ಲೇಖಕರು:
ಸಂಪಾದಕ: ಡಾ।। ನಾ. ಸೋಮೇಶ್ವರ
ಲೇಖಕ: ಟಿ. ಎಸ್. ಗೋಪಾಲ್
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಗಿರೀಶ ಕಾರ್ನಾಡರ ಮಾತೃಭಾಷೆ ಕೊಂಕಣಿ. ಅವರು ಒಲವು ತೋರಿ ಕಲಿತದ್ದು ಇಂಗ್ಲಿಷ್ ಸಾಹಿತ್ಯ. ಆದರೆ ನಾಟಕ ಬರೆದು ಖ್ಯಾತರಾದದ್ದು ಕನ್ನಡದಲ್ಲಿ. ಕನ್ನಡ ಕಲಿತ ಭಾಷೆ. ಅಲ್ಪಪ್ರಾಣ, ಮಹಾಪ್ರಾಣ, ಹ್ರಸ್ವ, ದೀರ್ಘಗಳ ಸ್ಪಷ್ಟ ಪರಿಚಯವಿಲ್ಲದೇ ತೊಳಲಿದ ಗಿರೀಶರು ನಂತರ ಕನ್ನಡ ಭಾಷೆಯಲ್ಲಿ ಅದರಲ್ಲೂ ಉತ್ತರ ಕರ್ನಾಟಕದ ಜವಾರಿ ಕನ್ನಡವನ್ನು ಅರಗಿಸಿಕೊಂಡು ತಲೆದಂಡದಂತಹ ನಾಟಕವನ್ನು ಬರೆದದ್ದು ಒಂದು ಪವಾಡ ಸದೃಶವಾಗಿದೆ. ಗಿರೀಶರು ತಮ್ಮ 23ನೆಯ ವಯಸ್ಸಿನಲ್ಲಿ "ಯಯಾತಿ" ನಾಟಕವನ್ನು ಬರೆದರು. ಚಕ್ರವರ್ತಿ ರಾಜಗೋಪಾಲಾಚಾರಿಯವರು ಇಂಗ್ಲಿಷಿನಲ್ಲಿ ಬರೆದ ಮಹಾಭಾರತ ಪುಸ್ತಕವನ್ನು (1951) ಓದಿದ ಗಿರೀಶರು, ಯಯಾತಿ ಕಥಾ ಭಾಗದಲ್ಲಿ ಎಷ್ಟು ತಲ್ಲೀನರಾದರೆಂದರೆ ಕಥಾಪಾತ್ರಗಳು ಬಂದು ಗಿರೀಶರ ಕಿವಿಯಲ್ಲಿ ತಮ್ಮ ಸಂಭಾಷಣೆಯನ್ನು ಉಸುರಲಾರಂಭಿಸಿದವಂತೆ. ಅದನ್ನು ಬರೆದದ್ದಷ್ಟೇ ತಮ್ಮ ಕೆಲಸ ಎನ್ನುತ್ತಾರೆ ಗಿರೀಶರು. ಜಾನಪದ, ಇತಿಹಾಸ, ಪುರಾಣ ಕಥೆಗಳನ್ನು ಸಮರ್ಥವಾಗಿ ಬಳಸಿಕೊಂಡು ಸಮಕಾಲೀನ ಬದುಕು, ಸಮಸ್ಯೆಗಳನ್ನು ವಿಶ್ಲೇಷಿಸುವ ತಂತ್ರವು ಗಿರೀಶರ ನಾಟಕಗಳ ಯಶಸ್ಸಿಗೆ ಪ್ರಮುಖ ಕಾರಣವಾಗಿವೆ. 14 ನಾಟಕಗಳನ್ನು ಬರೆದು, 65ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ, 10ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿ ಜ್ಞಾನಪೀಠ ಪ್ರಶಸ್ತಿ ಹಾಗೂ ಪದ್ಮಭೂಷಣ ಪ್ರಶಸ್ತಿಗಳನ್ನು ಪಡೆದದ್ದು ನಿಜಕ್ಕೂ ಕಡಿಮೆ ಸಾಧನೆ ಏನಲ್ಲ.
ಪುಟಗಳು: 48
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !