ಕನ್ನಡ ಇಬುಕ್ಸ್ ಹಾಗೂ ಆಡಿಯೋ ಬುಕ್ಸ್ ಓದಿ, ಕೇಳಿ ನಿಮ್ಮ ಮೊಬೈಲಿನಲ್ಲೇ!

ನ್ಯಾಸ

ನ್ಯಾಸ

e-book
ಪಬ್ಲಿಶರ್
ಹರೀಶ ಹಾಗಲವಾಡಿ
ಮಾಮೂಲು ಬೆಲೆ
Rs. 149.00
ಸೇಲ್ ಬೆಲೆ
Rs. 149.00
ಬಿಡಿ ಬೆಲೆ
ಇಶ್ಟಕ್ಕೆ 

GET FREE SAMPLE

’ನ್ಯಾಸ’ ದ ಕತೆ ಬಂಧಮುಕ್ತರಾದೆವೆಂದುಕೊಂಡವರು ಅದರೊಳಗೇ ಸೆರೆಯಾದವರ ಕತೆ. ಬಿಟ್ಟೆನೆಂದುಕೊಂಡವರು ಅದಕ್ಕೇ ಅಂಟಿಕೊಂಡವರ ಕತೆ. ಸ್ಥೂಲವಾಗಿ ಹೇಳಬೇಕೆಂದರೆ, ಅದು, ಸಂಸಾರ ತೊರೆದು ಸೇವೆ, ಸಾಧನೆ ಎಂಬ ಭ್ರಮೆಯಲ್ಲಿ ಸ್ವ ಇಚ್ಛೆಯಿಂದ ಸನ್ಯಾಸ ಸ್ವೀಕರಿಸಿ ಮಠ ಎಂದೋ ಆಶ್ರಮವೆಂದೋ ಒಳ ಹೊಕ್ಕಿದವರ ಬದುಕಿನ ಆಂತರಿಕ ಸಂಘರ್ಷದ ಕತೆ. ಅವರ ಬದುಕಿನ ವಿವಿಧ ಮಗ್ಗುಲುಗಳನ್ನು ವಿಶ್ಲೇಷಿಸುವ ಕತೆ. ಆದರೆ ಅದು ಅದಷ್ಟೇ ಅಲ್ಲ.

ಸಾಧನೆ, ಸನ್ಯಾಸ, ಸೇವೆ, ಆಧ್ಯಾತ್ಮ, ಸತ್ಯಾನ್ವೇಷಣೆ, ಎಂಬಿತ್ಯಾದಿ ಪದಗಳೆಲ್ಲ ತೂಕ ಕಳೆದುಕೊಂಡು, ಸವಕಲಾಗಿ, ನಿಸ್ತೇಜಗೊಂಡು, ನಗೆಪಾಟಲಿಗೀಡಾಗುತ್ತಿರುವ ಹೊತ್ತಿನಲ್ಲಿ ಆ ಪದಗಳ ಬೇರಿಗಿಳಿದು ಅರ್ಥ ಅನರ್ಥವಾದದ್ದು ಎಲ್ಲಿ ಎಂದು ಹುಡುಕುವ ಪ್ರಯತ್ನ ಮಾಡುತ್ತದೆ ಈ ಕಾದಂಬರಿ. ಕಾದಂಬರಿಯೇ ಒಂದು ಕನ್ನಡಿಯಂತೆ ಕೆಲಸ ಮಾಡುತ್ತದೆ, ಅರ್ಥ-ಅನರ್ಥಗಳ ನಡುವಿನ ಗೆರೆ ಮಸುಕಾದ್ದು ಎಲ್ಲಿ ಹೇಗೆ ಎಂಬ ಚಿತ್ರಣವನ್ನು ತಾನು ಪ್ರತಿಫಲಿಸುತ್ತದೆ. ಓದುಗರ ತಲೆಯೊಳಗೆ ಗುಂಗಿ ಹುಳ ಮೊಟ್ಟೆಯಿಡುವುದಕ್ಕೆ ಅಷ್ಟು ಸಾಕು!

- ವ್ಯಕ್ತ-ಅವ್ಯಕ್ತ ವಿಮರ್ಶೆ ( https://avyaktalakshanaa.blogspot.com/2015/10/blog-post.html)

 

ಪುಟಗಳು: 392

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !