Click here to Download MyLang App

 ಪೂರ್ಣಿಮಾ ಮಾಳಗಿಮನಿ,  ಇಜಯಾ,  Poornima Malagimani,  Ijaya  ejaya,

ಇಜಯಾ (ಇಬುಕ್)

e-book

ಪಬ್ಲಿಶರ್
ಪೂರ್ಣಿಮಾ ಮಾಳಗಿಮನಿ
ಮಾಮೂಲು ಬೆಲೆ
Rs. 140.00
ಸೇಲ್ ಬೆಲೆ
Rs. 140.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

 

ಪ್ರಕಾಶಕರು: ಗೋಮಿನಿ ಪ್ರಕಾಶನ

Publisher: Gomini Prakashana

 

ಪೂರ್ಣಿಮಾ ಅವರ ಈ ಕಾದಂಬರಿ ಅಧ್ಯಾಯಗಳಲ್ಲಿ ಬೆಳೆಯುವಾಗ ಓದುವ ಖುಷಿ ನನಗೆ ಸಿಕ್ಕಿತ್ತು. ಲಾಕ್‌ಡೌನ್‌ನ ದಿನಗಳಲ್ಲಿ ಈ ಕಥೆ,ಅದರ ಬೆಳವಣಿಗೆ ಕೊಟ್ಟ ‌ಮಜಾ‌ ಇನ್ನೂ ನೆನಪಿದೆ.
ನಮಗೆಲ್ಲರಿಗೂ ಒಂದೊಂದು ಆಸೆಗಳಿರುತ್ತವೆ,‌ಕನಸುಗಳಿರುತ್ತವೆ. ಆದರೆ ಅದು ನೇರವೇರಲಾರದ್ದಕ್ಕೆ ನೆಪಗಳೂ ಇರುತ್ತವೆ. ಹಲವು ಬಾರಿ ಅದು ನಮ್ಮ ಸಮಾಧಾನಕ್ಕೆ ಒದಗುವುದು.


ಇಲ್ಲಿ ಪೂರ್ಣಿಮಾ ಹಲವಾರು ಪದರಗಳಲ್ಲಿ ಈ ಮಿತಿಗಳ ಮೀರುವಿಕೆಯ ಶೋಧಿಸಿದ್ದಾರೆ.
ನಾಯಕಿಯ ಕಂಫರ್ಟ್ ಝೋನ್ ಒಳಗಡೆಯ ಏಕತಾನತೆಯ ಬದುಕು, ಅದರೊಳಗೆ ಅರಳುವ ಹೊಸ ಗುರುತಿಸುವಿಕೆ, ಅದರಲ್ಲಿ ಹಾರಾಡುವ ಮೊದಲೇ ರೆಕ್ಕೆಗೆ ಕಟ್ಟಿದ ಭಾರಗಳು.‌
ಹಾಗಾದರೆ ಇದೆಲ್ಲವೂ ಇಷ್ಟೆಯೇ ಎನ್ನುವಾಗಲೇ ನಿನ್ನೆ ಇದ್ದವರು ಇಂದಿಲ್ಲ ಎಂಬ ಸತ್ಯ ಕಂಡು ಆಕೆಯ ಇನ್ನಷ್ಟು ಅಂತರ್ಮುಖಿಯಾಗಿಸುತ್ತದೆ.


ಅಚಾನಕ್ ಆಗಿ ಒದಗಿದ ಒಂದು ಸನ್ನಿವೇಶ ಆಕೆಗೆ ಇದೆಲ್ಲವ ಬಿಟ್ಟು ‌ನನ್ನಿಷ್ಟದಲ್ಲಿ ಮುಳುಗಿದ್ದರೆ ಇನ್ನೂ ಸಾಧಿಸಬಹುದಿತ್ತೇ? ಎಂಬ ಹಂಬಲಕ್ಕೆ ಪೂರಕವಾಗಿ ಒದಗುತ್ತದೆ. ಆದರೆ ಗೂಡಲ್ಲಿ ಕೂತು ಹಂಬಲಿಸುವುದಕ್ಕೂ ಪಂಜರದೊಳಗೆ ಬಂಧಿಯಾಗಿ ಬಿಡುಗಡೆಯ ಕಾತರಕ್ಕೂ ವ್ಯತ್ಯಾಸ ಇದೆ ಎಂಬುದು ಆಕೆಯ ಅರಿವಿಗೆ ಬರುತ್ತದೆ.

ಕನಸಿನಂತಹ ಘಟನೆಗಳು ಇದೆಲ್ಲ ನಾಯಕಿ ಭ್ರಮೆ ಎಂಬಂತೆ ಓದುಗನಿಗೆ ಕಾಣುತ್ತದೆ.
ಆದರೆ ಕಾದಂಬರಿಯ ಕೊನೆ ಬಂದಂತೆ ಇದನ್ನು ವಾಸ್ತವದೊಡನೆ ಮುಖಾಮುಖಿಯಾಗಿಸಿ ಯಾರೂ ಇಲ್ಲಿ ಅನಿವಾರ್ಯರಲ್ಲ .ಎಲ್ಲವೂ ಅಂದುಕೊಂಡ ಹಾಗೆ ಆಗುವುದು ಸಾಧ್ಯವೂ ಅಲ್ಲ ಸಾಧುವೂ ಅಲ್ಲ ಎಂಬುದು ತಿಳಿಯುತ್ತದೆ.

ನನಗೆ ನಿರಾಳ ಶೈಲಿ.
ನಾಯಕಿಯ ಗೊಂದಲಗಳ ಚಿತ್ರಣ (ಬಹುಶಃ ಕನಸು ಕಟ್ಟಿಕೊಂಡು ಗೃಹಿಣಿಯಾದ ಬಳಿಕ ಅದೆಲ್ಲ ಹಿನ್ನೆಲೆಗೆ ಸರಿದ ಎಲ್ಲಾ ಮಹಿಳೆಯರ ಚಿತ್ರಣ ಇದು)
ಕಾದಂಬರಿಯ ಅಂತ್ಯ
ಬಹಳ ಹಿಡಿಸಿತು.

ಸುಮ್ಮನೇ ಬರೆಯುತ್ತಾ ಹೋದ ಹಾಗೆ ಕಂಡರೂ ಪೂರ್ಣಿಮಾರವರಿಗೆ ಬಹುಶಃ ಇದು ಹೊಮ್ಮಿಸುವ ಎಲ್ಲಾ ದನಿಗಳ ದಾಟಿಸುವಲ್ಲಿ ಯಶಸ್ವಿಯಾಗುತ್ತಾರೆ.

ಕೃತಿ ಓದುಗನಲ್ಲಿ ಹುಟ್ಟಿಸುವ ತಳಮಳವೇ ಅದರ ಯಶಸ್ಸಿಗೆ ಸಾಕ್ಷಿ.

 

ಕೃಪೆ 

 https://www.goodreads.com/book/show/57725990-ijaya

 

ಈಗ ಓದಿ ಕೇವಲ ನಿಮ್ಮ ಮೈಲ್ಯಾಂಗ್ ಆ್ಯಪ್ ಅಲ್ಲಿ.

 

ಪುಟಗಳು: 184

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
A
Akhila H S
ವಿಶಿಷ್ಚ ಕಥಾವಸ್ತು ಹೊಂದಿರುವ ನವಿರಾದ ನಿರೂಪಣೆಯ ಈ ಕೃತಿ ನಿಮ್ಮ ಕನಸುಗಳಿಗೆ ಬಣ್ಣ ತುಂಬುವುದರಲ್ಲಿ ಸಂಶಯವಿಲ್ಲ.

ಪುಸ್ತಕ ಓದಿ ಅಚ್ಚರಿ , ಖುಷಿ, ಒಟ್ಟಿಗೆ ಆಯಿತು. ಓದಿದ ಮೇಲೆ ತುಂಬಾ ಕಾಡುವ ಕಾದಂಬರಿ. ಒಬ್ಬ ಮಹಿಳೆ, ವೈಯಕ್ತಿಕ ಜೀವನ, ವೃತ್ತಿ ಜೀವನದ ನಡುವಿನ ಹೊಯ್ದಾಟದ ನಡುವೆ ಕನಸಿನ ಕೂಸುಗಳ ಹೇಗೆ ಸಾಕುತ್ತಾಳೆ? ಎಂಬ ಕಥಾವಸ್ತುವಿನ ಸುತ್ತ ನೇಯ್ದಿರುವ ಈ ಕತೆ ಅದರ ನಿರೂಪಣೆಯಲ್ಲಿ ನೂರಕ್ಕೆ ನೂರು ಯಶಸ್ಸು ಕಂಡಿದೆ. ಎಷ್ಟೋ ಪುಸ್ತಕ ಓದಿದಾಗ ನಮ್ಮ ಕನಸುಗಳು ರೆಕ್ಕೆ ಕಟ್ಟೋ ಪ್ರಯತ್ನ ಮಾಡುತ್ತೆ. ಆದರೆ ಇನ್ನೇನು ಹಾರ ಬೇಕು ಅನ್ನಿವಾಗ ಖಾಲಿ ಹೊಟ್ಟೆ ಚುರುಗುಟ್ಟಿ ಭುವಿ ಮೇಲೆ ಚೆಲ್ಲಿರುವ ಕಾಳುಗಳ್ಳನ ಹೆಕ್ಕೊ ತರ ಆಗಿರುತ್ತೆ. ಈ ಪುಸ್ತಕ ಕನಸುಗಳಿಗೆ ಬರಿ ರೆಕ್ಕೆ ಕಟ್ಟಲ, ಜೊತೆಗೆ ಇಂಧನ ಕೂಡ ತುಂಬಿಸಿ ಗಟ್ಟಿಗೊಳಿಸುತ್ತೆ. ಕಥೆ ಮೊದಲ ಅರ್ಧ ಸದ್ದಿಲದೆ ಅರಳುವ ಹೂವಿನ ತರ ಅರಳಿ ನಿಂತರೆ ಕೊನೆಯ ಅರ್ಧ ಎಲ್ಲೆಲೋ ಸುತ್ತಿಸಿ ಕೊನೆಯ ನಿಲ್ದಾಣಕ್ಕೆ ಬರುವ ಬಸ್ ಪ್ರಯಾಣದಂತಿದೆ. ಪುಸ್ತಕದಲ್ಲಿ ಬಹಳ ಹಿಡಿಸಿದ್ದು ಅದರಲ್ಲಿ ಬರುವ ರೂಪಕಗಳು ( ಜೀವನ ಪೂರ್ತಿ ಗಳಿಕೆಯನ್ನು ಕೊಟ್ಟು ಕೊಂಡ ಮನೆಯಲ್ಲಿ ನಿದ್ದೆ ಬಾರದೆ , ಖಾಲಿ ಜೇಬಿನ ತುಂಬಾ , ತಾಜಾ ಗಾಳಿಯನ್ನು ತುಂಬಿಸಿಕೊಳ್ಳಲು ಅರಳಿ ಮರದ ಕೆಳಗೆ ಮಲಗಿದ ಮಾಲೀಕ... ಹೀಗೆ ಹತ್ತು ಹಲವು ಚೆಂದದ ಕಾವ್ಯಮಯ ರೂಪಕಗಳಿವೆ ) . ಪುಸ್ತಕದ ಅರ್ಪಣೆ ಕೂಡ ಭಿನ್ನವಾಗಿದೆ, ಮತ್ತೆ ಮತ್ತೆ ಓದೊ ತರ ಇದೆ. ಲೇಖಕಿಯವರ ಅಗಾಧ ಓದಿನ ವಿಸ್ತಾರದ ಅನಾವರಣವು ಕೃತಿಯಲ್ಲಿ ಆಗುತ್ತದೆ. ಪುಟ್ಟ ಪುಟ್ಟ ಪಾತ್ರಗಳಿಗೂ ಅದರದ್ದೇ ಆದ ವ್ಯಕ್ತಿತ್ವ ನೀಡಿ ಒಂದು ಇಮೇಜ್ ಸೃಷ್ಟಿಸಿರುವುದು ಇಷ್ಟ ಆಯಿತು. ಉದಾ : ಮಾವನ ಪಾತ್ರ, ಮಾಲಿನಿ ಪಾತ್ರ.. ಹೀಗೆ ಪೋಷಕ ಪಾತ್ರಗಳಿಗೂ ಅಷ್ಟೇ ಆಸ್ಥೆಯಿಂದ ಬಣ್ಣ ಹಚ್ಚಿರುವುದು ಶ್ಲಾಘನೀಯ. ಪುಸ್ತಕಪ್ರಿಯರು, ಕನಸುಕಾಣುವವರು, ಕನಸುಗಳಿಗೆ ಎಳ್ಳು ನೀರು ಬಿಟ್ಟವರೆಲ್ಲರೂ ಓದಲೇ ಬೇಕಾದ ಪುಸ್ತಕ.