ಲೇಖಕರು:
ಸಂಪಾದಕ: ಡಾ।। ನಾ. ಸೋಮೇಶ್ವರ
ಲೇಖಕ: ಎಂ. ಅಬ್ದುಲ್ ರೆಹಮಾನ್ ಪಾಷ
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
“ನಾನು ಸಂತೋಷದಿಂದ ಸಾಯುವೆ. ನಾನು ಯಾವುದೇ ಪಾಠವನ್ನು
ನನ್ನ ಮುಷ್ಟಿಯಲ್ಲಿ ಮುಚ್ಚಿಟ್ಟಿಲ್ಲ. ನಿಮಗೆ ಉಪಯುಕ್ತವಾದ ಎಲ್ಲವನ್ನೂ
ಕೊಟ್ಟಿದ್ದೇನೆ. ನೀವೇ ನಿಮ್ಮ ಬದುಕಿನ ಹಾದಿಯನ್ನು ಕಂಡುಕೊಳ್ಳಿ.”
(೮೦ನೇ ವರ್ಷದಲ್ಲಿ ಮೃತ್ಯುಮುಖನಾಗಿದ್ದಾಗ ಹೇಳಿದ ಕೊನೆಯ
ಮಾತು)
- ಗೌತಮ ಬುದ್ಧ
ಸಿದ್ಧಾರ್ಥ ಗೌತಮ ( ಕ್ರಿ. ಪೂ. ೫೬೩/೪೮೦ - ಕ್ರಿ. ಪೂ. ೪೮೩/೪೦೦)ನನ್ನು ಗೌತಮ ಬುದ್ಧ, ಶಾಕ್ಯಮುನಿ, ಬುದ್ಧ ಎಂಬ ಪರ್ಯಾಯ ನಾಮಗಳಿಂದ ಗುರುತಿಸುವುದುಂಟು. ಅಂದಿನ ಸಮಾಜದಲ್ಲಿ ವೈದಿಕ ಧರ್ಮ ಹಾಗೂ ಜೈನಧರ್ಮಗಳು ಎರಡು ತುತ್ತತುದಿಯಲ್ಲಿದ್ದವು. ವೈದಿಕ ಧರ್ಮವನ್ನು ಸುಖವಾಗಿ ಅನುಸರಿಸಬಹುದಾಗಿದ್ದರೆ, ಜೈನ ಧರ್ಮದಲ್ಲಿ ತೀವ್ರತರ ಕಟ್ಟುಪಾಡುಗಳಿಗೆ ಒಳಗಾಗಿ ಪರಿಪಾಲಿಸುವುದೇ ಕಷ್ಟವಾಗಿತ್ತು. ಈ ಎರಡನ್ನೂ ಕಂಡ ಗೌತಮ ಮಧ್ಯಮ ಮಾರ್ಗವನ್ನು ಅನುಸರಿಸಿದನು. ಮಗಧ ಮತ್ತು ಕೋಶಲ ದೇಶಗಳು ಆತನ ಪ್ರಧಾನ ಕಾರ್ಯಕ್ಷೇತ್ರಗಳಾಗಿದ್ದವು. ಬುದ್ಧ ಮರಣಿಸಿ ೪೦೦ ವರ್ಷಗಳಾದ ಮೇಲೆ ಆತನ ಬೋಧನೆಗಳನ್ನು ಬರಹ ರೂಪಕ್ಕೆ ಇಳಿಸುವ ಪ್ರಯತ್ನಗಳು ನಡೆದವು. ಆದರೆ ಬೌದ್ಧಧರ್ಮವು ‘ಥೇರಾವಾದ’ ಮತ್ತು ‘ಮಹಾಯಾನ’ ಎಂದು ಎರಡು ಶಾಖೆಗಳಾಗಿ ಒಡೆಯಿತು. ೮ನೆಯ ಶತಮಾನದಲ್ಲಿ ಮಹಾಯಾನದಿಂದ ‘ವಜ್ರಯಾನ’ ಎಂಬ ಹೊಸ ಪಂಥ ಹುಟ್ಟಿಕೊಂಡಿತು. ಇದು ಭಾರತ, ನೇಪಾಳ, ಮಂಗೋಲಿಯ ಮತ್ತು ಕಾಲ್ಮೀಕಿಯ (ರಷ್ಯಾದ ಒಂದು ಭಾಗ)ದಲ್ಲಿ ಜನಪ್ರಿಯವಾಗಿ ಇಂದೂ ಅಸ್ತಿತ್ವದಲ್ಲಿದೆ.
ಸಿದ್ಧಾರ್ಥನು ಬೋಧಗಯದಲ್ಲಿ ಬೋಧಿವೃಕ್ಷದ ಕೆಳಗೆ, ಏಳುವಾರಗಳ ಕಾಲ ಧ್ಯಾನಾಸಕ್ತನಾಗಿ ಕುಳಿತಿದ್ದನು. ವೈಶಾಖ ಹುಣ್ಣಿಮೆಯ ದಿನ ಸಿದ್ಧಾರ್ಥನಿಗೆ ಸಂಕಲ್ಪ ಸಿದ್ಧಿಯಾಯಿತು ಎನ್ನಲಾಗಿದೆ. ಸೂರ್ಯೋದಯವಾಗುವುದರೊಳಗೆ ಸಿದ್ಧಾರ್ಥ ‘ನಾಲ್ಕುಜಾವದ ಅನುಭವ’ ಪಡೆದು ಜ್ಞಾನಯೋಗಿಯಾದನು. ಆತನಿಗೆ ‘ಜ್ಞಾನೋದಯ’ವಾಯಿತು. ಜ್ಞಾನೋದಯವಾಗುವುದು ಎಂದರೆ ಏನು? ಆ ನಾಲ್ಕು ಜಾವದಲ್ಲಿ ಗೌತಮನಿಗೆ ನಾಲ್ಕು ಸತ್ಯಗಳು ಗೋಚರಿಸಿದವು. ಅವು ಯಾವುವೆಂದರೆ ಜನ್ಮಾಂತರಗಳ ಅರಿಯುವಿಕೆ, ನಿತ್ಯಾನಿತ್ಯ ವಸ್ತುಗಳ ವಿವೇಕೋದಯ, ಜರಾಮರಣಗಳ ದುಃಖಕ್ಕೆ ಕ್ಷಣಿಕ ವಸ್ತುಗಳ ತೃಷೆಯೇ ಕಾರಣ ಹಾಗೂ ಅಧ್ಯಾತ್ಮ ತತ್ತ್ವದ ಸಾಕ್ಷಾತ್ಕಾರ.
- ಡಾ|| ನಾ. ಸೋಮೇಶ್ಪರ
ಪುಟಗಳು: 48
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !