ಬರಹಗಾರ: ಪೂರ್ಣಚಂದ್ರ ತೇಜಸ್ವಿ
24 ಗಂಟೆಗಳಲ್ಲಿ ನಡೆಯುವ ಪತ್ತೇದಾರಿ ಕಾದಂಬರಿ ಪೂರ್ಣಚಂದ್ರ ತೇಜಸ್ವಿ ಅವರ ಅತ್ಯಂತ ಜನಪ್ರಿಯ ಕಾದಂಬರಿಗಳಲ್ಲಿ ಒಂದು.
ಏಲಕ್ಕಿ ಮೂಟೆ ಮಾರಲು ಬಸ್ಸಿನಲ್ಲಿ ಪಯಣಿಸುವ ಸುರೇಶ್ ಮತ್ತು ಗೌರಿ ದಂಪತಿಗಳು ತಮಗೆ ಅರಿವೇ ಇಲ್ಲದಂತೆ ಜುಗಾರಿ ಕ್ರಾಸಿನ ಭೂಗತ ಲೋಕದ ಸುಳಿಯೊಳಗೆ ಸಿಲುಕಿ, ಪ್ರಾಣಕ್ಕೆ ಬಂದಿರುವ ಕುತ್ತನ್ನು ದಾಟಿಕೊಳ್ಳಲು ಹೆಣಗಾಡುತ್ತಿದ್ದಾರೆ. ಇನ್ನೊಂದೆಡೆ ಅವರಿಗೆ ನೆರವಾಗಲು ಬಂದಂತೆ ಕಾಣುವ ಮನ್ಮಥ ಬೀಡಾ ಅಂಗಡಿಯ ಶೇಷಪ್ಪ ಹಾಗೂ ಸುರೇಶನ ಕಾಲೇಜು ದಿನಗಳ ಸಹಪಾಠಿ ರಾಜಪ್ಪ ತಮ್ಮ ನಿಗೂಢ ನಡವಳಿಕೆಯಿಂದ ಸುರೇಶ ಮತ್ತು ಗೌರಿಯ ಮನದಲ್ಲಿ ಅನುಮಾನದ ಸುಳಿಯನ್ನೇ ಎಬ್ಬಿಸಿದ್ದಾರೆ. ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಅನ್ನುವ ಗೊಂದಲದಲ್ಲಿರುವ ಈ ದಂಪತಿಗಳ ಆತಂಕ ತುಂಬಿದ ರೋಚಕ ಪಯಣದ ನಡುವೆಯೇ ಮಲೆನಾಡು, ಅಲ್ಲಿ ಬದಲಾಗುತ್ತಿರುವ ಜನರ ಜೀವನ, ನಾಶವಾಗುತ್ತಿರುವ ಕಾಡು, ಕಾಣದೇ ಹುದುಗಿರುವ ಕೆಂಪು ರತ್ನಗಳ ನಿಧಿಗಳೆಲ್ಲದರ ವಿವರಗಳು ಓದುಗನನ್ನು ಒಂದು ಬೇರೆಯೇ ಪ್ರಪಂಚಕ್ಕೆ ಕರೆದೊಯ್ಯುತ್ತವೆ.
ನೂರಾರು ಮರುಮುದ್ರಣ ಕಂಡಿರುವ ಈ ಕೃತಿ ಈಗ ಇಬುಕ್ ರೂಪದಲ್ಲಿ ಎಲ್ಲಿಂದ, ಯಾವಾಗ ಬೇಕಿದ್ದರೂ ತಮ್ಮ ಮೊಬೈಲಿನಲ್ಲೇ ಓದಲು ಸಾಧ್ಯವಾಗಿಸಿದೆ ಮೈಲ್ಯಾಂಗ್ ಮೊಬೈಲ್ ಆಪ್.
ಪುಟಗಳು: 209
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !