ಈ ಕೃತಿಯಲ್ಲಿ ಹಲವು ರೋಗಗಳ ಕುರಿತು, ಬಾಲ್ಯ, ಯೌವನಗಳಲ್ಲಿ ಉಂಟಾಗುವ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗಿದೆ. ಮಹಿಳೆಯರ ಆರೋಗ್ಯ ಮತ್ತು ವ್ಯಾಧಿಗಳು, ಅವುಗಳ ಕಾರಣ, ಪರಿಹಾರವನ್ನು ನೀಡಲಾಗಿದೆ. ಒಟ್ಟಾರೆ ಆರೋಗ್ಯದ ಅರಿವನ್ನು ಮೂಡಿಸುವ ಪ್ರಯತ್ನವನ್ನು ಈ ಪುಸ್ತಕದಲ್ಲಿ ಮಾಡಲಾಗಿದೆ.
ಆಯುರ್ವೇದ ವೈದ್ಯರಾದ ಡಾ. ಅಜಿತ್ ಹರೀಶಿಯವರ ಈ ಲೇಖನಗಳು ಪುರುಷರು, ಮಹಿಳೆಯರು ಹಾಗೂ ಎಲ್ಲ ವಯೋಮಾನದವರಿಗೂ ಉಪಯುಕ್ತವಾಗಿವೆ. ಇಂದಿನ ದಿನಗಳಲ್ಲಿ ಸಾಮಾನ್ಯವಾಗಿರುವ ಸ್ತನ ಕ್ಯಾನ್ಸರ್, ಹೈಪೋಥೈರಾಯಿಡಿಸಮ್‌ನಂತಹ ಕಾಯಿಲೆಗಳು, ಮತ್ತು ಜಲೋದರ, ಪ್ಯಾಂಕ್ರಿಯಾಟೈಟಿಸ್‌ನಂತಹ ಸಾಮಾನ್ಯವಲ್ಲದ ರೋಗಗಳ ಕುರಿತಾದ ಮಾಹಿತಿಯನ್ನೊಳಗೊಂಡಿದ್ದು, ಅವುಗಳನ್ನು ಆರಂಭಿಕ ಹಂತದಲ್ಲೇ ಹೇಗೆ ಗುರುತಿಸಬಹುದೆಂಬುದನ್ನು ವಿವರಿಸಿರುವುದು ಬಹಳ ಉತ್ತಮ ಅಂಶ. ಈ ಲೇಖನಗಳು ನಮ್ಮ ದೇಹ, ರೋಗ ಹಾಗೂ ಆರೋಗ್ಯದ ಬಗ್ಗೆ ಹೆಚ್ಚಿನ ಜ್ಞಾನ ನೀಡುತ್ತವೆ ಜೊತೆಗೆ, ನಾವು ರೂಢಿಸಿಕೊಂಡ ಜಂಕ್ ಫುಡ್‌ಗಳ ಬಗ್ಗೆ ತಲೆಮೊಟಕಿ ಎಚ್ಚರಿಸುತ್ತವೆ. ಮಹಿಳೆಯರ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಕುರಿತಾದ ಲೇಖನಗಳೂ ಇವೆ. ನಾವು ನಮ್ಮ ದಿನಚರಿ, ಆಹಾರಕ್ರಮಗಳನ್ನು ಅವಲೋಕಿಸಿಕೊಂಡು, ಎಚ್ಚೆತ್ತುಕೊಳ್ಳುವಂತೆ ಮಾಡುವ ಪುಸ್ತಕವಿದು.
ಎಡ ಬಲ arrow key ಗಳನ್ನು ಬಳಸಿ ಅಥವಾ ಸ್ವೈಪ್ ಮಾಡುವುದರ ಮೂಲಕ ಸ್ಲೈಡ್ಸ್ ಅನ್ನು ನೋಡಿ
choosing a selection results in a full page refresh
press the space key then arrow keys to make a selection