ಬರಹಗಾರರು: ಗುರುಪಾದ ಬೇಲೂರ್
2D ಗೊತ್ತು, 3D ಗೊತ್ತು, ಇದೇನಿದು ಫೋರ್ಡಿ? ಮೂರು ಆಯಾಮಗಳ ಜಗತ್ತಿನಲ್ಲಿ ವಾಸಿಸುತ್ತಿರುವ ನಾವು ಈ ಚೌಕಟ್ಟನ್ನು ಮೀರಿ ನಾಲ್ಕನೇ ಆಯಾಮಕ್ಕೆ ಹೋದರೆ ಹೇಗಿದ್ದೀತು ಎನ್ನುವ ಕಲ್ಪನೆಯೇ ಈ ಪುಸ್ತಕದ ಕಥಾವಸ್ತು. ಯಾವುದದು ನಾಲ್ಕನೆಯ ಆಯಾಮ? ಅದು ಬೇರೆ ಲೋಕವೇ? ಜಗತ್ತಿನ ಒಳಗಿನ ಜಗತ್ತೇ? ಫೋರ್ಡಿ ಜಗತ್ತಿನ ಪ್ರಾಣಿಗಳು ಇಂದಿನ ತ್ರಿಡಿ ಜಗತ್ತಿನ ಪ್ರಾಣಿಗಳಿಗಿಂತ ಹೆಚ್ಚು ಶಕ್ತರೂ, ಅತೀಮಾನುಷರೂ ಆಗಿರುತ್ತಾರೆಯೇ?
ಸೈನ್ಸ್ ಫಿಕ್ಷನ್ ಪ್ರಕಾರದಲ್ಲಿ ಕನ್ನಡದಲ್ಲಿ ಬಂದ ಒಳ್ಳೆಯ ಕಾದಂಬರಿಗಳಲ್ಲಿ ಒಂದಾಗಿರುವ ಇದನ್ನು ನೀರಾವರಿ ಇಲಾಖೆಯ ಹಿರಿಯ ಅಧಿಕಾರಿ ಗುರುಪಾದ ಬೇಲೂರು ಅವರು ಬರೆದಿದ್ದಾರೆ. ಅದರ ಕುರಿತ ಒಂದು ಪರಿಚಯ ಇಲ್ಲಿದೆ: