ಪ್ರಕಾಶಕರು: ಬಹುರೂಪಿ ಪ್ರಕಾಶನ
Publisher: Bahuroopi Prakashana
1. ಕರ್ನಾಟಕದಲ್ಲಿ ಕುಲಾಧಿಪತ್ಯವು ರಾಜಪ್ರಭುತ್ವ ಮಾದರಿಯಂತೆ ರೂಪುಗೊಳ್ಳುವ ಸಂಕ್ರಮಣ ಕಾಲದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಗಳು ಹೇಗಿದ್ದವು?
2. ಕನ್ನಡದ ಮೊದಮೊದಲ ಅರಸುಮನೆತನಗಳು ಬೌದ್ಧ ಹಾಗು ಜೈನ ಮತಗಳನ್ನು ಪ್ರತ್ಯೇಕವಾಗಿ ಪೊರೆಯುತ್ತಲೇ ವೈದಿಕ ವರ್ಣಾಶ್ರಮವನ್ನು ತಮ್ಮ ಆಡಳಿತ ವ್ಯವಸ್ಥೆಯಲ್ಲಿ ಅಳವಡಿಸಿಕೊಂಡಿದ್ದು ಏಕೆ ಮತ್ತು ಹೇಗೆ?3. ಯಜ್ಞ ಯಾಗಾದಿಗಳ ಮೇಲೆ ನಿಂತಂತಹ ವೈದಿಕ ಆಚರಣೆಗಳ ಸ್ವರೂಪ ಈ ಕಾಲಘಟ್ಟದಲ್ಲಿ ಹೇಗೆ ಬದಲಾಯಿತು?
4. ಸ್ಥಳೀಯ ಬ್ರಾಹ್ಮಣ ವಂಶಗಳ ಹುಟ್ಟು ಹೇಗಾಯಿತು?
5. ಕದಂಬರ ಶಾಸನಗಳ ಪ್ರಕಾರ ಮೊದಲ ಬ್ರಹ್ಮದೇಯಗಳನ್ನು ಪಡೆದ ಹಲವು ಬ್ರಾಹ್ಮಣರ ಗೋತ್ರಗಳು ಅಥರ್ವಣ ವೇದ ಎಂಬುದಾದದ್ದು ಹೇಗೆ?
6. ವರ್ಣವು ಜಾತಿ ಸ್ವರೂಪವನ್ನು ಪಡೆಯುವ ಸಂಕ್ರಮಣ ಕಾಲದ ಸ್ಥಿತಿ-ಗತಿಗಳು ಹೇಗಿದ್ದವು?
ಈ ಆಳವಾದ ಪ್ರಶ್ನೆಗಳು ನಿಮ್ಮವೂ ಆಗಿದ್ದರೆ ನೀವು ಓದಬೇಕಿರುವ ಇಬುಕ್ "ಜಾತಿ ಬಂತು ಹೇಗೆ? " ಪ್ರಸ್ತುತ 'ಜಾತಿ ಬಂತು ಹೇಗೆ?' ಕೃತಿ ಕರ್ನಾಟಕದಲ್ಲಿ ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆಯ ಉಗಮವನ್ನು ಶೋಧಿಸಿದೆ. ಜಾತಿ ಮತ್ತು ಅಸ್ಪೃಶ್ಯತೆಯ ಬಗ್ಗೆ ಜಿ ಎನ್ ನಾಗರಾಜ್ ಅವರು ಮಾಡಿರುವ ಆಳ ಸಂಶೋಧನೆ ಬೆರಗು ಹುಟ್ಟಿಸುತ್ತದೆ.
ಪುಟಗಳು: 256
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !