಚಾರವಂತಿಕೆಯ ಉತ್ತುಂಗಕ್ಕೇರಿದ ದಂಪತಿ ತಮ್ಮ ಪ್ರಶ್ನೆಗಳಿಗೆ ಯಾವ ರೀತಿ ಸರಿ ಉತ್ತರ ಕಂಡುಕೊಳ್ಳುತ್ತಾರೆ ಎಂಬ ಸೂಕ್ಷ್ಮವೇ ಇದರ ಕಥಾವಸ್ತು. ಹಾಗಾಗಿ ಇದು ಬರೀ ಕಾದಂಬರಿ ಅಲ್ಲ. ಕಲ್ಪನೆಯ ಪಾತ್ರಗಳ ಜೊತೆಗೆ ವಿಚಾರಗಳೇ ಇದರಲ್ಲಿ ಜಾಸ್ತಿ. ಕೋಟಿ ಕೋಟಿ ವರ್ಷಗಳಲ್ಲಿ ಆಯಾ ಕಾಲಘಟ್ಟ, ಅವರವರ ಮಟ್ಟಕ್ಕೆ ತಕ್ಕಂತೆ ಅದೆಷ್ಟೋ ಜನ ಸತ್ಯಾನ್ವೇಷಣೆಯ ಹಾದಿ ತುಳಿದು ಮರೆಯಾಗಿ ಹೋಗಿದ್ದಾರೆ. ನಮಗೆ ಸಿಕ್ಕಿದ ಜ್ಞಾನದ ಹಿಂದೆ ಅವರ ಪರಿಶ್ರಮ ಇದೆ. ಮುಂದಿನವರಿಗೆ ನಮ್ಮಿಂದಲೂ ಒಂದಿಷ್ಟು ಸಿಗಬಹುದು.
ಮಲೆನಾಡಿನ ಬದುಕು ನೋಡಲೆಷ್ಟು ಸುಂದರವೋ, ಅಷ್ಟೇ ಕಷ್ಟ ನಷ್ಟಗಳ ಸರಮಾಲೆ.. ಹೊದ್ದ ಹಸಿರು ಚಾದರದ ಒಳಗಿನ ಕರಾಳ ಮುಖಗಳು, ಸಾಮಾನ್ಯ ಜನರ ಬವಣೆ, ಅಧಿಕಾರದ ದರ್ಬಾರು, ಕ್ಷಣಕ್ಷಣಕ್ಕೂ ಬದಲಾಗುವ ಪ್ರಕೃತಿ, ಇಂತಹ ವೈರುಧ್ಯಗಳ ನಡುವೆಯೇ ಬದುಕಲು ನಡೆಸುವ ಹೋರಾಟಗಳನ್ನು ಲೇಖಕರು ಮನೋಜ್ಞವಾಗಿ ವಿವರಿಸಿದ್ದಾರೆ.. ಇಲ್ಲಿ ಬರುವ ಪ್ರತಿಯೊಂದು ಪಾತ್ರಗಳೂ ಬದುಕನ್ನು ತಮ್ಮದೇ ಅನುಭವದ ಮೇಲೆ ವಿಶ್ಲೇಷಿಸುವ, ವಿವರಿಸುತ್ತವೆ..
ಮಲೆನಾಡಿನ ಸ್ಥಿತಿಗತಿ, ಒಂದಿಡೀ ವರುಷದ ಹವಾಮಾನ, ಜನ ಜೀವನ, ಪ್ರಾಕೃತಿಕ ಸಂಪತ್ತಿನ ಅತಿಯಾದ ಬಳಕೆಯಿಂದಾದ ಭೀಕರ ಪರಿಣಾಮಗಳು, ಮನುಷ್ಯನ ಅಜ್ಞಾನ, ಅದರಿಂದ ಮುಂದುವರಿದ ಭಯ, ಭಯದ ನಿವಾರಣೆಗಾಗಿ ಆತ ಆರಿಸಿಕೊಳ್ಳುವ ಸುಲಭ ಪರಿಹಾರಗಳು ಬದುಕನ್ನು ಯಾವ ದಿಕ್ಕಿನಲ್ಲಿ ಎಳೆದುಕೊಂಡು ಹೋಗಬಹುದು ಎನ್ನುವ ಕಳವಳವನ್ನೂ ಲೇಖಕರ ವ್ಯಕ್ತಪಡಿಸಿದ್ದಾರೆ..
ಮನುಷ್ಯನ ಅಭೋದ ಯೋಜನೆಗಳಿಗೆ, ಅಪ್ರಬುದ್ಧ ಯೋಚನೆಗಳಿಗೆ ಮೊದಲು ಬಲಿಯಾದದ್ದೇ ಕಾಡು.. ನಿಸರ್ಗದ ಒಡಲನ್ನು ತರಿದು, ಮುರಿದು, ಬಗೆಯದೇ ಇದ್ದರೆ ಮನುಷ್ಯನ ಬದುಕಿರಲಾರನೇನೋ ಎನ್ನುವಷ್ಟರ ಮಟ್ಟಿಗೆ ಪ್ರಕೃತಿಯ ಮೇಲೆ ದೌರ್ಜನ್ಯ ನಡೆಯುತ್ತಲೇ ಇವೆ.. ತಾನೂ ಪ್ರಕೃತಿಯ ಒಂದು ಭಾಗ ಮಾತ್ರಾ, ತನಗೆ ಎಲ್ಲವೂ ಅಲ್ಲ ಎನ್ನುವ ಸತ್ಯವನ್ನು ಮರೆತೇ ಬಿಟ್ಟಿರುವ ನಾವು, ಕಾಡು ಸಂಪತ್ತನ್ನು ಎಗ್ಗಿಲ್ಲದೆ ಬಳಸಿ ವಿನಾಶದ ಅಂಚಿಗೆ ತಲುಪಿದ್ದೇವೆ.. ಯಾವುದನ್ನೂ ಹಿತಮಿತವಾಗಿ ಬಳಸದೆ, ಪ್ರಕೃತಿಯ ಸಮತೋಲನವನ್ನು ಬುಡಮೇಲು ಮಾಡುವುದರಲ್ಲಿ ಮಗ್ನ ನಾವು.. ಇಷ್ಟಾಗಿಯೂ ನಮಗೆ ಪಶ್ಚಾತ್ತಾಪವಿಲ್ಲ .. ತಪ್ಪಿನ ಅರಿವು ಇಲ್ಲ.. ಎಲ್ಲ ಅತಿವೃಷ್ಠಿ, ಅನಾವೃಷ್ಠಿಗಳಿಗೂ ಮತ್ತೆ ಮತ್ತೆ ಪ್ರಕೃತಿಯನ್ನೇ ದೂರು ಮಹತ್ಕಾರ್ಯವನ್ನಷ್ಟೇ ಮಾಡಬಲ್ಲವರು ನಾವು..
ವಿಚಾರಗಳು ಕೊಳೆತರೆ ಸಮಾಜ ರೋಗಗ್ರಸ್ತವಾಗುತ್ತದೆ.. ಮನಸ್ಸು ಪೂರ್ವಾಗ್ರಹದಲ್ಲಿ ಬಂಧಿಯಾಗಬಾರದು.. ನಾನು ನಂಬಿದ್ದೇ ಸರಿ ಎನ್ನುವ ಧೋರಣೆ ಸರಿಯಲ್ಲ.. ಸತ್ಯಕ್ಕೆ ತನ್ನದೇ ಆದ ಮುಖವಾದ.. ಅದನ್ನು ಒಪ್ಪಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು.. ದೇವರನ್ನು ಒಂದು ಮೂರ್ತರೂಪದಲ್ಲಿ ಮಾತ್ರಾ ನೋಡುವುದನ್ನು ಹೊರತು ಪಡಿಸಿ, ವೈಜ್ಞಾನಿಕವಾದ ದೃಷ್ಟಿಕೋನದ ಅರಿವು ಮೂಡಿಸಿಕೊಳ್ಳಬೇಕು..
ದೇವರು ಎಂದರೆ ಜಗತ್ತನ್ನು ಸಮತೋಲನದಲ್ಲಿ ನಡೆಸುವ ಅಸೀಮ ಶಕ್ತಿ, ಅದೊಂದು ಚೇತನ, ಜೀವ ಸಂಕುಲಕ್ಕೆ ಜ್ಞಾನದ ಬೆಳಕು ಎಂದು ತಿಳಿದುಕೊಂಡರೆ, ಅನವಶ್ಯಕ ಮೂಢನಂಬಿಕೆಗಳು , ಅದರಿಂದ ಆಗುವ ಶಾಶ್ವತ ನಷ್ಟಗಳ ಕಡಿಮೆ ಆಗುತ್ತವೆ.. ಬದುಕು ಸರಳ ಸುಂದರ ಎನಿಸುತ್ತದೆ..
(ಇದರ ಹೊರತಾಗಿಯೂ ಬಹಳಷ್ಟು ವಿಷಯಗಳನ್ನು ಲೇಖಕರು ವಿವರಿಸುವ ಪ್ರಯತ್ನ ಮಾಡಿದ್ದಾರೆ.. ಕೆಲವೊಂದು ನನ್ನ ಅರಿವಿನ ಪರಿಧಿಯನ್ನು ಮೀರಿರುವುದರಿಂದ ಇಲ್ಲಿ ವಿವರಿಸಲು ಸಾಧ್ಯವಾಗಿಲ್ಲ.. )
----------------------------------------------------
- ಶ್ರೀ..