ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಭಾರತದ ಅತ್ಯುನ್ನತ ಸಾಹಿತ್ಯಪ್ರಶಸ್ತಿಯೆನಿಸಿರುವ ಜ್ಞಾನಪೀಠಕ್ಕೆ ಸಂಬಂಧಿಸಿದ ಕೆಲವು ವಿವರಗಳನ್ನೂ ಒಳಗೊಂಡಂತೆ ಸಮಗ್ರಪುಸ್ತಕವೊಂದನ್ನು ಈಗ ಪ್ರಕಟಿಸಲಾಗುತ್ತಿದೆ. ಇದರಿಂದ ಸಾಹಿತ್ಯಾಸಕ್ತರಿಗೆ ಒಂದೇ ಪುಸ್ತಕದಲ್ಲಿ ಎಲ್ಲ ಪುರಸ್ಕೃತರ ವಿವರಗಳನ್ನು ಓದುವ, ಮಾಹಿತಿ ಪಡೆಯುವ ಅವಕಾಶ ಒದಗಿದಂತಾಗಿದೆ.
- ಟಿ. ಎಸ್. ಗೋಪಾಲ್
ಜ್ಞಾನಪೀಠ ಪ್ರಶಸ್ತಿ - ಏನಿದರ ಹಿರಿಮೆ?
ಭಾರತೀಯ ಸಾಹಿತಿಗಳು ತಮ್ಮ ದೇಶ ಭಾಷೆಯಲ್ಲಿ ರಚಿಸಿದ ಅತ್ಯುತ್ತಮ ಸೃಜನಶೀಲ ಸಾಹಿತ್ಯಕೃತಿಯನ್ನು ಪುರಸ್ಕರಿಸುವುದಕ್ಕಾಗಿ ೧೯೬೧ರಲ್ಲಿ ಸ್ಥಾಪಿತವಾದ ಪ್ರಶಸ್ತಿಯೇ ಜ್ಞಾನಪೀಠ ಪ್ರಶಸ್ತಿ. ಸಾಹು ಶಾಂತಿಪ್ರಸಾದ್ ಜೈನ್ ಎಂಬ ಮಹನೀಯರು ಸ್ಥಾಪಿಸಿದ ಜ್ಞಾನಪೀಠ ಟ್ರಸ್ಟ್ ವತಿಯಿಂದ ವರ್ಷಕ್ಕೊಮ್ಮೆ ಈ ಪುರಸ್ಕಾರವನ್ನು ನೀಡಲಾಗುತ್ತಿದೆ. ನಷ್ಟಭೀತಿಯಲ್ಲಿರುವ ಅಮೂಲ್ಯ ಪುರಾತನ ಕೃತಿಗಳ ಸಂಶೋಧನೆ ಹಾಗೂ ಸಂಪಾದನೆ ಈ ಟ್ರಸ್ಟ್‌ನ ಸ್ಥಾಪನೆಯ ಸಂಕಲ್ಪಗಳಲ್ಲೊಂದು; ಅಂತೆಯೇ ಸಮಕಾಲೀನ ಸೃಜನಾತ್ಮಕ ಕೃತಿಗಳನ್ನು ಗುರುತಿಸಿ ಪ್ರಚುರಪಡಿಸುವ, ಶ್ರೇಷ್ಠ ಲೇಖಕರನ್ನು ಸನ್ಮಾನಿಸುವ ಮಹದುದ್ದೇಶವನ್ನೂ ಸಂಸ್ಥೆ ಹೊಂದಿದೆ. ೧೯೬೧ರಿಂದ ಹಲವು ವರ್ಷಗಳವರೆಗೆ ಈ ಪುರಸ್ಕಾರದ ಮೊತ್ತವಾಗಿ ಒಂದು ಲಕ್ಷ ರೂಪಾಯಿ ನಗದನ್ನೂ ಸರಸ್ವತೀದೇವಿಯ ಪುರಾತನ ವಿಗ್ರಹವೊಂದರ ಪ್ರತಿಕೃತಿಯನ್ನೂ ಪ್ರಶಸ್ತಿಪತ್ರವನ್ನೂ ಕೊಡಲಾಗುತ್ತಿತ್ತು. ೧೯೮೧ರಲ್ಲಿ ಬಹುಮಾನದ ಮೊತ್ತವನ್ನು ಒಂದೂವರೆ ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಯಿತು. ೨೦೧೫ರ ವೇಳೆಗೆ ಬಹುಮಾನದ ಮೊತ್ತವನ್ನು ಹನ್ನೊಂದು ಲಕ್ಷ ರೂಪಾಯಿಗಳಿಗೆ ಹಿಗ್ಗಿಸಲಾಯಿತು.
ಪುಟಗಳು: 248
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !