ಲೇಖಕರು:
ಸಂಪಾದಕ: ಡಾ।। ನಾ. ಸೋಮೇಶ್ವರ
ಲೇಖಕ: ಎಂ. ಅಬ್ದುಲ್ ರೆಹಮಾನ್ ಪಾಷ
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಜೀಸಸ್ ಎನ್ನುವ ವ್ಯಕ್ತಿಯನ್ನು ಎರಡು ರೀತಿಯಲ್ಲಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬಹುದು. ಮೊದಲನೆಯದು ಭಕ್ತಿಪ್ರಧಾನವಾದ ವಿಧಾನ. ಹಳೆಯ ಒಡಂಬಡಿಕೆಯಲ್ಲಿ ಪ್ರಸ್ತಾಪಿಸಲ್ಪಟ್ಟ ಮಹಾತ್ಮ ಪ್ರವಾದಿ. ಜೀಸಸ್ ದೇವರ ಮಗ. ಮನುಷ್ಯರ ಪಾಪಗಳನ್ನು ತೊಳೆದು ಅವರನ್ನು ಉದ್ಧರಿಸಲೆಂದು ಹುಟ್ಟಿದವನು. ಜೀಸಸ್ ಶಿಲುಬೆಯ ಮೇಲೆ ಪ್ರಾಣವನ್ನು ಬಿಟ್ಟನು. ನಂತರ ಮೂರನೆಯ ದಿನ ಮೃತನಾದವನು ಮತ್ತೆ ಬದುಕಿ ಬಂದನು ಇತ್ಯಾದಿ. ಎರಡನೆಯದು ಐತಿಹಾಸಿಕ ಜೀಸಸ್‌ನನ್ನು ಹುಡುಕುವುದು. ಜೀಸಸ್ ಬದುಕಿದ್ದ ಎನ್ನುವುದನ್ನು ಬಹಳ ಜನರು ಒಪ್ಪಿದ್ದರು. ಐತಿಹಾಸಿಕವಾಗಿ ಈತನ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯುವುದಿಲ್ಲ. ಮ್ಯಾಥ್ಯು, ಮಾರ್ಕ್, ಲ್ಯೂಕ್ ಮತ್ತು ಜಾನ್ ಬರೆದಿರುವ ಸುವಾರ್ತೆಗಳ ಮೂಲಕ ನಮಗೆ ಜೀಸಸ್ ಬಗ್ಗೆ ಮಾಹಿತಿ ದೊರೆಯುತ್ತದೆ. ಆದರೆ ಇವರು ಜೀಸಸ್ ಸಮಕಾಲೀನರಲ್ಲ. ಜೀಸಸ್ ಮರಣಿಸಿದ ೧೦೦-೧೨೦ ವರ್ಷಗಳ ನಂತರ ಇವರು ತಮ್ಮ ಸುವಾರ್ತೆಗಳನ್ನು ಬರೆದರು. ಈ ಸುವಾರ್ತೆ ಗಳಲ್ಲಿ ಜೀಸಸ್ ಬಗ್ಗೆ ಭಿನ್ನ ಭಿನ್ನ ಮಾಹಿತಿಗಳು ದೊರೆಯುತ್ತವೆ. ಹಾಗಾಗಿ ಇವರೆಲ್ಲರೂ ಜನಸಾಮಾನ್ಯರ ನಂಬಿಕೆಗಳನ್ನು ಆಧರಿಸಿ ತಮ್ಮ ಸುವಾರ್ತೆಗಳನ್ನು ಬರೆದರೆನ್ನುವ ತೀರ್ಮಾನಕ್ಕೆ ಬರಬಹುದು. ಈ ಹಿನ್ನೆಲೆಯಲ್ಲಿ ಧಾರ್ಮಿಕ ಜೀಸಸ್ ಜನಪ್ರಿಯನಾಗಿ ಐತಿಹಾಸಿಕ ಜೀಸಸ್ ಕಳೆದುಹೋಗುತ್ತಾನೆ.
ಏಸುವು ಅಂದಿನ ಸಮಾಜದ ಪಂಡಿತ ಭಾಷೆಯಾಗಿದ್ದ ಲ್ಯಾಟಿನ್ ಬಿಟ್ಟು ಜನಸಾಮಾನ್ಯರ ಭಾಷೆಯಾಗಿದ್ದ ಅರಮೈಕ್ ಭಾಷೆಯಲ್ಲಿ ಮಾತನಾಡಿದ. ಪ್ರೀತಿ, ಕರುಣೆ, ವಿಶ್ವಾಸಗಳಿಂದ ತುಂಬಿದ ಹಾಗೂ ಎಲ್ಲರಿಗೂ ಅರ್ಥವಾಗುತ್ತಿದ್ದ ಆತನ ಸರಳ ಮಾತುಗಳು ಸಹಜವಾಗಿ ಜನರನ್ನು ಆಕರ್ಷಿಸಿದವು. ‘ನಾನೊಂದು ಆಜ್ಞೆಯನ್ನು ನೀಡುತ್ತೇನೆ. ನಾನು ನಿಮ್ಮೆಲ್ಲರನ್ನು ಹೇಗೆ ಪ್ರೀತಿಯಿಂದ ನೋಡಿ ಕೊಂಡೆನೋ ಹಾಗೆಯೇ ನೀವೆಲ್ಲರು ಒಬ್ಬರನ್ನೊಬ್ಬರು ಪ್ರೀತಿ, ವಿಶ್ವಾಸದಿಂದ ನೋಡಿಕೊಳ್ಳಬೇಕು’ ಎನ್ನುವುದು ಏಸುವಿನ ಬಹಳ ಪ್ರಮುಖವಾದ ಮಾತು.
ಐತಿಹಾಸಿಕ ಜೀಸಸ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದ ಕ್ರೈಸ್ತರು ಧಾರ್ಮಿಕ ಜೀಸಸನ್ನು ತಮ್ಮ ನಂಬಿಕೆಯನ್ವಯ ಆರಾಧಿಸುತ್ತಿರುವುದು ಮಾತ್ರ ವಾಸ್ತವ.
- ಡಾ|| ನಾ. ಸೋಮೇಶ್ಪರ
ಪುಟಗಳು: 48
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !