ಪ್ರಕಾಶಕರು: ಉದಯರವಿ ಪ್ರಕಾಶನ
Publisher: Udayaravi Prakashana
ಪುಸ್ತಕವೊಂದಕ್ಕೆ ಮುನ್ನುಡಿಯೆಂಬುದು ಮೋಟಾರುವಾಹನವೊಂದಕ್ಕೆ ಹೋರ್ನ್ (Horn) ಇದ್ದಂತೆ. ಎರಡೂ ಮುಂಭಾಗದಲ್ಲಿರುತ್ತವೆ. ತಮ್ಮೊಡನೆ ಏನು ಬರುತ್ತಿದೆ ಎನ್ನುವುದರ ಸೂಚನೆಯನ್ನು ಎರಡೂ ಕೊಡಬಲ್ಲುವು ; ಆದರೆ ತಮ್ಮೊಡ ನಿರುವುದನ್ನು ಎಳೆದೊಯ್ಯುವ ಸಾಮರ್ಥ್ಯ ಎರಡಕ್ಕೂ ಇಲ್ಲ. ಸಣ್ಣ ವಾಹನಕ್ಕೆ ದೊಡ್ಡ ಹೋರ್ನ್ ಮತ್ತು ದೊಡ್ಡ ವಾಹನಕ್ಕೆ ಸಣ್ಣ ಹೋರ್ನ್ ಕೆಲವೊಮ್ಮೆ ಇರುವಂತೆ ಸಣ್ಣ ಪುಸ್ತಕಕ್ಕೆ ದೊಡ್ಡ ಮುನ್ನುಡಿಯೂ ದೊಡ್ಡ ಪುಸ್ತಕಕ್ಕೆ ಸಣ್ಣ ಮುನ್ನುಡಿಯೂ ಇರುವುದಿದೆ. ಆದರೆ ಈ ಸಣ್ಣ ವಾಹನಕ್ಕೆ ಸಣ್ಣ ಹೋರ್ನ್ ಸಾಕೆಂದು ಭಾವಸಿದ್ದೇನೆ.
ಕವಿತೆಗಳ ವಸ್ತು ಮೃಣ್ಮಯ ವಾಸನೆಯಿಂದ ಚಿನ್ಮಯ ಉಪಾಸನೆಯ ವರೆಗೆ ಹರಡಿರಬಹುದು. ಈ ಕವನಸಂಗ್ರಹದ ಹೆಚ್ಚಿನ ಕವಿತೆಗಳ ವಸ್ತು ಎಂಜಿನಿಯರಿಂಗ್ ಮತ್ತು ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದವುಗಳು. ವೈಜ್ಞಾನಿಕ ತತ್ವಗಳು, ಎಂಜಿನಿಯರಿಂಗ್ ಸಾಧನ ಮತ್ತು ಸಾಧನೆಗಳು, ವೈಜ್ಞಾನಿಕತೆ ಮತ್ತು ಮಾನ ವೀಯತೆಗಳ ನಡುವಿರುವ ಸಾಮ್ಯ ಮತ್ತು ಸಂಬಂಧಗಳು ಇಲ್ಲಿ ಕವನರೂಪದಲ್ಲಿವೆ. ಪರಮಾಣುವಿನ ಎಲೆಕ್ಟ್ರಾನ್ ಮತ್ತು ಪರಮಾತ್ಮನ ಗುಣಲಕ್ಷಣ ಸಾಮ್ಯಗಳು, ವಿಶ್ವವೆಲ್ಲವೂ ಮಾಯೆಯೆಂದು ವಿಜ್ಞಾನಿ ಮತ್ತು ತತ್ವಜ್ಞಾನಿಗಳಿಬ್ಬರೂ ನಿರ್ಧಾರಕ್ಕೆ ಬಂದುದು, ವಿದ್ಯುತ್ತು ಮತ್ತು ವಿದ್ವತ್ತುಗಳ ನಡುವಣ ಸಾಮ್ಯ, ಮಾನವನಿಗೆ ಧರ್ಮ ಮತ್ತು ವಿಜ್ಞಾನಗಳೆರಡರ ಆವಶ್ಯಕತೆ, ಪಾರ್ಥೇನಿಯಂ ಹುಲ್ಲಿಂದ ಕಾಗದ, ಪೆಟ್ರೋಲಿನ ಬದಲು ಆಲ್ಕೋಹಾಲಿನ ಬಳಕೆ, ಭಸ್ಮಾಸುರನನ್ನು ಹೋಲುವ ಅಣುಶಕ್ತಿ, ಯಮನ ವಿರುದ್ಧ ಎಂಜಿನಿಯರುಗಳ ವಿಜಯ-ಈ ರೀತಿಯ ವಿಷಯಗಳು ಇಲ್ಲಿ ಕವನರೂಪ ತಾಳಿವೆ.
ಪುಟಗಳು: 56
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !