ಪ್ರಕಾಶಕರು: ಬಹುರೂಪಿ ಪ್ರಕಾಶನ
Publisher: Bahuroopi Prakashana
ರೈತ ಸಾಯುತ್ತಿರುವ ಸುದ್ದಿ, ಬೆಳೆಗಳಿಗೆ ಸರಿಯಾದ ಬೆಲೆ ಸಿಗದಿರುವ ಸುದ್ದಿ, ಕೃಷಿ ಸಂಕಟದಲ್ಲಿರುವ ಸುದ್ದಿಗಳ ಬೆನ್ನಿಗೇ ಏಕಾಏಕಿ ಕೃಷಿ ಆದಾಯವನ್ನು ದೇಶದಲ್ಲಿ 2022ರ ಹೊತ್ತಿಗೆ ದುಪ್ಪಟ್ಟು ಮಾಡುವ ತೀರ್ಮಾನದ ಬಗ್ಗೆ ಸರ್ಕಾರ ಪ್ರಕಟಿಸಿದೆ .
ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ನಮ್ಮ ಸಮಸ್ಯೆಗಳು ಒಂದೆರಡು ವರ್ಷದವು ಅಲ್ಲ, ಅದಕ್ಕೆ ನಾವು ಒಂದು ಪರಿಹಾರವನ್ನು ಕಂಡುಕೊಳ್ಳುವ ಪ್ರಯತ್ನವನ್ನು ಬಿಟ್ಟುಕೊಟ್ಟೂ ಇಲ್ಲ. ಆದರೆ ಈಗ ಸರಕಾರ ರೈತರ ಆದಾಯವನ್ನು ದುಪ್ಪಟ್ಟು ಮಾಡಹೊರಟಿರುವ ಸ್ಪಷ್ಟ ಗುರಿಯ ಸಂದರ್ಭದಲ್ಲಿ ಅದರ ರೂಪುರೇಷೆಗಳನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯವಾಗುತ್ತದೆ.
ಕೃಷಿಯ ವಿಷಯಕ್ಕೆ ಬಂದರೆ ನಾವು “ಯಶಸ್ವಿ” ಎಂದು ಪರಿಗಣಿಸಬಹುದಾದ ಕಾರ್ಯಕ್ರಮ ಗ್ರೀನ್ ರೆವಲ್ಯೂಷನ್ ಅಥವಾ ಹಸಿರು ಕ್ರಾಂತಿಯದ್ದು. ಅದು ಸರಕಾರದ ನೀತಿಯನ್ನು ಅನುಸರಿಸಿ ಪಡೆದ ಸಾಫಲ್ಯ. ಅದು ಸುಸ್ಥಿರತೆಯ ದೃಷ್ಟಿಯಿಂದ ಸಫಲವಾಯಿತೋ ಇಲ್ಲವೋ ಎಂಬುದನ್ನು ಬದಿಗಿಟ್ಟು ನೋಡಿದರೆ, ಕೃಷಿಯ ಆರ್ಥಿಕತೆ, ಉತ್ಪಾದಕತೆಯನ್ನು ಹೆಚ್ಚಿಸಿ ನಾವು ಆಹಾರದ ವಿಷಯಕ್ಕೆ ಆತ್ಮನಿರ್ಭರತೆ ಪಡೆಯುವಲ್ಲಿ ಅದು ಗೆದ್ದಿತು ಅನ್ನುವುದರಲ್ಲಿ ಅನುಮಾನವಿಲ್ಲ. ಈಗ ರಾಜಾರಾಂ ಅವರು ವಿವರವಾಗಿ ಪರಿಶೀಲಿಸುತ್ತಿರುವ ಸರಕಾರದ ಘೋಷಣೆಗಳು ಮತ್ತು ತತ್ಸಂಬಂಧಿ ನೀತಿ ರೂಪಕಲ್ಪನೆಯನ್ನು ಮೌಲ್ಯಮಾಪನ ಮಾಡಲು ನಾವು ಹಸಿರು ಕ್ರಾಂತಿಯ ಕೆಲವು ಅಂಶಗಳನ್ನು ಪರಿಶೀಲಿಸಿದರೆ - ಎರಡರ ದಾರಿ ಎಷ್ಟು ಭಿನ್ನ ಎನ್ನುವುದು ಗೊತ್ತಾಗುತ್ತದೆ. ಹಾಗೇ ಅದರ ಪರಿಣಾಮಗಳೂ ಭಿನ್ನವಾಗಿರಬಹುದು ಎನ್ನುವುದನ್ನು ರಾಜಾರಾಂ ತಮ್ಮ ಸಶಕ್ತ ವಾದಗಳ ಮೂಲಕ ಮಂಡಿಸುತ್ತಾರೆ.
ಕಾಲ ಬದಲಾಗಿದೆ. ಹಸಿರು ಕ್ರಾಂತಿಯ ನೀತಿಗಳು ಇಂದಿಗೆ ವರ್ತಿಸುವುದಿಲ್ಲ, ನಿಜ. ಆದರೆ ಸರಕಾರಗಳು ಕ್ರಮಿಸಬೇಕಾದ ದಾರಿ ಯಾವುದು? ಅದರಲ್ಲಿ ಕೋಟ್ಯಂತರ ಸಂಖ್ಯೆಯಲ್ಲಿ ಬಡವರಾಗಿಯೇ ಉಳಿದಿರುವ ರೈತರ ಪರಿಸ್ಥಿತಿ ಏನು? ಎನ್ನುವ ಆಳ ಪ್ರಶ್ನೆಗಳನ್ನು ರಾಜಾರಾಂ ಎತ್ತುತ್ತಾರೆ. ಇದು ಒಂದು ವಿಸ್ತೃತ ಚರ್ಚೆಗೆ ಪೀಠಿಕೆಯಷ್ಟೇ.
ಪುಟಗಳು: 96
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !