ಸಾವಿರಾರು ವರ್ಷಗಳ ಹಿಂದೆ, ಅದೊಂದು ದಟ್ಟವಾದ ಕಾನನ, ಗಗನ ಚುಂಭೀ ವೃಕ್ಷಗಳು, ವೈವಿಧ್ಯಮಯ ಜೀವ ಸಂಕುಲ,ಅದು ಆಧುನಿಕತೆಯಿಂದ ಬಹು ದೂರವಿದ್ದ ಪ್ರದೇಶ. ಅಲ್ಲೊಂದು ದೊಡ್ಡ ಸರೋವರ, ಮುಂಜಾನೆಯ ಸೂರ್ಯ ಆಗತಾನೇ ಉದಯಿಸುತ್ತಿದ್ದಾನೆ. ಆ ಬಂಗಾರದ ಬಣ್ಣದ ಬೆಳಕಿನಲ್ಲಿ, ಆ ಬೆಳಕಿಗೆ ಎದುರಾಗಿ ಕಟ್ಟುಮಸ್ತಾದ ,ವಿಶಾಲವಾದ ಎದೆಯ, ಶಕ್ತಿಯುತವಾದ ಮಾಂಸ ಖಂಡಗಳ ,ಬಂಡೆಯಂತೆಯೇ ಬಲಿಷ್ಠವಾದ ದೇಹವನ್ನು ಹೊಂದಿರುವ ಒಬ್ಬ ಅಜಾನುಬಾಹು ನಿಂತಿದ್ದಾನೆ. ಅವನ ದೇಹಕ್ಕೆ ಸುತ್ತಲಿದ್ದವರೆಲ್ಲಾ ದೂಳನ್ನು ಎಸೆಯುತ್ತಿದ್ದಾರೆ. ಏಕೆ ಎಲ್ಲರೂ ಆ ರೀತಿ ಮಾಡುತ್ತಿದ್ದಾರೆ? ಅವನೇನಾದರೂ ಅಪರಾಧ ಮಾಡಿದ್ದಾನೆಯೇ?ಅವರು ಎರಚುತ್ತಿರುವುದು ಮಣ್ಣಿನ ಧೂಳಿನ ಕಣಗಳೇ? ಮೇಲಿನ ಕಾದಂಬರಿಯ ಸಾಲುಗಳು ಮಕ್ಕಳಲ್ಲಿ ಖಂಡಿತಾ ಕುತೂಹಲವನ್ನು ಮೂಡಿಸುತ್ತದೆ ಎಂಬುದು ನನ್ನ ನಂಭಿಕೆ, ಇದೊಂದು ಮಕ್ಕಳಿಗಾಗಿ ಸರಳವಾದ ಭಾಷೆಯಲ್ಲಿ ಅವರಿಗೆ ಅರ್ಥವಾಗುವ ರೀತೀಯಲ್ಲಿ ಬರೆದಿರುವ ಪುಟ್ಟ ಕಾದಂಬರಿ. ಇದರಲ್ಲಿ ಎಲ್ ಡೋರಾಡೋ ಬಗೆಗಿನ ಮೂಲ ಕಥೆಯಿಂದ ಹಿಡಿದು , ಅದರ ಸುತ್ತ ಎಣೆದುಕೊಂಡ ದಂತ ಕಥೆಗಳನ್ನೂ ಅದರ ಹಿಂದೆ ಬಿದ್ದು ಸಾಹಸ ಮಾಡಿ ಸೋತ/ಗೆದ್ದ ಕಥೆಗಳನ್ನು ಒಬ್ಬ ತಂದೆ ತನ್ನ ಮಗಳಿಗೆ ಹೇಳುವ ಸಂವಾದಾತ್ಮಕ ಕಥೆಯ ರೂಪದಲ್ಲಿ ಮೂಡಿ ಬಂದಿದೆ. ದಕ್ಷಿಣ ಅಮೆರಿಕಾದ ಅಮೆಜಾನ್ ಕಾಡಿನ ಬಗೆಗಿನ ವಿವರಣೆಗಳು, ಯುರೋಪಿಯನ್ನರು ಅಲ್ಲಿಗೆ ಕಾಲಿಟ್ಟ ನಂತರ ಅಲ್ಲಿನ ಮೂಲ ನಿವಾಸಿಗಳ ಪರಿಸ್ಥಿತಿಗಳು.ಎಲ್ ಡೋರಾಡೊ ದಂತಕಥೆಯಿಂದ ಉಂಟಾದ ಋಣಾತ್ಮಕ ಮತ್ತು ಧನಾತ್ಮಕ ಅಂಶಗಳನ್ನು ಈ ಕಾದಂಬರಿಯು ಒಳಗೊಂಡಿದೆ.