ಪ್ರಕಾಶಕರು: ಗಿರಿಮನೆ ಪ್ರಕಾಶನ
Publisher: Girimane Prakashana
ಎಲ್ಲರಿಗೂ ತಮ್ಮ ಮಕ್ಕಳು ಚೆನ್ನಾಗಿ ಕಲಿಯಬೇಕು, ಒಳ್ಳೆಯ ವ್ಯಕ್ತಿಗಳಾಗಬೇಕು, ಒಳ್ಳೆಯ ಮನುಷ್ಯರಾಗಬೇಕು ಅನ್ನುವ ಹಂಬಲ ಇರುತ್ತೆ. ಶಾಲೆ ಎಲ್ಲವನ್ನೂ ಕಲಿಸಿ ಕೊಡಲಿ ಅನ್ನುವ ನಿರೀಕ್ಷೆಯೂ ಇರುತ್ತೆ. ಆದರೆ ಶಾಲೆ ಎಲ್ಲವನ್ನೂ ಕಲಿಸಿಕೊಡಲು ಆಗುವುದಿಲ್ಲ. ಮಕ್ಕಳ ಮನವರಿತು, ಅವರಿಗೆ ಸರಿತಪ್ಪುಗಳ ತಿಳುವಳಿಕೆ, ಒಳ್ಳೆಯ ವ್ಯಕ್ತಿಯಾಗಲು ಬೇಕಿರುವ ಗುಣಗಳ ಕಲಿಸುವಿಕೆ ಮುಂತಾದವನ್ನು ಮಾಡುವುದು ಹೆತ್ತವರ ಕೈಯಲ್ಲೇ ಇದೆ. ಈ ಪುಸ್ತಕ ಅಂತಹ ಎಲ್ಲ ಅಂಶಗಳನ್ನೂ ಒಳಗೊಂಡಿದೆ. ಕೇವಲ ಹೆತ್ತವರಷ್ಟೇ ಓದದೇ ಮಕ್ಕಳು ತಾವೇ ಓದಿ ಅರಿಯಲು ಆಗುವಂತೆ ಹಾಡು, ಕಥೆ, ನೀತಿಕಥೆ, ಪ್ರಶ್ನೋತ್ತರ, ಒಗಟು, ತಮಾಷೆ ಮುಂತಾದ ದಾರಿಯಲ್ಲಿ ಮಕ್ಕಳನ್ನು ಪ್ರಭಾವಿಸುವ ಗುಣ ಈ ಪುಸ್ತಕಕ್ಕಿದೆ. ಇದು ಗಿರಿಮನೆ ಶ್ಯಾಮರಾವ್ ಅವರ ಮಕ್ಕಳ ಮನೋಲೋಕ ಸರಣಿಯಲ್ಲಿ ಮೂಡಿದ ಎರಡನೆಯ ಪುಸ್ತಕ.
ಪುಟಗಳು : 144
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !