ಬರಹಗಾರರು: ಜೋಗಿ
‘ಯಾಮಿನಿ’ ಒಬ್ಬ ಜನಪ್ರಿಯ ಕಾದಂಬರಿಕಾರ ತನ್ನ ಮುಂದಿನ ಕೃತಿಯನ್ನು ಬರೆಯುವುದಕ್ಕೆ ಮುಂಚೆ ಅನುಭವಿಸುವ ಒತ್ತಡ, ತವಕ, ತಲ್ಲಣಗಳ ಕತೆ. ಈ ನೆಪದಲ್ಲಿ ಅವನು ಬಾಲ್ಯದಲ್ಲಿ ಕಂಡ ಘಟನೆಗಳು, ಯೌವ್ವನದ ಸಖಿಯರು, ನಡುವಯಸ್ಸಿನ ವಾಂಛಲ್ಯಗಳು, ಆತನೊಳಗಿರುವ ಲೇಖಕ ಮತ್ತು ವ್ಯಕ್ತಿಯ ನಡುವಿನ ಸಂಘರ್ಷಗಳು ಎಲ್ಲವೂ ಅವನ ಮನಸ್ಸೊಳಗೆ ಮೆರವಣಿಗೆ ಹೊರಡುತ್ತವೆ. ಹಾಗಾಗಿ ಇಡೀ ಕೃತಿ, ಚಿರಾಯು ಎಂಬ ಲೇಖಕ ಕನ್ನಡಿ ಎದುರು ಕುಳಿತುಕೊಂಡು ತನ್ನನ್ನು ಅರಿತುಕೊಳ್ಳುವ ಪ್ರಕ್ರಿಯೆಯಲ್ಲಿ, ತಾನು ಪ್ರೀತಿಸುವ, ತಿರಸ್ಕರಿಸುವ ವ್ಯಕ್ತಿಗಳ ಜೊತೆ ತನ್ನಷ್ಟಕ್ಕೇ ಅನುಸಂಧಾನ ನಡೆಸುವ ಒಂದು ಸುದೀರ್ಘ ಸ್ವಗತವಾಗಿ ರೂಪುಗೊಂಡಿದೆ.
ಪುಟಗಳು: 220
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !