Click here to Download MyLang App

ವಿಶ್ವ ಕುಂದಾಪುರ,    ಫ್ರಾನ್ಸ್‌ನಲ್ಲಿ ಅಂತರ್ಯುದ್ಧ,  ಕಾರ್ಲ್ ಮಾರ್ಕ್ಸ್,  Vishwa Kundapura,    Karl Marx,  France Nalli Antaryuddha,

ಫ್ರಾನ್ಸ್‌ನಲ್ಲಿ ಅಂತರ್ಯುದ್ಧ (ಮಾರ್ಕ್ಸ್ ೨೦೦ - ಕ್ಯಾಪಿಟಲ್ ೧೫೦ ಮಾಲಿಕೆ) (ಇಬುಕ್)

e-book

ಪಬ್ಲಿಶರ್
ವಿಶ್ವ ಕುಂದಾಪುರ
ಮಾಮೂಲು ಬೆಲೆ
Rs. 80.00
ಸೇಲ್ ಬೆಲೆ
Rs. 80.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಲೇಖಕರು:


ಕಾರ್ಲ್ ಮಾರ್ಕ್ಸ್

ಕನ್ನಡಕ್ಕೆ:  ವಿಶ್ವ ಕುಂದಾಪುರ

 

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ಪ್ಯಾರಿಸ್ಸಿನ ಕಾರ್ಮಿಕರು 1871ರ ಮಾರ್ಚ್ 18ರಂದು ತಮ್ಮ ನಗರವನ್ನು
ಆಳುತ್ತಿದ್ದ ಬಂಡವಾಳಶಾಹಿಗಳನ್ನು ಓಡಿಸಿ, 10 ದಿನಗಳಲ್ಲಿ ಸ್ಥಾಪಿಸಿದ ಕಾರ್ಮಿಕರ
ಆಡಳಿತವನ್ನು “ಪ್ಯಾರಿಸ್ ಕಮ್ಯೂನ್” ಎಂದು ಕರೆದರು. "ಪ್ಯಾರಿಸ್ ಕಮ್ಯೂನ್”
ಜಗತ್ತಿನಲ್ಲೇ ಮೊದಲ ಕಾರ್ಮಿಕರ ಪ್ರಭುತ್ವ ಮತ್ತು ಕ್ರಾಂತಿ ಎಂದೇ ಆದರೂ ಅದು
ಇನ್ನೂ ಹಲವು ರೀತಿಯಲ್ಲಿ ಚಿರಂತನ ಮಹತ್ವವನ್ನು ಪಡೆದಿದೆ. “ಪ್ಯಾರಿಸ್
ಕಮ್ಯೂನ್” ಎಂಬ ಕಾರ್ಮಿಕರ ಕ್ರಾಂತಿಕಾರಿ ಪ್ರಭುತ್ವವು ಕೇವಲ 72 ದಿನಗಳ ಕಾಲ
ಮಾತ್ರ ಬಾಳಿತಾದರೂ, ಅದು ತನ್ನ ಸಾಧನೆ-ವೈಫಲ್ಯಗಳು ಬಲ-ದೌರ್ಬಲ್ಯಗಳು
ಎರಡರಿಂದಾಗಿಯೂ ಆ ನಂತರದ ಕಾರ್ಮಿಕ ಪ್ರಭುತ್ವ ಮತ್ತು ಕ್ರಾಂತಿಗಳಿಗೆ
ಸ್ಫೂರ್ತಿಯ ಚಿಲುಮೆಯೂ ದಾರಿದೀವಿಗೆಯೂ ಆಯಿತು. ಮಾಕ್ರ್ಸ್-ಏಂಗೆಲ್ಸ್
ಕಮ್ಯೂನಿನ ಹೋರಾಟಕ್ಕೆ ಸಕ್ರಿಯವಾದ ಭೌತಿಕ ಮತ್ತು ಸೈದ್ಧಾಂತಿಕ ಬೆಂಬಲ
ಕೊಟ್ಟಿದ್ದಲ್ಲದೆ, ಅದರ ಅನುಭವವನ್ನು ಕ್ರೋಢೀಕರಿಸಿ ಮುಂದಿನ ಕ್ರಾಂತಿಗಳಿಗೆ
ದಾರಿದೀವಿಗೆ ಆಗುವಂತೆ ಸಿದ್ಧಾಂತೀಕರಿಸಿದ ಕೃತಿ ಇದು.

ಪ್ಯಾರಿಸ್ ಕಮ್ಯೂನನ್ನು ಸ್ಥಾಪಿಸಿದ ಪ್ಯಾರಿಸಿನ ಕಾರ್ಮಿಕರು “ಸ್ವರ್ಗಕ್ಕೆ ಲಗ್ಗೆ
ಹಾಕಿದ್ದರು” ಎಂದು ಅವರ ಕೆಚ್ಚನ್ನು ಮಾಕ್ರ್ಸ್ ಮೆಚ್ಚಿಕೊಂಡಿದ್ದಾರೆ. ಈ ಕೃತಿಯ
ಅಧ್ಯಯನ ಮಾಡಿದವರೆಲ್ಲರೂ, ಪ್ರಮುಖವಾಗಿ ಲೆನಿನ್ ಮತ್ತು ಮಾವೋ, ಪ್ಯಾರಿಸ್
ಕಮ್ಯೂನ್‍ನ ಎಲ್ಲಾ ಸಕಾರಾತ್ಮಕ ಹಾಗೂ ನಕಾರಾತ್ಮಕ ಪಾಠಗಳನ್ನು ಸಫಲ
ಕ್ರಾಂತಿಗಳಲ್ಲಿ ತಮ್ಮ ದೇಶ-ಕಾಲಕ್ಕೆ ಅನುಸಾರವಾಗಿ ಅನ್ವಯಿಸಿದರು. ಜಗತ್ತಿನಾದ್ಯಂತ
ಕಾರ್ಮಿಕರ ಪ್ರಭುತ್ವ ಮತ್ತು ಸಮತಾವಾದಿ ಸಮಾಜ ಕಟ್ಟುವ ಕನಸು ಹೊತ್ತ ಎಲ್ಲರಿಗೂ
ಇಂದಿಗೂ ಇದೊಂದು ಸ್ಫೂರ್ತಿದಾಯಕ ಮತ್ತು ದಾರಿದೀಪವಾಗಬಲ್ಲ ಕೃತಿ.

 

ಪುಟಗಳು: 108

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !