ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಇಂಗ್ಲಿಷ್ ಭಾಷೆಯ ಪದಗಳಲ್ಲಿ ಸಾಮಾನ್ಯ ಅರ್ಥಕ್ಕಿಂತ ವಿಶಿಷ್ಟ ಅರ್ಥ ಕೊಡುವ ಪದಗಳು, ಪದಗುಚ್ಛಗಳು ಮತ್ತು ಗಾದೆಗಳು ವಿಪುಲವಾಗಿವೆ. ಇಂತಹ ವಿಶಿಷ್ಟ ಪದಗಳ ಅರ್ಥಗೊತ್ತಿಲ್ಲದೆ ಅವುಗಳನ್ನು ಬಳಸಲು ಹೋಗಿ ನಗೆಪಾಟಲಿಗೆ ಈಡಾಗಿರುವ, ಎಡವಟ್ಟುಗಳಾಗಿರುವ ಉದಾಹರಣೆಗಳು ಸಾಕಷ್ಟಿವೆ. ಸಾಮಾನ್ಯ ಪದಕೋಶಗಳಲ್ಲಿ ದೊರೆಯುವ ಅರ್ಥ ಅಥವಾ ಪದಗಳಿಗೆ ಬಿಡಿಬಿಡಿಯಾಗಿ ಕೊಟ್ಟಿರುವ ಅರ್ಥಕ್ಕಿಂತ ಪದಗುಚ್ಛಕ್ಕೆ ಬೇರೆಯದೇ ಆದ ಅರ್ಥ ಮತ್ತು ವ್ಯಾಪ್ತಿ ಇರುತ್ತದೆ. ಈ ಒಳಾರ್ಥವೇ ನುಡಿಯ ಗುಟ್ಟು! ಗಾದೆಗಳಿಗೂ (Proverbs) ಈ ಮಾತು ಅನ್ವಯಿಸುತ್ತದೆ.
ಸುಲಭ ಇಂಗ್ಲಿಷ್ ಸರಣಿಯ ಪುಸ್ತಕವಾಗಿ ಪ್ರಕಟಿಸಲು ‘ಗಾದೆಗಳ ವಿವರಣಾತ್ಮಕ ಕೋಶ’ವೊಂದನ್ನು ಸಿದ್ಧಪಡಿಸಲು ನವಕರ್ನಾಟಕ ಪ್ರಕಾಶನದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಶ್ರೀ ಆರ್. ಎಸ್. ರಾಜಾರಾಮ್ ಅವರು ಕೆಲವು ವರ್ಷಗಳ ಹಿಂದೆಯೇ ಸೂಚಿಸಿದ್ದರು. ಎಷ್ಟೇ ಪ್ರಯತ್ನಿಸಿದರೂ ಈ ಪ್ರಯತ್ನ ಮುಂದುವರೆದಿರಲಿಲ್ಲ. ಇದೀಗ ಪ್ರಜಾವಾಣಿಯ ಶಿಕ್ಷಣ ವಿಶೇಷ ದಿನಪತ್ರಿಕೆ ‘ಸಹಪಾಠಿ’ಗಾಗಿ ‘ಇಂಗ್ಲಿಷ್ ಬ್ರಿಜ್ ಕೋರ್ಸ್’ ಸರಣಿ ಲೇಖನಗಳನ್ನು ಬರೆಯುವ ಸಂದರ್ಭದಲ್ಲಿ ಪದಗಳ ಅಧ್ಯಯನವನ್ನೇ ಗುರಿಯಾಗಿಸಿಕೊಂಡು, ಪದಪ್ರಪಂಚದ ವಿಸ್ಮಯಗಳನ್ನು ಅವಲೋಕಿಸುತ್ತಾ ಹೋದಂತೆ ‘ನುಡಿಗಟ್ಟು ಮತ್ತು ಪಡೆನುಡಿ’ಗಳ ಜೊತೆ ಗಾದೆಗಳ ಅರ್ಥ ಅನಾವರಣಗೊಳ್ಳತೊಡಗಿತು. ಅವುಗಳಲ್ಲಿ ಕೆಲವು ಭಾಗಗಳನ್ನು ಈ ಕೋಶದಲ್ಲಿ ಸಂಕಲಿಸಿ ನೀಡಲಾಗಿದೆ.
- ಬೇದ್ರೆ ಮಂಜುನಾಥ
ಪುಟಗಳು: 88
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !