ಲೇಖಕರು:
ಸಂಪಾದಕ: ಡಾ।। ನಾ. ಸೋಮೇಶ್ವರ
ಲೇಖಕಿ: ಡಾ|| ಗೀತಾ ಶೆಣೈ
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಇರಾವತಿ ಕರ್ವೆಯವರು ಭಾರತದ ಪ್ರಥಮ ಮಾನವಶಾಸ್ತ್ರಜ್ಞೆ. ಭಾರತೀಯ ವಿಶ್ವವಿದ್ಯಾ ಲಯಗಳಲ್ಲೂ ಮಾನವಶಾಸ್ತ್ರ ಎಂದರೆ ಏನು ಎಂದು ಕೇಳುವ ಸಮಯದಲ್ಲಿ ಇರಾವತಿ ಯವರು ಜರ್ಮನಿಯ ಕೈಸರ್ ವಿಲ್ಹೆಲ್ಮ್ ಮಾನವಶಾಸ್ತ್ರ, ಮಾನವ ಆನುವಂಶಿಕತೆ ಮತ್ತು ಸುಸಂತತಿ ಶಾಸ್ತ್ರಗಳ ಸಂಸ್ಥೆ (ಕೈಸರ್ ವಿಲ್ಹೆಲ್ಮ್ ಇನ್ಸ್ಟಿಟ್ಯೂಟ್ ಆಫ್ ಆಂಥ್ರೋಪಾಲಜಿ, ಹ್ಯೂಮನ್ ಹೆರಿಡಿಟಿ ಅಂಡ್ ಯೂಜೆನಿಕ್ಸ್) ಯನ್ನು ಸೇರಿ ಪಿಎಚ್.ಡಿ. ಪಡೆಯುತ್ತಾರೆ. ಇರಾವತಿಯವರು ಎಂದಿಗೂ ‘ಆರಾಮ ಕುರ್ಚಿ’ಯ ಸಂಶೋಧಕರಾಗಿರಲಿಲ್ಲ. ಇವರು ತಮ್ಮ ಎಲ್ಲ ಕೆಲಸಗಳನ್ನು ಕ್ಷೇತ್ರಾಧ್ಯಯನದ ಮೂಲಕವೇ ನಡೆಸಿದ್ದು ವಿಶೇಷ. ಪಂಡರಿವಾರಿ ಸಂಸ್ಕೃತಿ ಯನ್ನು ಅರಿತುಕೊಳ್ಳಲು ಒಂದಲ್ಲ ಹಲವು ಸಲ ಭಕ್ತರ ಜೊತೆಗೆ ಪಂಡರಾಪುರ ಯಾತ್ರೆಯನ್ನು ಕಾಲ್ನಡಿಗೆಯಲ್ಲಿ ನಡೆಸುತ್ತಾರೆ. ಹಳ್ಳಿಗರ ನಡುವೆಯೇ ಉಳಿದು ಅವರ ದೈನಂದಿನ ಬದುಕನ್ನು ಅಧ್ಯಯನ ಮಾಡುವುದರ ಜೊತೆಗೆ ಅವರ ನಂಬಿಕೆ, ಮೂಢನಂಬಿಕೆ, ಭಾಷಾ ವೈಭವ, ಸಾಂಸ್ಕೃತಿಕ ಶ್ರೀಮಂತಿಕೆ ಹಾಗೂ ದುರ್ಬಲತೆಗಳನ್ನು ಅಧ್ಯಯನ ಮಾಡುವ ವೈಖರಿ ಮಾದರಿ ಯಾಗಿದೆ. ಇರಾವತಿ ಕರ್ವೆಯವರ ‘ಯುಗಾಂತ’ ಎನ್ನುವ ಮಹಾಭಾರತ ಸಂಬಂಧಿತ ಸಂಶೋಧನಾ ಪ್ರಬಂಧ, ಪ್ರತಿಯೊಬ್ಬ ಭಾರತೀಯನು ಒಮ್ಮೆಯಾದರೂ ಓದಲೇಬೇಕಾದ ಕೃತಿ.
ಪುಟಗಳು: 48
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !