Click here to Download MyLang App

ಡಾ. ಕೆ. ಶಿವರಾಮ ಕಾರಂತ,  ಗೊಂಡಾರಣ್ಯ,  shivram karantha , shivram karanth, shivram karanth,  shivram karant,  shivarm karanth,  shivarama karanta,  shivaram karanth,  Gondaranya,  Dr. K. Shivarama Karantha,

ಗೊಂಡಾರಣ್ಯ (ಇಬುಕ್)

e-book

ಪಬ್ಲಿಶರ್
ಡಾ|| ಕೆ. ಶಿವರಾಮ ಕಾರಂತ
ಮಾಮೂಲು ಬೆಲೆ
Rs. 110.00
ಸೇಲ್ ಬೆಲೆ
Rs. 110.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಬರಹಗಾರ: ಡಾ|| ಕೆ. ಶಿವರಾಮ ಕಾರಂತ   

ಇದು ಇಂದಿನ ಕಾಲಕ್ಕೆ ಅನ್ವಯಿಸುವ ಒಂದು ರಾಜಕೀಯ ಕಾದಂಬರಿ. ಕಾದಂಬರಿ ಸ್ವಾತಂತ್ರ್ಯೋದಯದಿಂದ ತೊಡಗಿ ಸುಮಾರು ಹದಿನೈದು ವರ್ಷಗಳ ವ್ಯಾಪ್ತಿಯುಳ್ಳದು. ವ್ಯಕ್ತಿಗಳು ನನ್ನ ಗುರಿಯಾಗಿಲ್ಲ; ರಾಜಕೀಯದಲ್ಲಿ ನಲಿದಾಡುವ ಜನಗಳ ಅಯೋಗ್ಯತೆ, ಕುಂದುಕೊರತೆ, ಅಪ್ರಾಮಾಣಿಕತೆ ಮೊದಲಾದ ಗುಣಗಳೇ ಇಲ್ಲಿ ಟೀಕೆಗೆ ಗುರಿಯಾಗುವುದರಿಂದ --- ಗೊಂಡಾರಣ್ಯವೆಂಬ ಕಾಲ್ಪನಿಕ ಸಂಸ್ಥಾನ ವನ್ನು ನಿರ್ಮಿಸಿಕೊಂಡು, ಅದರ ರಾಜಕೀಯ ಚಿತ್ರಿಸಲು ತೊಡಗಿದ್ದೇನೆ. ಇಲ್ಲಿ ಕಾಣುವ ಜನರು, ಮುಖಂಡರು, ನಡವಳಿಕೆ, ಪರಿಸ್ಥಿತಿಗಳೆಲ್ಲವೂ ನಮ್ಮ ಭಾರತ ದಲ್ಲಿ ಎಲ್ಲೆಂದರಲ್ಲಿ ಕಾಣಬಹುದಾದುವೇ.

ಸ್ವಾತಂತ್ರ್ಯವೇನೋ ಬಂದಿದೆ, ಆದರೆ ಪ್ರಜಾಪ್ರಭುತ್ವದ ದಾರಿಯಲ್ಲಿ ದೇಶವನ್ನು ನಡೆಯಿಸಿಕೊಂಡು ಹೋಗಬಲ್ಲ ನೀತಿವಂತರಿಗೆ, ಸತ್ಯವಂತರಿಗೆ ತೀರ ಅಭಾವ ಬಂದಿದೆ. ಅಂಥವರಿದ್ದರೂ ಗುರುತಿಸಲಾರದೆಯೇ, ತಾತ್ಕಾಲಿಕ ಲಾಭ, ರಾಗ, ದ್ವೇಷಗಳಿಗೆ ಮನಕೊಡುವ ಮತದಾರರ ಸಮುದಾಯ ಅದಕ್ಕೆ ತೆರುತ್ತಿರುವ ದಂಡವನ್ನು ಇಲ್ಲಿ ತೋರಿಸಿದ್ದಾಗಿದೆ.

ಇಲ್ಲಿನ ರಾಜಕೀಯ ಪಕ್ಷಗಳು ಕಾಲ್ಪನಿಕವಾದುವೇ ಆದರೂ--ಅಲ್ಲಿನ ಪ್ರವೃತ್ತಿಗಳೂ ಸ್ಪಷ್ಟವಾಗಿ ಕಾಣುತ್ತಿರುವಂಥವೇ. ಅವುಗಳು ನಮಗೆ ತೋರಿಸಿ ಕೊಡುವ ಮುಖ್ಯ ಸಮಸ್ಯೆ--ಪ್ರಜಾಪ್ರಭುತ್ವದಲ್ಲಿ--ಸುಲಭ ಯಶಸ್ಸಿಗಾಗಿ ಜನರೋ, ಪಂಗಡಗಳೋ ಹಿಡಿಯುವ ವಾಮ ಮಾರ್ಗ, ಅಸತ್ಯ ಮಾರ್ಗ, ಹಿಂಸಾ ಮಾರ್ಗಗಳು. ಜನರನ್ನು ನ್ಯಾಯವಾದ ದಾರಿಯಿಂದ ಒಲಿಸಲಾರದವರಿಗೆ ಈ ದಾರಿಗಳು ಸುಲಭ, ಶೀಘ್ರ ಯಶಸ್ವಿಯೆನ್ನಿಸುತ್ತವೆ. ಅವುಗಳ ಪರಿಣಾಮವೇನು? ಹಿಂಸೆ, ಅಸತ್ಯ, ಅನ್ಯಾಯಗಳೆಲ್ಲ ತಮ್ಮ ಚಾಲಾಕಿಯಿಂದ ಇತರರಿಗೆ ಕಾಣಿಸ ಲಾರವು--ಎಂದು ಆ ದಾರಿಯಲ್ಲಿ ಹೋಗುವವರು, ತಮ್ಮ ವೈರಿಗಳೂ ಅದೇ ದಾರಿ ಹಿಡಿದರೆ ಫಲವೇನಾದೀತೆಂದು ಎಣಿಸಲಾರರು. ಇಲ್ಲಿನ ಕಥಾ ನಾಯಕಿ ಕಾಂಚನಮಾಲೆ ಅದನ್ನೂ ತೋರಿಸಿಕೊಡುತ್ತಾಳೆ.

ಅಂಥ ನೀಚ ಮಾರ್ಗಗಳ ಪರಿಣಾಮವನ್ನು ಒಟ್ಟು ಸಮಾಜ ಅನುಭವಿಸಬೇಕಾಗುತ್ತದೆ.

ಇಂದು ಸ್ವಾತಂತ್ರ್ಯ ದೊರಕಿರುವಾಗ--ನಮಗೆ ಬೆಳೆಯಲು, ಜನರ ಒಳಿತಿಗಾಗಿ ದುಡಿಯಲು ಪರಮಾವಧಿಯ ಅವಕಾಶವಿದೆ! ಅವಕಾಶವಿದ್ದರೇನು? ಸಾರ್ವಜನಿಕ ಜೀವನಕ್ಕೆ ಧುಮುಕುವ ಜನರಲ್ಲಿ--ಆಕಾಂಕ್ಷೆ, ಬುದ್ಧಿ, ಪ್ರಾಮಾಣಿಕತೆ ಗಳೆಲ್ಲ ಬೇಕು. ಇವತ್ತು ಜನಸೇವೆ ಮಾಡುತ್ತೇನೆ--ಅನ್ನುವವರ ಮನಸ್ಸಿನಲ್ಲಿ 'ಜನತೆ ನನ್ನ ಸೇವೆಗಾಗಿಯೇ ಇದೆ' ಎಂಬ ಪ್ರತ್ಯಕ್ಷ ಹೆಮ್ಮೆಯೇ ತುಂಬಿಕೊಂಡಿದೆ. ನಮ್ಮಲ್ಲಿ ಅತಿ ಉತ್ತಮರೆನ್ನುವವರಿಗೂ ಸಾಮ್ರಾಟರ ಪಿತ್ಥ ಅಡರಿಕೊಂಡಿದೆ.

ನಮ್ಮ ದೇಶದ ಸಮಸ್ಯೆಯನ್ನು ನಾವು ಇನ್ನೂ ಚೆನ್ನಾಗಿ ಅರಿತಂತಿಲ್ಲ; ಆದರೂ ನಾವು ಲೋಕವನ್ನು ಅಶಾಂತಿಯಿಂದ ಉಳಿಸಲು ಹೊರಟಿದ್ದೇವೆ. ಲೋಕ ಇಬ್ಬಣವಾಗಿ ಕಾದಾಡಲು ನಿಂತಂತಿದೆ... ನಾವು ನಡುವೆ ನಿಂತು--'ಹಾಗಲ್ಲ; ಹೀಗೆ' ಎಂದು ಉಪದೇಶವನ್ನೂ ಮಾಡುತ್ತಿದ್ದೇವೆ! ತುಂಬ ದೊಡ್ಡ ಕೆಲಸ. ಆ ಕೆಲಸ ಯಾವ ದೇಶದಿಂದ ಸಾಧ್ಯ...? ತನ್ನ ನಡತೆಯಲ್ಲಿ, ಆಳುವಿಕೆಯಲ್ಲಿ ನಿರ್ದಿಷ್ಟವಾಗಿ ನಡೆಯಬಲ್ಲ ಜನಗಳಿಂದ ಸಾಧ್ಯ. ಅಂತಹ ದೇಶಗಳೂ ಇಂದು ಅನುಮಾನಿಸಿ, ಬೆದರಿ, ತತ್ತರಿಸಿ ನಿಂತಿವೆ! ಕೊಳಚೆಯ ರಾಶಿಯ ಮೇಲೆ ನಿಂತ ನಾವು--ಏಸ್ಯಕ್ಕೆ ನಾಯಕರಾಗಿ, ಲೋಕ ಶಾಂತಿಯನ್ನು ಉಳಿಸುವ ಮಾತೆಂದರೆ ಆತ್ಮವಂಚನೆ ಯಲ್ಲವೆ?

ಇದಕ್ಕೆ ಕಾರಣ--ನಮ್ಮ ಸಂಸಾರದಲ್ಲೇ ಠಕ್ಕು ತುಂಬಿದೆ. ಮನೆಯಲ್ಲೇ ವಂಚನೆ ನಿತ್ಯ ಜೀವನದ ಉಸಿರಾಗಿದೆ... ಹೊರಗಿನ ಜಗತ್ತನ್ನು ಮಾತಿಂದ ಮುಗ್ಧಗೊಳಿಸುವ ಚಮತ್ಕೃತಿ ಸಾಧಿಸೀತೆಂದು ತಿಳಿಯುತ್ತೇವೆ ನಾವು.

ಶಾಂತಿ-ಅಹಿಂಸೆ-ಸತ್ಯಗಳು ನಮ್ಮಲ್ಲಿ ಮೊದಲು ಬರಲಿ; ನಮ್ಮ ನಾಡಿನ ಸರಕಾರ ಆ ದಾರಿಯಲ್ಲಿ ನಡೆಯಲಿ... ಆಗ ನಾವು ಲೋಕಕ್ಕೆ ಸಲ್ಲಿಸುವ ಕಾಣಿಕೆ ಯನ್ನು ಸಲ್ಲಿಸಲು ಶಕ್ತರಾದೇವು.

 

-ಶಿವರಾಮ ಕಾರಂತ

 

ಪುಟಗಳು: 248

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)