“ಕನ್ನಡ ನಾಡು ಕಂಡ ಮಹತ್ವದ ಚಿಂತಕರಲ್ಲಿ ತೇಜಸ್ವಿ ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಅನ್ನುವಂತೆ ತೇಜಸ್ವಿ ಅವರು ತೆರೆದುಕೊಳ್ಳದ, ಮಾತನಾಡದ ವಿಷಯಗಳೇ ಇಲ್ಲ ಅನ್ನಬಹುದು. ಅವರ ಅನೇಕ ಲೇಖನ, ಭಾಷಣ ಮತ್ತು ಸಂದರ್ಶನಗಳನ್ನು ಕಲೆಹಾಕಿ ಹೊರತರಲಾದ ಹೊತ್ತಗೆ ಇದಾಗಿದೆ. ಕನ್ನಡದ ನೆಲ, ಜಲ, ಭಾಷೆ, ಆರ್ಥಿಕತೆ, ಶಿಕ್ಷಣ, ರಾಜಕೀಯ, ಚಳವಳಿ, ಧಾರ್ಮಿಕತೆ, ಪರಿಸರ ಹೀಗೆ ಎಲ್ಲದರ ಬಗ್ಗೆ ತೇಜಸ್ವಿ ಅವರು ಬರೆದ ಅಪರೂಪದ ಲೇಖನಗಳು ಈ ಹೊತ್ತಗೆಯಲ್ಲಿವೆ. ತೇಜಸ್ವಿಯವರ ಸಾರ್ವಜನಿಕ ಬದುಕಿನ ಬಗ್ಗೆ ಹಲವು ಒಳನೋಟಗಳನ್ನು ಹೊಂದಿರುವ ಈ ಪುಸ್ತಕ ಬಹಳ ಇಂದಿಗೂ ಹೆಚ್ಚು ಮಾರಾಟವಾಗುವ ಕೃತಿಗಳಲ್ಲೊಂದಾಗಿದೆ.
ಪುಟಗಳು: 780
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !