"ಬದುಕಿನ ಸಾಮಾನ್ಯ ಕ್ಷಣಭಂಗುರ ಗಳಿಗೆಗಳನ್ನು, ಅವುಗಳ ಸಂಪೂರ್ಣ ಸಹಜ ಶರೀರದೊಂದಿಗೆ ಹಿಡಿದಿಟ್ಟು, ಅವುಗಳ ಮೂಲಕ ಅಪರೂಪದ ಅನುಭವದ ಹೊಳಹುಗಳನ್ನು ಕೊಡುವ ಜಯಂತರ ಗದ್ಯ ಕನ್ನಡದ ಶ್ರೀಮಂತ ಗದ್ಯ ಪರಂಪರೆಯಲ್ಲಿ ಶ್ರೇಷ್ಠ ಸ್ಥಾನವೊಂದನ್ನು ಪಡೆದುಕೊಂಡಿದೆ. ಅವಸರಪಟ್ಟರೆ ಕಾಣದೆ ಇರುವ ಹಲವಾರು ಆಪ್ತ ಖಾಸಗಿ ಲೋಕಗಳಿಗೆ ಚಹರೆ ಕೊಡುವ ಕಸುವು ಅವರ ಗದ್ಯಕ್ಕಿದೆ."-ರಾಜೇಂದ್ರ ಚೆನ್ನಿ ಮನುಷ್ಯ ಲೋಕವನ್ನು ಅಂತಃಕರಣದಿಂದ ಕಾಣುವ ಕಾಯ್ಕಿಣಿ ಅವರ ಗದ್ಯದ ಹುಟ್ಟು ವಿಶಿಷ್ಟವಾದ ಲೋಕಗ್ರಹಿಕೆಯಲ್ಲಿದೆ. ಕನ್ನಡದ ವಿಶಿಷ್ಟ ಬರಹಗಾರ ಕಾಯ್ಕಿಣಿ ಅವರ ಲೇಖನಗಳ ಸಂಗ್ರಹವಿದು.
ಪುಟಗಳು: 232
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !