ಮಳೆಗಾಲದಲ್ಲಿ ಮಂಗಳೂರು ರುದ್ರ ರಮಣೀಯವಾಗಿ ಇರುತ್ತದೆ.
ಅದೇ ಕಾರಣಕ್ಕೆ ನನಗೆ ಇಷ್ಟ.
ಮನ್ಸೂನ್ ಮಾರುತಗಳು ಇಲ್ಲಿನ ಸಮುದ್ರವನ್ನು ತಲೆ ಕೆಳಗು ಮಾಡುತ್ತಿರುತ್ತದೆ.
ರಂಪಾಟದ ಮಳೆ ಅಷ್ಟಕ್ಕೆ ಬಿಡುವುದಿಲ್ಲ.
ಪಶ್ಚಿಮ ಘಟ್ಟಕ್ಕೂ, ಹೊಂದಿಕೊಂಡ ನಗರಗಳಿಗೂ ರಪ ರಪ ಅಪ್ಪಳಿಸಿ ಇಡೀ ವರ್ಷದ ಕೊಳೆಯನ್ನು ತೊಳೆಯುತ್ತದೆ.
ಪ್ರತೀ ಜೂನ್ ನಲ್ಲಿ ಮಳೆ ಶುರುವಾದರೆ ಒಂದೆರಡು ವಾರದಲ್ಲಿ ಇಲ್ಲಿನ ಚಿಕ್ಕ ಚಿಕ್ಕ ನದಿಗಳು ತುಂಬಿಕೊಳ್ಳುತ್ತವೆ.
ಕೆಸರು, ಮಣ್ಣು ನೀರಿನಲ್ಲಿ ಕರಡಿಕೊಂಡು ಬರುವ ನದಿಯ ರಬಸ ನೀವು ನೋಡಬೇಕು.
ಹೊಳೆಯ ಪಕ್ಕದಲ್ಲಿ ಉದ್ದಕ್ಕೂ ತೆಂಗಿನ ಮರಗಳು. ಗಾಳಿ ಮಳೆಗೆ ಓಲಾಡಿ, ತೂರಾಡಿ ಅಸ್ತಿತ್ವಕ್ಕೆ ಹೋರಾಟ.
ಸೋಲುವ ಮಾರುತ ಒಂದಿಷ್ಟು ತೆಂಗಿನ ಕಾಯಿ, ಹೆಡೆಪೆಂಟೆ ಉದುರಿಸಿ, ನದಿಯ ಮೂಲಕ ಹಾಯಿ ಬಿಡುತ್ತವೆ.
ತೇಲಿ ಬರುವ ತೆಂಗಿನಕಾಯಿ ಹಿಡಿಯುವುದೂ ಒಂದು ಸಾಹಸ.
ಅಂಥ ದೃಶ್ಯಗಳನ್ನು
ನೋಡಲು ಒಂದು ಸುರಕ್ಷಿತ ವಾಹನ ಇರಬೇಕು.
ಈ ಬಿರುಸಿನ ಮಳೆಗೆ ಇಲ್ಲಿ ಬೈಕ್ ತಡೆಯುವುದಿಲ್ಲ. ಒಮ್ಮೆ
ಮಳೆ ಬಂದರೆ ಹನಿ, ಅದ್ಯಾವಪರಿಯಲ್ಲಿ ಬರುತ್ತವೆ ಎಂದರೆ, ಬೈಕ್ ನಿಲ್ಲಿಸಿ ರೇನ್ ಕೋಟ್ ಹಾಕುವಷ್ಟರಲ್ಲಿ ಸವಾರ ಸಂಪೂರ್ಣ ಚಂಡಿ..!
ತೊಯ್ದ ಬಟ್ಟೆಗಳು ದೇಹಕ್ಕೆ ಅಂಟುತ್ತವೆ. ಕಚೇರಿಗೆ ಹೋಗುವ
ಮಳೆಗಾಲವನ್ನು ಎಂಜಾಯ್ ಮಾಡಬೇಕು ಅಂದರೆ ಮಳಗಳೂರಲ್ಲಿ ಒಂದು ಕಾರ್ ಇರಬೇಕು. ಅದರಲ್ಲೂ ಮಕ್ಕಳು ಹುಟ್ಟಿದ ಬಳಿಕ, ಈ ಬೈಕ್ ಗಳು, ಹೊರಲಾರದೆ ಕತ್ತೆಗಳ ತರ ಅರಚಲು ಶುರು ರೂಪದಲ್ಲಿ...
ಆಗ ಒಂದು ಕಾರಿನ ಅನಿವಾರ್ಯತೆ ಕಾಣುತ್ತದೆ.
ಸುಶುಮ್ನ ರಾವ್ ಉದ್ದವ ರಾವ್ ವ್ಯಾಸಮುದ್ರ..
ಎಸ್ ಯು ವಿ ಕಾರ್ ಖರೀದಿಗೆ ಇಳಿಯುವುದೂ ಇದೇ ಕಾರಣಕ್ಕೆ..
ಇನ್ನಷ್ಟು ಕುತೂಹಲಕರ ವಿಷಯ..
SUV
ಕಾದಂಬರಿ ರೂಪದಲ್ಲಿದೆ....