ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಪದ್ಯಕಾವ್ಯದ ಬಗೆಗೆ ಜನಮನದ ಗಮನ ಸೆಳೆಯುವುದೇ ಈ ಸಂಕಲನದ ಮೊದಲ ಉದ್ದೇಶ. ಕಳೆದ ಶತಮಾನದ ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯೋತ್ತರ ಸಂದರ್ಭಗಳಲ್ಲಿ ತಮ್ಮ ಕವಿತೆಗಳಿಂದ ಕನ್ನಡಿಗರನ್ನು ಜಾಗೃತಿಗೊಳಿಸುವ, ಮನಸ್ಸಿಗೆ ಆಹ್ಲಾದ ತುಂಬುವ, ಹಿತನುಡಿಯುವ ಹಾಗೂ ವಸ್ತುಸ್ಥಿತಿಯನ್ನು ಶಬ್ದಚಿತ್ರದಲ್ಲಿ ಕಣ್ಣಿಗೆ ಕಟ್ಟುವಂತೆ ಮೂಡಿಸುವ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಕನ್ನಡ ಕವಿವರೇಣ್ಯರನ್ನು ಸ್ಮರಿಸುವುದು, ಅವರ ಕಾವ್ಯದ ಹಲವು ಸೊಗಸಿನ ಸಾಲುಗಳನ್ನು ಮತ್ತೊಮ್ಮೆ ಓದಿ ನೆನಪಿಸಿಕೊಳ್ಳುವುದು ಇಂದಿನವರ ಕರ್ತವ್ಯವೂ ಹೌದು.
ಶಾಲಾಕಾಲೇಜುಗಳಲ್ಲಿ ದಿನನಿತ್ಯದ ಪ್ರಾರ್ಥನಾಸಭೆಯಲ್ಲಿ ಆಯಾ ದಿನದ ಸುದ್ದಿಯೊಡನೆ ಸೂಕ್ತಿಯೊಂದನ್ನು ಓದುವ ಪರಿಪಾಟವಿದೆ. ತರಗತಿಯ ಕಪ್ಪುಹಲಗೆಯಲ್ಲಿ ಸುಭಾಷಿತಗಳನ್ನು ಬರೆಯುವ ರೂಢಿಯಿದೆ. ಕೈಬರೆಹದ ಇಲ್ಲವೇ ಮುದ್ರಿತ ಶಾಲಾ ಸಂಚಿಕೆಗಳನ್ನು ಪ್ರಕಟಿಸುವಾಗ ಲೇಖನದ ಬಿಡುವಿನ ಎಡೆಗಳಲ್ಲಿ ಕವಿಸೂಕ್ತಿಗಳನ್ನು ಮುದ್ರಿಸುವುದಿದೆ. ವಾರ್ಷಿಕ ದಿನಚರಿಯ ಪ್ರತಿಪುಟದ ಅಡಿಯಲ್ಲೊಂದು ಕವಿವಾಣಿಯನ್ನು ಕಾಣಿಸುವುದೂ ಉಂಟು. ವಿದ್ಯಾರ್ಥಿಗಳ ಈ ಎಲ್ಲ ಚಟುವಟಿಕೆಗಳಿಗೆ ಕವಿಸೂಕ್ತಿಗಳ ಈ ಸಂಗ್ರಹ ನೆರವು ನೀಡಲಿದೆ. ವಿವಿಧ ವಿಷಯಗಳನ್ನು ಕುರಿತ ಭಾಷಣ, ಪ್ರಬಂಧಲೇಖನ, ಯೋಜನಾಕಾರ್ಯಗಳ ತಯಾರಿಕೆಯಲ್ಲೂ ಇಲ್ಲಿನ ಸೂಕ್ತಿಗಳನ್ನು ಬಳಸಿಕೊಳ್ಳಲು ಸಾಧ್ಯ. ಇವೆಲ್ಲ ಉದ್ದೇಶಗಳಿಗೆ ಹೊಂದುವಂತಹ ಕವನಪಂಕ್ತಿಗಳನ್ನೇ ಹುಡುಕಿ ಆಯ್ದು ಕೊಡುವ ಪ್ರಯತ್ನ ಈ ಸಂಕಲನದಲ್ಲಿದೆ. ಮೂವತ್ತೈದಕ್ಕೂ ಹೆಚ್ಚು ಪ್ರಸಿದ್ಧಕವಿಗಳ ವಿವಿಧ ಕವಿತೆಗಳಿಂದ ಆಯ್ದ ನೂರಾರು ಸಾಲುಗಳು ಇಲ್ಲಿವೆ. ಈ ಸಾಲುಗಳ ಓದಿನಿಂದ ಪ್ರೇರಿತರಾಗಿ ಆಯಾ ಕವಿಗಳ ಗೀತೆಗಳನ್ನು ಓದುವುದಕ್ಕೆ ಆಸ್ಪದವಾದರೆ ಇನ್ನೂ ಒಳ್ಳೆಯದು. ಈ ಸಂಕಲನದಲ್ಲಿರುವ ಉಕ್ತಿಗಳ ಅರ್ಥದ ತಿಳಿವು, ಮೂಲಪಠ್ಯದ ವಿಸ್ತೃತ ಪರಿಶೀಲನೆ, ಅಧ್ಯಯನಗಳಿಂದ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯವು ಎಷ್ಟು ಶ್ರೀಮಂತ ಎನ್ನುವುದರ ಮನವರಿಕೆಯೂ ಅಭಿಮಾನವೂ ಮೂಡಲೆಂಬುದು ನನ್ನ ಆಶಯ. ಈ ಸಂಕಲನದಲ್ಲಿರುವ ಸೂಕ್ತಿಗಳನ್ನು ಬರೆದ ಕವಿಗಳಿಗೂ, ಅಂಥ ಒಳ್ನುಡಿಗಳನ್ನು ಒಳಗೊಂಡಿರುವ ಕವನ ಸಂಗ್ರಹಗಳನ್ನು ಪ್ರಕಟಿಸಿರುವ ಪ್ರಕಾಶನಸಂಸ್ಥೆಗಳಿಗೂ ಕೃತಜ್ಞತೆಗಳು.
ಈ ಸಂಕಲನದಲ್ಲಿ ಬಳಸಿಕೊಳ್ಳಲಾಗಿರುವ ಸೂಕ್ತಿಗಳನ್ನು ಮುಂದೆ ಹೆಸರಿಸಲಾದ ಕವಿವರ್ಯರ ವಿವಿಧ ಕವನಗಳಿಂದ ಉದ್ಧರಿಸಲಾಗಿದೆ:
ಶ್ರೀ (ಬಿ. ಎಂ. ಶ್ರೀಕಂಠಯ್ಯ)
ಆನಂದಕಂದ (ಬೆಟಗೇರಿ ಕೃಷ್ಣಶರ್ಮ)
ಕವಿಶಿಷ್ಯ (ಪಂಜೆ ಮಂಗೇಶರಾಯ)
ಎಂ. ಗೋವಿಂದ ಪೈ
ಡಿ.ವಿ.ಜಿ. (ಡಿ. ವಿ. ಗುಂಡಪ್ಪ)
ಕುವೆಂಪು (ಕೆ. ವಿ. ಪುಟ್ಟಪ್ಪ)
ಅಂಬಿಕಾತನಯದತ್ತ (ದ. ರಾ. ಬೇಂದ್ರೆ)
ಪು.ತಿ.ನ. (ಪು. ತಿ. ನರಸಿಂಹಾಚಾರ್)
ಕೆ.ಎಸ್. ನ. (ಕೆ. ಎಸ್. ನರಸಿಂಹಸ್ವಾಮಿ)
ವಿನಾಯಕ (ವಿ. ಕೃ. ಗೋಕಾಕ)
ಎಂ. ಗೋಪಾಲಕೃಷ್ಣ ಅಡಿಗ
ಜಿ. ಎಸ್. ಶಿವರುದ್ರಪ್ಪ
ಮಧುರಚೆನ್ನ (ಹಲಸಂಗಿ ಚೆನ್ನಮಲ್ಲಪ್ಪ)
ಕೆ. ಎಸ್. ನಿಸಾರ್ ಅಹಮದ್
ಸು. ರಂ. ಎಕ್ಕುಂಡಿ
ಎಸ್. ವಿ. ಪರಮೇಶ್ವರ ಭಟ್ಟ
ಕಾವ್ಯಾನಂದ (ಸಿದ್ದಯ್ಯ ಪುರಾಣಿಕ)
ಕಡೆಂಗೋಡ್ಲು ಶಂಕರಭಟ್ಟ
ವಿ. ಸೀ. (ವಿ. ಸೀತಾರಾಮಯ್ಯ)
ಡಿ. ಎಸ್. ಕರ್ಕಿ
ಬಿ. ಎ. ಸನದಿ
ಚಂದ್ರಶೇಖರ ಕಂಬಾರ
ಸವಿತಾ ನಾಗಭೂಷಣ
ಸುಕನ್ಯಾ ಮಾರುತಿ
ಸಿದ್ಧಲಿಂಗಯ್ಯ
ಎಚ್. ಎಸ್. ವೆಂಕಟೇಶಮೂರ್ತಿ
ಸುಮತೀಂದ್ರ ನಾಡಿಗ
ಎಚ್. ಡುಂಡಿರಾಜ್
ಪಿ. ಲಂಕೇಶ್
ಕೆ. ಸಿ. ಶಿವಪ್ಪ
ಜಯಂತ ಕಾಯ್ಕಿಣಿ
ದೊಡ್ಡರಂಗೇಗೌಡ
ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ
ಎಸ್. ಮಾಲತಿ
ಜಿ. ಪಿ. ಬಸವರಾಜು
ಚಿಂತಾಮಣಿ ಕೊಡ್ಲೆಕೆರೆ
ಪ್ರತಿಭಾ ನಂದಕುಮಾರ್
ಕಯ್ಯಾರ ಕಿಞ್ಞಣ್ಣ ರೈ
ದಿನಕರ ದೇಸಾಯಿ
ಪುಟಗಳು: 96
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !