Click here to Download MyLang App

ವೆಂಕಟಸ್ವಾಮಿ ಎಂ,    ಜಾತಿ ಅಸ್ಪೃಶ್ಯತೆಯ ಸಂಘರ್ಷ,  Venkataswamy M,   Jaati Asprushyateya Sangharsha,

ಜಾತಿ ಅಸ್ಪೃಶ್ಯತೆಯ ಸಂಘರ್ಷ (ಇಬುಕ್)

e-book

ಪಬ್ಲಿಶರ್
ಡಾII ಎಂ. ವೆಂಕಟಸ್ವಾಮಿ
ಮಾಮೂಲು ಬೆಲೆ
Rs. 150.00
ಸೇಲ್ ಬೆಲೆ
Rs. 150.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

 ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ಡಾ|| ಬಿ. ಆರ್. ಅಂಬೇಡ್ಕರ್ ಅವರ ಶಿಕ್ಷಣ-ಸಂಘಟನೆ-ಚಳುವಳಿಯ ಆಧಾರದಿಂದ ಮೊದಲಿಗೆ ಮಹಾರಾಷ್ಟ್ರದಲ್ಲಿ ಹುಟ್ಟಿಕೊಂಡ ದಲಿತರ ಸ್ವಾಭಿಮಾನ; ದಲಿತ ಪ್ಯಾಂಥರ್ಸ್, ದಲಿತ ಸಾಹಿತ್ಯದ ಮೂಲಕ ಪಕ್ಕದ ರಾಜ್ಯಗಳಿಗೆ ಜ್ಯೋತಿಯಂತೆ ಚಾಚಿಕೊಂಡಿತು. ಮೈಸೂರಿನಲ್ಲಿ ಮೊದಲ ಬಾರಿಗೆ ೧೯೭೦ರ ದಶಕದಲ್ಲಿ ಪ್ರೊ|| ಸಂಜೀವಯ್ಯನವರು ಒಂದು ದಲಿತ ಕಮ್ಮಟ ಆಯೋಜಿಸಿ ಹೊಸ ಅಲೆಯೊಂದನ್ನು ಹುಟ್ಟುಹಾಕಲು ಕಾರಣರಾದರು. ಆ ಕಮ್ಮಟದ ಉದ್ಘಾಟನಾ ಭಾಷಣದಲ್ಲಿ ಅಂದಿನ ಕರ್ನಾಟಕ ಪೌರಾಡಳಿತ ಸಚಿವ ಮತ್ತು ಅಂಬೇಡ್ಕರ್‌ವಾದಿ ಬಿ. ಬಸವಲಿಂಗಪ್ಪನವರು ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳ ಬಗ್ಗೆ ಉಲ್ಲೇಖಿಸುತ್ತ ‘‘ಹಿಂದೂ ಧರ್ಮ ಮತ್ತು ಹಿಂದೂ ದೇವರುಗಳಿಂದ ದಲಿತರಿಗೆ ಯಾವ ಒಳಿತೂ ಆಗಿಲ್ಲ, ಹಾಗಾಗಿ ಅಂಬೇಡ್ಕರ್ ಹೇಳುವಂತೆ ಹಿಂದೂ ದೇವರುಗಳನ್ನೆಲ್ಲ ಚರಂಡಿ - ಘಟಾರುಗಳಿಗೆ ನೂಕಿ ದೇವಾಲಯಗಳನ್ನೆಲ್ಲ ಮುಚ್ಚಬೇಕಿದೆ’’ ಎಂದು ಹೇಳುತ್ತ ‘‘ಕನ್ನಡ ಸಾಹಿತ್ಯದಲ್ಲಿ ಏನಿದೆ? ‘ಬೂಸಾ’ ಬಿಟ್ಟು’’ ಎಂದು ದಲಿತ ವಿದ್ಯಾರ್ಥಿಗಳಲ್ಲಿ ವೈಚಾರಿಕ ಕಿಚ್ಚನ್ನು ಹಚ್ಚಿದರು. ಅಂದಿನಿಂದ ದಲಿತ ಮತ್ತು ಶೂದ್ರರಲ್ಲಿ ಹೊಸ ಹೊಸ ಆಲೋಚನೆಗಳು ಹುಟ್ಟಿಕೊಂಡವು. ಅದೇ ಕಾಲಕ್ಕೆ ಶೂದ್ರರ ಸ್ವಾಭಿಮಾನಿ ‘ವಿಶ್ವ ಮಾನವತಾವಾದಿ’ ಕುವೆಂಪು, ಅಂಬೇಡ್ಕರ್ ಹೇಳಿದ ಮಾತುಗಳನ್ನು ಬೇರೆ ರೀತಿಯಲ್ಲಿ ಹೇಳಿ ಕರ್ನಾಟಕದ ಶೂದ್ರರನ್ನು ಬಡಿದೆಬ್ಬಿಸಿದರು. ಅದಕ್ಕೂ ಮುಂಚೆ ಸ್ವಾಮಿ ವಿವೇಕಾನಂದರು ಹಿಂದೂ ಧರ್ಮದಲ್ಲಿನ ಹುಳುಕುಗಳನ್ನೆಲ್ಲ ಹೆಕ್ಕಿ ತಮ್ಮ ಬರಹಗಳಲ್ಲಿ ತೀವ್ರವಾಗಿ ಖಂಡಿಸಿದ್ದರು. ಇದೆಲ್ಲದರ ಫಲಿತಾಂಶ ಸ್ವಾತಂತ್ರ್ಯೋತ್ತರದ ಕಾಲದಲ್ಲಿ ಕರ್ನಾಟಕದಲ್ಲಿ ಶೂದ್ರರು ಮತ್ತು ದಲಿತರಲ್ಲಿ ವೈಚಾರಿಕ ಚಿಂತನೆಗಳು ಕಾಣಿಸಿಕೊಂಡವು.

ಸುಮಾರು ೫ ಸಾವಿರ ವರ್ಷಗಳ ಆಸುಪಾಸು ಭಾರತ ಪ್ರವೇಶಿಸಿದ ಆರ್ಯರು ಮತ್ತು ಇಲ್ಲಿನ ಮೂಲ ಜನಾಂಗಗಳ ನಡುವೆ ಸಾವಿರಾರು ವರ್ಷಗಳ ಕಾಲ ಸಂಘರ್ಷಗಳು ನಡೆದವು. ಮನುವಿಗಿಂತ ಮುಂಚಿನಿಂದಲೇ ಪ್ರಾರಂಭವಾಗಿದ್ದ ವರ್ಣಾಶ್ರಮ ಪದ್ಧತಿ ಮನುಕಾಲಕ್ಕೆ ಒಂದು ರೂಪ ಪಡೆದುಕೊಂಡು ಸಮಾಜದಲ್ಲಿ ಮೇಲುಗೈ ಸ್ಥಾಪಿಸಿಕೊಂಡಿತು. ಆರ್ಯರು ಸ್ಥಳೀಯ ಜನಾಂಗಗಳಾದ ಅಸುರರ ಮೇಲೆ ಯುದ್ಧಗಳನ್ನು ಸಾರಿ ಅವರನ್ನು ನಾನಾ ರೀತಿಯ (ದಶಾವತಾರಗಳ) ಮೋಸಗಳಿಂದ ಸೋಲಿಸಿ ಕೊನೆಗೂ ಸಮಾಜದಲ್ಲಿ ಉಚ್ಚ ಸ್ಥಾನವನ್ನು ಅಲಂಕರಿಸಿದರು. ಕಾಲಾಂತರದಲ್ಲಿ ಹಿಂದೂ ಧರ್ಮ ಶ್ರೀರಾಮ, ಶ್ರೀಕೃಷ್ಣರ ವಂಚನೆಗಳನ್ನು ವೈಭವೀಕರಿಸಿ, ಅವುಗಳನ್ನೇ ಆದರ್ಶವೆಂದು ಸ್ವೀಕರಿಸಿ ವರ್ಣಾಶ್ರಮ ಮೂಲದ ಜಾತಿ, ಅಸ್ಪೃಶ್ಯತೆಯ ಮೂಲಕ ಅಪಾರವಾದ ಭೇದಭಾವಗಳನ್ನು ಹುಟ್ಟುಹಾಕಿತು. ಹಿಂದೂ ಸಮಾಜದಲ್ಲಿನ ಜಾತಿಗಳು, ಅಸ್ಪೃಶ್ಯರ ಸ್ಥಾನಮಾನ ಮತ್ತು ಅಸ್ಪೃಶ್ಯತೆ ತೀರ ಜಟಿಲವಾದ ಸಮಸ್ಯೆಯಾಗಿ ಪರಿಣಮಿಸಿತು. ಇದರ ಜೊತೆಗೆ ಸಾಮಾಜಿಕ ಮತ್ತು ಆರ್ಥಿಕ ವರ್ಗಗಳು, ವರ್ಗವೈರುಧ್ಯ ಹಾಗೂ ವರ್ಗೀಯ ಹಿತಾಸಕ್ತಿಗಳು ಜಾತಿ, ಅಸ್ಪೃಶ್ಯತೆಯನ್ನು ಮುಂದುವರಿಸಿಕೊಂಡು ಬರುವಂತಹ ಪರಿಸ್ಥಿತಿ ಉಂಟಾಯಿತು. ಮಹಿಳೆಯರನ್ನಂತೂ ಎಲ್ಲಾ ರೀತಿಯಲ್ಲೂ ಶೋಷಣೆಗೆ ಒಳಪಡಿಸಲಾಯಿತು. ಹಿಂದೂ ಧರ್ಮ, ಬ್ರಾಹ್ಮಣ ಮಹಿಳೆಯನ್ನು ಸಹ ಶೂದ್ರರಿಗೆ ಸಮಾನ ಎಂದಿತು.

ಈ ಶತಮಾನದ ಶ್ರೇಷ್ಠ ಪ್ರತಿಭಾವಂತರು, ಮೇಧಾವಿಗಳು ಆದ ಡಾ|| ಬಾಬಾಸಾಹೇಬ್ ಅಂಬೇಡ್ಕರ್ ಅವರು ‘ಪ್ರಗತಿಗೆ ವಿದ್ಯೆಯೇ ಮೂಲ’ ಎನ್ನುವ ಮಂತ್ರವನ್ನು ಬೋಧಿಸಿದರು. ಈ ರಾಷ್ಟ್ರದಲ್ಲಿ ಜನ್ಮತಾಳಿದ ಪ್ರತಿಯೊಬ್ಬರೂ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಸಮಾನ ಹಕ್ಕುಗಳನ್ನು ಪಡೆಯಬೇಕು ಎಂದು ಹೋರಾಡಿದ ಮಹಾಚೇತನ ಅಂಬೇಡ್ಕರ್. ಈ ಮಹಾಜ್ಞಾನಿಯ ಚಿಂತನೆಗಳನ್ನು ಅರಿತುಕೊಳ್ಳುವುದು ಪ್ರತಿಯೊಬ್ಬ ದಲಿತನ ಆದ್ಯಕರ್ತವ್ಯವಾಗಿದೆ. ಬ್ರಾಹ್ಮಣರಿಗೆ ವೇದ ಉಪನಿಷತ್ತುಗಳು ಹೇಗೆ ಮುಖ್ಯವೋ ದಲಿತರಿಗೆ ಅಂಬೇಡ್ಕರ್ ಚಿಂತನೆಗಳು, ತತ್ವಗಳು ಅದಕ್ಕಿಂತ ಮುಖ್ಯ. ಅಂಬೇಡ್ಕರ್, ದಲಿತರಲ್ಲಿ ಮೂಡಿಸಿದ ಆತ್ಮವಿಶ್ವಾಸ, ಚೈತನ್ಯ ಮತ್ತು ಸ್ಫೂರ್ತಿಯನ್ನು ಪಡೆದುಕೊಳ್ಳಬೇಕಾದರೆ ಅವರ ವಿಚಾರಗಳನ್ನು ದಲಿತ ವಿದ್ಯಾವಂತರು ಹೆಚ್ಚೆಚ್ಚಾಗಿ ಚಿಂತನೆ ಮಾಡಿ ಕಾರ್ಯರೂಪಕ್ಕೆ ತರಬೇಕಾಗಿದೆ. ಅಂಬೇಡ್ಕರ್ ತಮ್ಮ ದಲಿತ ಬಾಂಧವರ ಬಗ್ಗೆ ಯಾವ ರೀತಿಯ ಭಾವನೆಗಳನ್ನು ಇಟ್ಟುಕೊಂಡಿದ್ದರು ಎನ್ನುವುದಕ್ಕೆ ಈ ಮಾತುಗಳೇ ಸಾಕ್ಷಿ. ‘ಯಾವಾಗ ನಾನು ನನ್ನ ಬದುಕಿನ ಅರ್ಥವನ್ನು ತಿಳಿದುಕೊಳ್ಳಲು ಸಮರ್ಥನಾದೆನೋ ಅಂದಿನಿಂದ ನನ್ನ ಅಸ್ಪೃಶ್ಯ ಬಾಂಧವರಿಗಾಗಿ ಸೇವೆ ಮಾಡಬೇಕೆಂಬ ತತ್ವವನ್ನು ನನ್ನ ಬದುಕಿನಲ್ಲಿ ಅಳವಡಿಸಿಕೊಂಡಿದ್ದೇನೆ. ನಾನು ಎಲ್ಲೇ ಇರಲಿ, ಹೇಗೇ ಇರಲಿ, ಯಾವುದೇ ಸ್ಥಿತಿಯಲ್ಲಿರಲಿ, ನಾನು ಯಾವತ್ತೂ ನನ್ನ ಬಾಂಧವರ ಒಳಿತಿನ ಬಗ್ಗೆಯೇ ಆಲೋಚಿಸುತ್ತಿದ್ದೆ ಮತ್ತು ಯಾವುದೇ ಬೇರೆ ಸಮಸ್ಯೆಗಳಿಗೆ ಅಷ್ಟೊಂದು ಪ್ರಾಮುಖ್ಯತೆ ಕೊಟ್ಟಿಲ್ಲ’ ಎಂದಿದ್ದಾರೆ. ಅಂಬೇಡ್ಕರ್ ತಮ್ಮ ಬದುಕನ್ನು ಆದರ್ಶಪ್ರಾಯವಾಗಿ ಬದುಕಿ ತೋರಿಸಿದ್ದಾರೆ.

ಅಸ್ಪೃಶ್ಯರು ಮತ್ತು ಅಸ್ಪೃಶ್ಯತೆಯ ಮೂಲವನ್ನು ಕುರಿತ ಪೂರ್ಣವಾದ ಪುಸ್ತಕವೊಂದು ಕನ್ನಡದಲ್ಲಿ ಇಲ್ಲದೆ ಇದ್ದು ಆ ಕೊರತೆಯನ್ನು ಸ್ವಲ್ಪಮಟ್ಟಿಗೆ ಈ ಪುಸ್ತಕ ತುಂಬುತ್ತದೆ ಎನ್ನುವ ತೃಣ ಆಸೆ ನನ್ನಲ್ಲಿ ಅಡಗಿದ್ದು, ಅಸ್ಪೃಶ್ಯರು ಮತ್ತು ಶೂದ್ರ ಸಂಸ್ಕೃತಿಯ ಬಗ್ಗೆ ಆಸಕ್ತಿ ಇರುವವರಿಗೆ ಈ ಪುಸ್ತಕ ಸಹಾಯವಾಗಬಹುದು.

 

ಪುಟಗಳು: 220

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !