ಕನ್ನಡ ಇಬುಕ್ಸ್ ಹಾಗೂ ಆಡಿಯೋ ಬುಕ್ಸ್ ಓದಿ, ಕೇಳಿ ನಿಮ್ಮ ಮೊಬೈಲಿನಲ್ಲೇ!

108 ಹಳೆ ಆಚಾರ ಹೊಸ ವಿಚಾರ

108 ಹಳೆ ಆಚಾರ ಹೊಸ ವಿಚಾರ

e-book
ಪಬ್ಲಿಶರ್
ಮಹಾಬಲ ಸೀತಾಳಭಾವಿ
ಮಾಮೂಲು ಬೆಲೆ
Rs. 99.00
ಸೇಲ್ ಬೆಲೆ
Rs. 99.00
ಬಿಡಿ ಬೆಲೆ
ಇಶ್ಟಕ್ಕೆ 

GET FREE SAMPLE

ನಂಬಿಕೆ ಯಾವುದು ಮೂಢನಂಬಿಕೆ ಯಾವುದು? ವಿಜ್ಞಾನ ಯಾವುದು ತರ್ಕ ಯಾವುದು? ಅಜ್ಜಿ ಕತೆ ಯಾವುದು ಲಾಜಿಕ್ಯಾವುದು?

ನಂಬಿಕೆಯಲ್ಲಿ ಅಪಾಯವಿಲ್ಲ, ಆದರೆ ಮೂಢನಂಬಿಕೆಯಲ್ಲಿ ಅಪಾಯವಿದೆ. ವಿಜ್ಞಾನ ಯಾವುದೇ ಸಂಗತಿಯನ್ನು ಸಾಕ್ಷ್ಯಸಮೇತ ಸಾಬೀತು ಮಾಡಿ ತೋರಿಸುತ್ತದೆ, ಆದರೆ ತರ್ಕ ನಿಮ್ಮದೇ ಅನುಭವ ಪ್ರಮಾಣವನ್ನು ನಿಮ್ಮ ಮುಂದಿಟ್ಟು ಅದನ್ನು ಸಾಬೀತು ಪಡಿಸುತ್ತದೆ.

ಈ ನಂಬಿಕೆ ಮತ್ತು ಮೂಢನಂಬಿಕೆಗಳ ಮಧ್ಯೆ ಆಗಾಗ ಬಲಿಪಶು ಆಗುವುದು ನಮ್ಮ ಸಂಪ್ರದಾಯ ಹಾಗೂ ಆಚರಣೆಗಳು; ಅವು ಒಳ್ಳೆಯವೇ ಆಗಿದ್ದರೂ ಮತ್ತು ಅವುಗಳಿಂದ ಯಾರಿಗೂ ಹಾನಿಯಿಲ್ಲದಿದ್ದರೂ.

ದೇವಸ್ಥಾನಕ್ಕೆ ಹೋದಾಗ ಗಂಟೆ ಹೊಡೆಯುತ್ತೀರಿ. ಯಾಕೆ ಹೊಡೆಯುತ್ತೀರಿ? ಗರ್ಭಗುಡಿಯ ಸುತ್ತ ಪ್ರದಕ್ಷಿಣೆ ಮಾಡುತ್ತೀರಿ. ಯಾಕೆ ಮಾಡುತ್ತೀರಿ? ಹಿರಿಯರಿಗೆ ನಮಸ್ಕಾರ ಮಾಡಿದರೆ ಅವರು ತಲೆ ಮುಟ್ಟಿ ಆಶೀರ್ವಾದ ಯಾಕೆ ಮಾಡುತ್ತಾರೆ? ಮುಸ್ಸಂಜೆಯ ಹೊತ್ತು ಕಸ ಗುಡಿಸಿದರೆ ಅಜ್ಜಿ ಬೈಯುತ್ತಾರೆ. ಏನು ಕಾರಣ? ಮನೆ ಬಾಗಿಲು ಪೂರ್ವಕ್ಕೆ ಅಥವಾ ಉತ್ತರಕ್ಕೇ ಇರಬೇಕೆಂದು ಪುರೋಹಿತರು ಹೇಳೋದೇಕೆ? ದೇವರ ಪೂಜೆ ನಂತರ ತೀರ್ಥ ಕುಡಿಯುವುದೇಕೆ? ಮನೆ ಮುಂದೆ ತುಳಸಿ ಗಿಡ ಇರಬೇಕಂತೆ. ಏನು ಅದರ ಹಿನ್ನೆಲೆ? ಇವೆಲ್ಲ ಮೂಢ ನಂಬಿಕೆಗಳು ಅಂದುಕೊಂಡಿರಾ? ಖಂಡಿತ ಅಲ್ಲ. ಇವುಗಳ ಹಿಂದೆ ವೈಜ್ಞಾನಿಕ ಅಥವಾ ತಾರ್ಕಿಕ ಕಾರಣಗಳಿವೆ. ನಮ್ಮೆಲ್ಲಾ ಆಚಾರ ಹಾಗೂ ನಂಬಿಕೆಯ ಹಿಂದೆಯೂ ಒಂದೊಂದು ಲಾಜಿಕ್ಇದೆ. ಕೆಲವು ಅಚ್ಚರಿ ಹುಟ್ಟಿಸುವಂತಿವೆ, ಇನ್ನು ಕೆಲವು ನಿಗೂಢವಾಗಿವೆ. ಧಾರ್ಮಿಕ ನಂಬಿಕೆಗಳ ಹಿಂದಿನ ಲಾಜಿಕ್ಗಳನ್ನು ಹುಡುಕಿ ತಿಳಿಸುವುದೇ ಈ ಕೃತಿಯ ಉದ್ದೇಶ.

 

ಪುಟಗಳು: 88

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !